Advertisement

ವಿಎಸ್‌ಎಸ್‌ಎನ್‌ನಿಂದ 730ರೈತರಿಗೆ ಸಾಲ: ಪಾಟೀಲ

01:48 PM Sep 25, 2022 | Team Udayavani |

ಆಳಂದ: ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ಅಡಿಯಲ್ಲಿ 730ರೈತರಿಗೆ ತಲಾ 25ಸಾವಿರ ರೂ. ಸಾಲ ನೀಡಲಾಗಿದ್ದು, ಆರು ಸಾವಿರ ರೂ. ಪ್ರಸ್ತುತ ವರ್ಷ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಭಾರತ ಆರ್‌. ವಿಭೂತಿ ಪಾಟೀಲ ಹೇಳಿದರು.

Advertisement

ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ ಇನ್ನೂ ಹೆಚ್ಚಿನ ಲಾಭಗಳಿಸಲು ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮುರಪಾವತಿಸಿ ಮತ್ತೆ ಮರು ಸಾಲ ಪಡೆದುಕೊಳ್ಳಬೇಕು. ಸಂಘದಲ್ಲಿ ಹೆಚ್ಚಿನ ರೀತಿಯಲ್ಲಿ ಠೇವಣಿ ಸಂಗ್ರಹ ನಡೆಯಲಿ. ಹೆಚ್ಚಿನ ರೈತರು ಸದಸ್ಯತ್ವ ಮಾಡಿಸಲಿ. ಈ ಬಾರಿ ಹೊಸಬರಿಗೂ ಸಾಲ ನೀಡಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್‌ ಸ್ಥಳೀಯ ಶಾಖೆ ವ್ಯವಸ್ಥಾಪಕ ರಾಜು ಕೋರೆ ನಿರಗುಡಿ ಮಾತನಾಡಿ, ಬ್ಯಾಂಕ್‌ನೊಂದಿಗೆ ರೈತರ ಉತ್ತಮ ವ್ಯವಹಾರ ಹೊಂದಿದರೆ ಬ್ಯಾಂಕಿನ ಜೊತೆಗೆ ರೈತರಿಗೂ ಅನುಕೂಲವಾಗಲಿದೆ ಎಂದರು.

ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ವಾರ್ಷಿಕ ಮಹಾಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷ ಶಿವಾನಂದ ಬಿ. ನಾಗೂರೆ, ನಿರ್ದೇಶಕರಾದ ಪಂಡಿತ ಶೇರಿಕಾರ, ಕಲ್ಲಪ್ಪ ಹತ್ತರಕಿ, ಬಸವರಾಜ ಪಾಟೀಲ, ಹಣಮಂತರಾವ್‌ ಪಾಟೀಲ ಮತ್ತಿತರರು ಮಾತನಾಡಿದರು.

ನಿರ್ದೇಶಕ ಶಿವಶರಣ ನಾಗದೆ, ಶಶಿಕಲಾ ಪಾಟೀಲ, ಮಹಾಂತೇಶ ಡೊಳ್ಳೆ ವಿಜಯಬಾಯಿ ಸರಸಂಬಿ, ಕಿಶನ್‌ ರಾಠೊಡ, ರೈತ ರವಿಂದ್ರ ಕೊರಳ್ಳಿ, ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಸೋಮು ಹತ್ತರಕಿ, ಮಾಜಿ ಸದಸ್ಯ ಲಿಂಗರಾಜ ಪಾಟೀಲ, ಸಂಘದ ಮಾಜಿ ಅಧ್ಯಕ್ಷ ಶಂಕರರಾವ್‌ ಹತ್ತಿ, ಶೇಖರ ಬುಕ್ಕೆ ಹಾಗೂ ಸಂಘದ ಸದಸ್ಯರು, ಸಿಬ್ಬಂದಿ ನಟರಾಜ ಸರಸಂಬಿ, ಲಾಡಪ್ಪ ಕಟಕೆ ಇದ್ದರು. ನಿರ್ದೇಶಕ ಮಹಾಂತೇಶ ಡೊಳ್ಳೆ ನಿರೂಪಿಸಿದರು. ಕಾರ್ಯದರ್ಶಿ ಮಹಾದೇವ ಎಸ್‌. ಪಾಟೀಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next