Advertisement

Hunsur: ಹುಲಿ ದಾಳಿಗೆ ಹಸು ಬಲಿ; ಹುಲಿ ಸೆರೆಗೆ ರೈತರ ಆಗ್ರಹ

03:47 PM Nov 12, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಅಬ್ಬೂರಿನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ನಡೆದಿದೆ.

Advertisement

ಉದ್ಯಾನದಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ ಮಹಾದೇವ ಶೆಟ್ಟಿ ಅವರಿಗೆ ಸೇರಿದ ಹಸು, ಹುಲಿ ದಾಳಿಗೆ ತುತ್ತಾಗಿದ್ದು, ಅಟ್ಟಣೆಯಲ್ಲಿ ಮಲಗಿದ್ದ ಮಹಾದೇವ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾದೇವ ಶೆಟ್ಟಿ ಅವರು ಗ್ರಾಮದ ಹೊರ ವಲಯದಲ್ಲಿರುವ ತಮ್ಮ ತೋಟದ ಕೊಟ್ಟಿಗೆಯಲ್ಲಿ ಎಂದಿನಂತೆ ಹಸುವನ್ನು ಕಟ್ಟಿ ಹಾಕಿ ಅಟ್ಟಣೆಯಲ್ಲಿ ಮಲಗಿದ್ದರು. ನ.10ರ ಭಾನುವಾರ ರಾತ್ರಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ.

ಹಸುಗಳ ಚೀರಾಟ ಕೇಳಿ ಎಚ್ಚರಗೊಂಡ ಮಹಾದೇವ ಶೆಟ್ಟಿ ಕೂಗಾಟ ನಡೆಸಿದ ವೇಳೆ ಅವರ ಮೇಲೆಯೂ ಹುಲಿ ಎಗರಿದೆ. ಹುಲಿ ಕಂಡ ಇವರು ಕೊಟ್ಟಿಗೆಯ ಬಾಗಿಲು ಹಾಕಿಕೊಂಡ ಪರಿಣಾಮ ಪ್ರಾಣಪಾಯದಿಂದ ಪಾರಾದೆ ಎನ್ನತ್ತಾರೆ  ಮಹಾದೇವ ಶೆಟ್ಟಿ.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಮಧ್ಯರಾತ್ರಿಯೇ ಅರಣ್ಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳದ ಸುತ್ತಮುತ್ತಲಿನಲ್ಲಿ ಪಟಾಕಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಹುಲಿಯನ್ನು ಸಮೀಪದ ಅರಣ್ಯಕ್ಕೆ ಓಡಿಸಿದ್ದಾರೆಂದು ಮಹಾದೇವ ಶೆಟ್ಟಿ ತಿಳಿಸಿದ್ದಾರೆ.

Advertisement

ಆಗಾಗ ಕಾಣಿಸಿಕೊಳ್ಳುವ ಹುಲಿ:

ಕಳೆದೆರಡು ತಿಂಗಳಿನಿಂದ ಶೆಟ್ಟಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಬೀಡು ಬಿಟ್ಟಿದ್ದು, ಕಾಡಂಚಿನ ಗ್ರಾಮಗಳಲ್ಲಿ ಆಗಾಗ್ಗೆ  ಹುಲಿ ಕಾಣಿಸಿಕೊಂಡು ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿದೆ. ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಆಗಿಂದಾಗ್ಗೆ ಹುಲಿ ದಾಳಿಯಿಟ್ಟು ಈ ಭಾಗದ ಗ್ರಾಮಸ್ಥರನ್ನು ಭಯ ಭೀತರಾಗುತ್ತಿದ್ದಾರೆ.

ಹುಲಿ ಸೆರೆಗೆ ಆಗ್ರಹ:

ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾ.ಪಂ.ಅಧ್ಯಕ್ಷೆ ಗೀತಾ ಸುರೇಶ್ ಹಾಗೂ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next