ಕಾಪು: ಕೃಷಿಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಪ್ರೋತ್ಸಾಹ ಧನವನ್ನು ನೀಡುವುದರ ಜೊತೆಗೆ ಕೃಷಿಕರಿಗೆ ದನ ಖರೀದಿಗಾಗಿ ಶೇ. 3ರ ಬಡ್ಡಿದರದಲ್ಲಿ ಬೆಳಪು ಸಹಕಾರಿ ಸಂಘದಲ್ಲಿ ಸಾಲ ನೀಡಲಾಗುವುದು. ಕೃಷಿಕರು ಸ್ವಸಹಾಯ ಸಂಘಗಳ ಮೂಲಕ ವಿವಿಧ ರೀತಿಯ ಹೈನುಗಾರಿಕೆ ನಡೆಸಲೂ ಅವಕಾಶ ಇದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಬೆಳಪು ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಜರಗಿದ ಬೆಳಪು ಹಾಲು ಉತ್ಪಾದಕರ ಸಂಘದ 29ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ, ಅತೀ ಹೆಚ್ಚು ಹಾಲು ಪೂರೈಸುವ ಹೆ„ನುಗಾರರಿಗೆ ಒಕ್ಕೂಟದ ಮೂಲಕ ಕೊಡಮಾಡಲಾದ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಗಮನವಿರಿಸಿ 29 ವರ್ಷಗಳ ಹಿಂದೆ ಗ್ರಾಮದ ಹಿರಿಯರ ನೇತƒತ್ವದಲ್ಲಿ ಸ್ಥಾಪನೆಯಾದ ಬೆಳಪು ಹಾಲು ಉತ್ಪಾದಕರ ಸಂಘವು ಇಂದು ದಿನಕ್ಕೆ 1,100 ಲೀ. ಹಾಲನ್ನು ಪೂರೈಸುವ ಮೂಲಕ ದಾಖಲೆ ನಿರ್ಮಿಸಿದ್ದು, ಇತರ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಒಕ್ಕೂಟದ ವೈದ್ಯಾಧಿಕಾರಿ ಡಾ| ಕೃಷ್ಣ ಮೂರ್ತಿ ಉಪಾಧ್ಯಾಯ ಅವರು ಇಲಾಖಾ ಮಾಹಿತಿ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ನೀಡಿದ ಕೃಷಿಕರನ್ನು ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಕುಂಜೂರು, ಉಪಾಧ್ಯಕ್ಷ ನಿರಂಜನ ಶೆಟ್ಟಿ ಪಣಿಯೂರು, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಯಾದವ ರಾವ್ ಸ್ವಾಗತಿಸಿ, ವರದಿ ವಾಚಿಸಿದರು. ರಾಘವೇಂದ್ರ ಶೆಟ್ಟಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.