ಕೋವಿಡ್ ಸೋಂಕಿನಿಂದ ಎಂಥಾ ಪರಿಸ್ಥಿತಿ ಎದುರಾಗಿದೆ ಎಂದರೆ, ಯಾವ ರೀತಿಯಲ್ಲಿ ಹಣ ಉಳಿಸುವ ಮಾರ್ಗವಿದೆ ಎಂಬ ಬಗ್ಗೆ ಯೋಚಿಸಿದಷ್ಟು ಸಾಕಾಗದೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂಕಷ್ಟಮಯ ಸನ್ನಿವೇಶದಲ್ಲಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ರೀತಿಯ ಸಾಲಗಳ ಮೇಲಿನಕಂತು ಪಾವತಿ ಮೇಲೆ ರಿಯಾಯಿತಿ ತೋರಿಸಿತ್ತು. ಜತೆಗೆ ಹಲವು ಕಂಪನಿಗಳು ವೇತನಕಡಿತ ಮಾಡಿದ್ದವು. ಅದರಿಂದ ಉಂಟಾದ ಪರಿಸ್ಥಿತಿ ಹೇಳ ತೀರದ್ದು. ಈ ಉದ್ದೇಶಕ್ಕಾಗಿಯೇ ಆ.6ರಂದು ಬ್ಯಾಂಕ್‌ಗಳಿಗೆ ಸಾಲ ಪುನರ್ ರಚನೆ ಬಗ್ಗೆ ಸುತ್ತೋಲೆ ಹೊರಡಿಸಿತ್ತು.
ಯಾಕೆ ಈ ಯೋಜನೆ? :
- ಸೋಂಕಿನ ಪ್ರಭಾವದಿಂದಾಗಿ ಸಾವಿರಾರು ಮಂದಿಗೆ ಉದ್ಯೋಗ ನಷ್ಟವಾಗಿದೆ.
- ಸ್ವಂತ ಉದ್ಯೋಗ ಮಾಡುವವರಿಗೆ ನಿರೀಕ್ಷಿತ ಆದಾಯಕ್ಕೂ ಪೆಟ್ಟು ಬಿದ್ದಿತ್ತು. ಹೀಗಾಗಿ, ತಾತ್ಕಾಲಿಕ ಪರಿಹಾರ ಎಂಬಂತೆ ಆರು ತಿಂಗಳ ಕಾಲ ಇಎಂಐ ಪಾವತಿ ಮಾಡುವುದರ ಮೇಲೆ ವಿನಾಯಿತಿ ನೀಡಲಾಗಿತ್ತು. ಅದು ಆ.31ಕ್ಕೆ ಮುಕ್ತಾಯವಾಗಿದೆ.
- ಎಲ್ಲಾ ರೀತಿಯ ಸಾಲಗಳಿಗೆ ಈ ಸೌಲಭ್ಯ ವಿಸ್ತರಿಸಲಾಗಿತ್ತು. ಆದರೆ ಕೆಲವು ಗ್ರಾಹಕರಿಗೆ ಅದನ್ನು ಅನಿರ್ಧಿಷ್ಟಾವಧಿಗೆ ಹೊಂದಲು ಸಾಧ್ಯವಾಗದೇ ಹೋಯಿತು. ಹೀಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್, ವೈಯಕ್ತಿಕ ಸಾಲ ಗ್ರಾಹಕರಿಗಾಗಿ ಸಾಲ ಪುನರ್ ರಚನೆ ನಿಯಮ ಜಾರಿಗೊಳಿಸಿತು.
ಸಾಲ ಪುನರ್ ರಚನೆ ಎಂದರೇನು? :
ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಪಡೆದುಕೊಂಡ ಸಾಲವನ್ನು ಮರು ಪಾವತಿ ಮಾಡಬೇಕಾಗುತ್ತದೆ.ಕೊರೊನಾ ತಂದಿಟ್ಟ ಪರಿಸ್ಥಿತಿಯಿಂದಾಗಿ ಸಾವಿರಾರು ಮಂದಿಗೆ ಪಡೆದುಕೊಂಡ ಸಾಲವನ್ನು ವಾಪಸ್ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಹೀಗಾದರೆ, ಹಣಕಾಸು ಸಂಸ್ಥೆಗಳಿಗೂ ಸರಾಗವಾಗಿ ಹಣದ ಹರಿವಿಗೆ ತೊಂದರೆ ಉಂಟಾಗುತ್ತದೆ. ಈ ವ್ಯವಸ್ಥೆಯಲ್ಲಿ ಸಾಲ ಮರು ಪಾವತಿಗೆ ಹೆಚ್ಚಿನ ಅವಧಿ,ಕಡಿಮೆ ಬಡ್ಡಿದರ, ಸಾಲದ ನಿಯಮಗಳಲ್ಲಿ ಬದಲಾವಣೆ, ಸಾಲದ ಮೊತ್ತದಲ್ಲಿ ಒಂದಷ್ಟು ಭಾಗವನ್ನು ಮಾತ್ರ ಪಾವತಿಸುವುದು (ಬ್ಯಾಂಕಿಂಗ್‌ಕ್ಷೇತ್ರದಲ್ಲಿ ಅದನ್ನು ಹೇರ್‌ಕಟ್ ನಿಯಮ ಎನ್ನುತ್ತಾರೆ). ಸುಲಭವಾಗಿ ವಿವರಿಸುವುದಿದ್ದರೆ100 ರೂ. ಸಾಲ ಪಡೆದುಕೊಂಡವ, ಸಂಕಷ್ಟದ ಸ್ಥಿತಿಯಿಂದಾಗಿ 80 ರೂ. ಪಾವತಿಸುವಂತೆ ಮಾಡಲು ಸೂಚಿಸುವುದು. ಇಲ್ಲಿ20 ರೂ. ಮನ್ನಾ ಮಾಡಲಾಗುತ್ತದೆ. ಈ ಎಲ್ಲಾ ನಿಯಮಗಳನ್ನೂ ಸೇರಿಸಿದ ವ್ಯವಸ್ಥೆ ಜಾರಿ ಮಾಡಲು ಇಲ್ಲಿ ಅವಕಾಶ ಉಂಟು.
ಅನುಕೂಲವೇನು? : ಸಾಲ ಪಡೆದುಕೊಂಡ ವ್ಯಕ್ತಿಯನ್ನು ಸಾಲ ಪಾವತಿ ಮಾಡದೇ ಇರುವಾತ ಎಂದು ಘೋಷಣೆ ಮಾಡುವಂತಿಲ್ಲ. ಆತನ ಸಾಲವನ್ನು ಅನುತ್ಪಾದಕ ಆಸ್ತಿ ( ಎನ್‌ಪಿಎ) ಎಂದು ಘೋಷಿಸಲು ಅವಕಾಶವಿಲ್ಲ.
ಯಾವ ರೀತಿಯ ಸಾಲಗಳಿಗೆ ಅನ್ವಯ? : ಮೊದಲ ಬಾರಿಗೆ ಆರ್‌ಬಿಐನಿಂದ ಸಾಲ ಪುನರ್ ರಚನೆ (ಲೋನ್ ರಿಸ್ಟ್ರಕ್ಚರಿಂಗ್) ಎಂಬ ಪದ ಬಳಕೆ ಮಾಡಿದಾಗ, ಅದು ಪರ್ಸನಲ್ ಲೋನ್ (ವೈಯಕ್ತಿಕ ಸಾಲ)ಗಳಂಥ ಸುರಕ್ಷಿತವಲ್ಲದಸಾಲಗಳಿಗೆ ಅನ್ವಯ ಎಂದು ತಿಳಿದುಕೊಳ್ಳಲಾಗಿತ್ತು. ವಿಶೇಷವಾಗಿ ಗೃಹ ಸಾಲ ಪಡೆದವರಿಗೆ ಅದು ವಿಶೇಷ ತೊಂದರೆಕೊಡುತ್ತದೆ. ಆ.6ರಂದು ಹೊರಡಿಸಲಾದ ಸುತ್ತೋಲೆಯಿಂದ ಗೊಂದಲ ತಿಳಿಯಾಯಿತು.
ಯಾವೆಲ್ಲ ಸಾಲಗಳಿಗೆ ಅನ್ವಯ? :
- ವಾಹನ ಸಾಲ, ಶಿಕ್ಷಣ, ಗೃಹ ನಿರ್ಮಾಣ, ಕ್ರೆಡಿಟ್ ಕಾರ್ಡ್ ಬಾಕಿ ಯಾವುದಕ್ಕೆ ಅನ್ವಯವಿಲ್ಲ?
- ಕೃಷಿ ಉದ್ದೇಶಕ್ಕಾಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ನೀಡಿದ ಸಾಲ. ಕೃಷಿ ಸಾಲ ಎಂದು ಪರಿಗಣಿತವಾಗಿದ್ದರೆ ಅದಕ್ಕೆ ಸಿಗದು ಈ ಸೌಲಭ್ಯ
- ಕೃಷಿ ಸಹಕಾರ ಸಂಘಗಳ ಸಾಲಗಳು.
- ವಿತ್ತೀಯ ಸೇವೆಗಳನ್ನು ನೀಡುವವರು (ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು)
ದಾಖಲೆಗಳನ್ನು ಸಲ್ಲಿಸಬೇಕೆ? :
- ವೇತನದಾರರಿಗೆ ಸ್ಯಾಲರಿ ಸ್ಲಿಪ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್
- ಸ್ವಂತ ಉದ್ಯೋಗ ಮಾಡುವವರಿಗೆ ಉದಯಮ್ ಸರ್ಟಿಫಿಕೇಟ್,ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ವಿವರಗಳು, ಜಿಎಸ್‌ಟಿ ಸಲ್ಲಿಕೆ, ಬ್ಯಾಂಕ್ ಸ್ಟೇಟ್‌ಮೆಂಟ್
ಯಾವುದಕ್ಕೆಲ್ಲ ಅನ್ವಯ? :
ಸರ್ಕಾರಿ ಸ್ವಾಮ್ಯದಬ್ಯಾಂಕ್‌ಗಳು,ಖಾಸಗಿಬ್ಯಾಂಕ್ ಗಳು, ಸ್ಥಳೀಯಬ್ಯಾಂಕ್‌ಗಳು, ಗ್ರಾಮೀಣಬ್ಯಾಂಕ್ ಗಳು, ರಾಜ್ಯ ಸಹಕಾರಿಬ್ಯಾಂಕ್‌ಗಳು, ಜಿಲ್ಲಾ ಕೇಂದ್ರ ಸಹಕಾರಿಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿ)ಗಳು, ಗೃಹ ನಿರ್ಮಾಣ ಕಂಪನಿಗಳು, ಅಖೀಲಭಾರತ ಮಟ್ಟದವಿತ್ತೀಯ ಸಂಸ್ಥೆಗಳು, ದೇಶದಲ್ಲಿ ವ್ಯವಹಾರ ಮಾಡುತ್ತಿರುವ ಇತರ ರಾಷ್ಟ್ರಗಳಬ್ಯಾಂಕ್‌ಗಳಿಗೆ.
ಯಾರು ಅರ್ಹರು? : ಕಡಿಮೆ ವೇತನ ಪಡೆದವರಿಗೆ ಉದ್ಯೋಗ ಕಳೆದುಕೊಂಡವರು ಸ್ವಂತ ಉದ್ಯೋಗ ಮಾಡುವವರಿಗೆ ಎಲ್ಲಾ ರೀತಿಯ ವೈಯಕ್ತಿಕ, ಕಾರ್ಪೊರೇಟ್ ಸಾಲಗಳಿಗೆ ಅನ್ವಯ ನಿಯಮಿತವಾಗಿ ಇಎಂಐಪಾವತಿ ಮಾಡುತ್ತಾ ಇದ್ದವರು.
ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾದೀತೇ? :
- ಇಂಥ ವ್ಯವಸ್ಥೆ ಪಡೆದುಕೊಂಡರೆ ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾದೀತು ಮತ್ತು ಹೊಸ ಸಾಲಗಳನ್ನು ಪಡೆಯುವ ಅರ್ಹತೆಗೆ ತೊಂದರೆಯಾದೀತು.
- ಕ್ರೆಡಿಟ್ ಬ್ಯೂರೋಗಳಿಗೆ ನಿಮ್ಮ ಸಾಲ ಪುನರ್ ರಚನೆಯಾಗಿದೆ ಎಂಬ ವರದಿ ಬ್ಯಾಂಕ್ ಶಾಖೆಗಳಿಂದ ಕಳುಹಿಸಲ್ಪಡುತ್ತದೆ.
- ಒಂದು ಬಾರಿ ಈ ಸೌಲಭ್ಯ ಬಳಸಿದರೂ, ನಿಮ್ಮ ಬ್ಯಾಂಕ್ ಶಾಖೆ ಅದರ ವಿವರವನ್ನು ಕ್ರೆಡಿಟ್ ಬ್ಯೂರೋಗಳಿಗೆ ನೀಡುತ್ತದೆ.
-ಸದಾಶಿವ ಕೆ