Advertisement
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ನ್ಯಾಯಾಧೀಶರಿಗೆ 100 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದ ಆರೋಪದಲ್ಲೂ ಸಿಲುಕಿದ್ದ ಜನಾರ್ದನ ರೆಡ್ಡಿ ಈಗ ಅಂತದ್ದೇ ಮತ್ತೂಂದು ಗಂಭೀರ ಆರೋಪ ಕೇಳಿಬಂದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಚಿನ್ನದ ಗಟ್ಟಿ ರಹಸ್ಯ ಬಯಲಾಗಿದ್ದು ಹೇಗೆ?ಹಣ ದ್ವಿಗುಣಗೊಳಿಸುವ ಆಮಿಷ ಆ್ಯಂಬಿಡೆಂಟ್ ಕಂಪೆನಿಯ ಮೂಲಕ ಸೈಯದ್ ಫರೀದ್ 600 ಕೋಟಿ ವಂಚಿಸಿರುವ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದ್ದು, ಆರೋಪಿ ಫರೀದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆತ ಅಕ್ರಮ ಹಣ ವರ್ಗಾವಣೆ ಸಂಬಂಧ ಜನವರಿ ತಿಂಗಳಲ್ಲಿ ಇ.ಡಿ. ದಾಳಿ ನಡೆಸಿತ್ತು ಎಂಬ ಮಾಹಿತಿ ನೀಡಿದ್ದ. ಇದಾದ ಬಳಿಕ ಬೆಂಗಳೂರಿನ ಚಿಕ್ಕಪೇಟೆಯ ಅಂಬಿಕಾ ಜ್ಯುವೆಲರ್ನ ರಮೇಶ್ ಕೊಠಾರಿ ಅವರ ಅಕೌಂಟ್‌ಗೆ ಫರೀದ್ 17.5 ಕೋಟಿ ರೂ. ಹಾಗೂ 1 ಕೋಟಿ ರೂ. ಚೆಕ್ ರೂಪದಲ್ಲಿ ವರ್ಗಾವಣೆ ಮಾಡಿದ್ದ. ರಮೇಶ್ ಕೊಠಾರಿ, ಫೆ.4ರಿಂದ ಫೆ.15ರವೆರೆಗೆ 7 ಬಾರಿ 57 ಕೆ.ಜಿ. ಚಿನ್ನವನ್ನು ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲ್ಲರ್ನ ರಮೇಶ್‌ಗೆ ನೀಡಿದ್ದ ಸಂಗತಿ ಬಯಲಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಪೊಲೀಸರು ಸೈಯದ್ ಫರೀದ್, ರಮೇಶ್ ಕೊಠಾರಿ, ರಮೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇ.ಡಿ ತನಿಖೆಯಿಂದ ಬಚಾವ್ ಆಗಲು ಫರೀದ್ ಬಿಲ್ಡರ್ ಬ್ರಿಜೇಶ್ ರೆಡ್ಡಿ ಎಂಬಾತನ ಮೂಲಕ ತಾಜ್‌ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಜನಾರ್ದನ ರೆಡ್ಡಿ ಆಪ್ತ ಅಲೀಖಾನ್‌ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ. ಈ ವೇಳೆ ಪ್ರಕರಣದಿಂದ ಬಚಾವ್ ಮಾಡಲು ರೆಡ್ಡಿ 20 ಕೋಟಿ.ರೂ ಬೇಡಿಕೆಯಿಟ್ಟಿದ್ದರು. ಜತೆಗೆ, ನಗದು ಹಣದ ಬದಲಾಗಿ 20 ಕೋಟಿ.ರೂ ಮೌಲ್ಯದ ಚಿನ್ನ ನೀಡುವಂತೆ ರೆಡ್ಡಿ ಷರತ್ತು ವಿಧಿಸಿದ್ದರು ಎಂಬುದು ಬೆಳಕಿಗೆ ಬಂದಿತ್ತು. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಾತುಕತೆಯಂತೆ, ರಮೇಶ್ ಕೊಠಾರಿಯಿಂದ ಚಿನ್ನ ಪಡೆದಿದ್ದ ಬಳ್ಳಾರಿಯ ರಮೇಶ್, ಜನಾರ್ದನ ರೆಡ್ಡಿ ಆಪ್ತ ಮೆಹು¤ಜ್ ಅಲಿಖಾನ್ ಮೂಲಕ ರೆಡ್ಡಿಗೆ ತಲುಪಿಸಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ರೆಡ್ಡಿ ಆಪ್ತನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ರೆಡ್ಡಿ ಆಪ್ತ ಆಲಿಖಾನ್‌ಗೆ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮುಂಜೂರು ಮಾಡಿದೆ. ಪ್ರಕರಣದ ಇತರೆ ಆರೋಪಿಗಳಾದ ಫರೀದ್, ರಮೇಶ್ ಕೊಠಾರಿ, ರಮೇಶ್ ಕೂಡ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 57 ಚಿನ್ನದ ಗಟ್ಟಿ ವಶಕ್ಕೆ ಕಾರ್ಯಾಚರಣೆ
ಆರೋಪಿ ಫರೀದ್, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ನಡುವೆ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಮಾತುಕತೆ ನಡೆದ ಸಂಬಂಧ ಹೋಟೆಲ್‌ನಲ್ಲಿ ಶೋಧಕಾರ್ಯ ನಡೆಸಿರುವ ಪೊಲೀಸರು, ಸಿಸಿಟಿವಿ ಫೂಟೇಜ್, ಲಾಗ್ ಸೇರಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ, ತಾಜ್ ವೆಸ್ಟ್ ಎಂಡ್‌ನಲ್ಲಿ ಪಂಚನಾಮೆ ಪೂರ್ಣಗೊಳಿಸಿದ್ದು 57 ಕೆ.ಜಿ ಚಿನ್ನ ಅಲಿಖಾನ್ ಅಥವಾ ರೆಡ್ಡಿ ಬಳಿಯಿದೆಯೇ ಎಂಬುದು ಅವರಿಬ್ಬರ ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೈ ನಾಯಕರ ಜತೆಗೂ ನಂಟು?
ಒಂದೆಡೆ, ರೆಡ್ಡಿ ಪ್ರಕರಣ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರೆ, ವಂಚನೆ ಆರೋಪ ಎದುರಿಸುತ್ತಿರುವ ಫರೀದ್ ಜತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ನಂಟು ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಫರೀದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫರೀದ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.