Advertisement
ಜಿಲ್ಲೆಯಲ್ಲಿ 64,767 ಫಲಾನುಭವಿಗಳ ಪೈಕಿ 64,405 ಮಂದಿಯ ಮನ್ನಾ ಹಣ ಪಾವತಿಯಾಗಿದೆ. ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕ್‌ಗೆ, ಅಲ್ಲಿಂದ ಫಲಾನುಭವಿ ರೈತ ಖಾತೆ ಹೊಂದಿರುವ ಸಹಕಾರಿ ಸಂಘಕ್ಕೆ ಜಮೆಗೊಂಡಿದೆ. ಇದರಲ್ಲಿ 362 ಫಲಾನುಭವಿಗಳ ಹಣ ಸಹಕಾರ ಬ್ಯಾಂಕುಗಳಿಗೆ ಬಿಡುಗಡೆಯಾಗಲು ಬಾಕಿ ಇದೆ.
ಮಂಗಳೂರು ತಾಲೂಕಿನಲ್ಲಿ 3,809 ಮಂದಿ ರೈತರ 17.29 ಕೋ.ರೂ., ಬಂಟ್ವಾಳದಲ್ಲಿ 14,992 ರೈತರ 68.08 ಕೋ.ರೂ., ಬೆಳ್ತಂಗಡಿಯಲ್ಲಿ 15,389 ರೈತರ 69.88 ಕೋ.ರೂ., ಪುತ್ತೂರಿನಲ್ಲಿ 17,309 ರೈತರ 78.61 ಕೋ.ರೂ., ಸುಳ್ಯದಲ್ಲಿ 13,268 ರೈತರ 60.24 ಕೋ.ರೂ. ಸಾಲ ಮನ್ನಾಕ್ಕೆ ಅರ್ಹತೆ ಹೊಂದಿತ್ತು. ಪಾವತಿ ವಿವರ
ಮಂಗಳೂರು ತಾಲೂಕಿನಲ್ಲಿ 3,788 ರೈತರ 17.19 ಕೋ.ರೂ., ಬಂಟ್ವಾಳದಲ್ಲಿ 14,909 ರೈತರ 67.67 ಕೋ.ರೂ., ಬೆಳ್ತಂಗಡಿಯಲ್ಲಿ 15303 ರೈತರ 69.45 ಕೋ.ರೂ., ಪುತ್ತೂರಿನಲ್ಲಿ 17,213 ರೈತರ 78.12 ಕೋ.ರೂ., ಸುಳ್ಯದಲ್ಲಿ 13,192 ರೈತರ 59.87 ಕೋ.ರೂ.ಸಾಲ ಮನ್ನಾ ಹಣ ಪಾವತಿಸಲಾಗಿದೆ ಎಂದು ಸಹಕಾರಿ ಸಂಘದ ನಿರೀಕ್ಷಕ ಕಚೇರಿ ಮಾಹಿತಿ ನೀಡಿದೆ.
362 ಮಂದಿಗೆ ಬಾಕಿ
ಮಂಗಳೂರು ತಾಲೂಕಿನಲ್ಲಿ 21 ರೈತರ 10.61 ಲ.ರೂ., ಬಂಟ್ವಾಳದಲ್ಲಿ 83 ರೈತರ 41.78 ಲ.ರೂ., ಬೆಳ್ತಂಗಡಿಯಲ್ಲಿ 86 ರೈತರ 42.87 ಲ. ರೂ., ಪುತ್ತೂರಿನಲ್ಲಿ 96 ರೈತರ 48.25 ಲ. ರೂ., ಸುಳ್ಯದಲ್ಲಿ 76 ರೈತರ 36.96 ಲ. ರೂ. ಸಾಲ ಮನ್ನಾ ಹಣ ಪಾವತಿಗೆ ಬಾಕಿ ಇದೆ.
Related Articles
ಜಿಲ್ಲೆಯಲ್ಲಿ ಒಟ್ಟು 362 ರೈತರ ಸಾಲ ಮನ್ನಾ ಮೊತ್ತ ಪಾವತಿಯಾಗಲು ಬಾಕಿ ಇದೆ. ಜಿಲ್ಲಾ ಸಹಕಾರ ಸಂಘಗಳ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಸರಕಾರದಿಂದ ಎಲ್ಲ ಹಣ ಬಿಡುಗಡೆ ಆಗಿದ್ದು, ಅಪೆಕ್ಸ್ ಬ್ಯಾಂಕ್‌ನಿಂದ ಸಹಕಾರ ಬ್ಯಾಂಕ್‌ಗಳಿಗೆ ಬಿಡುಗಡೆ ಬಾಕಿ ಇದೆ. ಮನ್ನಾ ಆದ ಹಣ ಖಾತೆಗೆ ಜಮೆ ಆಗದೆ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ಫಲಾನುಭವಿ ಕೃಷಿಕರದು. ಸರಕಾರ ಸಾಲ ಮನ್ನಾ ಮಾಡಿದ ಮೇಲೆ ಫಲಾನುಭವಿ ಖಾತೆಗೆ ಹಣ ಪಾವತಿ ಆದ ಅನಂತರವೇ ನಾವು ಹೊಸ ಸಾಲ ಕೊಡಬಹುದು. ಇಲ್ಲದಿದ್ದರೆ ಅಷ್ಟು ಫಂಡ್ ಬೇಕಲ್ಲವೇ ಎನ್ನುವುದು ಸಹಕಾರ ಬ್ಯಾಂಕ್‌ನ ಅಭಿಪ್ರಾಯ.
Advertisement
ಬಿಡುಗಡೆಗೆ ಆಗಿದೆಸರಕಾರದಿಂದ ಎಲ್ಲ ಹಣ ಬಿಡುಗಡೆಗೊಂಡಿದೆ. ಅಪೆಕ್ಸ್ ಬ್ಯಾಂಕ್‌ಗೆ ಬಂದಿದೆ. ಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳಿಂದ ಒಂದು ವರದಿ ಕಳುಹಿಸಿದ ತತ್‌ಕ್ಷಣ ಸಹಕಾರಿ ಬ್ಯಾಂಕ್‌ಗಳಿಗೆ ಪಾವತಿ ಆಗಲಿದೆ. ಸಣ್ಣ ಮೊತ್ತವಷ್ಟೆ ಬಾಕಿ ಇದೆ.
ಬಿ.ಕೆ. ಸಲೀಂ,ಜಿಲ್ಲಾ ಉಪನಿಬಂಧಕ ಸಹಕಾರಿ ಸಂಘ, ಮಂಗಳೂರು ಕಿರಣ್ ಪ್ರಸಾದ್ ಕುಂಡಡ್ಕ