Advertisement
ಮಣಿಪಾಲ: ಕೋವಿಡ್ 19 ಲಾಕ್‌ಡೌನ್ ಕ್ರೀಡೆಗೂ ಕತ್ತರಿ ಹಾಕಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಾಲಿಬಾಲ್ ಆಟಗಾರರೆಲ್ಲ ಒಟ್ಟುಗೂಡಿ ಹೊಸ ಪ್ರಯತ್ನವೊಂದಕ್ಕೆ ಕೈಯಿಕ್ಕಿದ್ದಾರೆ.
ಒಂದು ಕಾಲದಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದ, ಜಿಲ್ಲೆಯ ಪ್ರಸಿದ್ಧ ಆಟಗಾರರನ್ನೆಲ್ಲ ದಿನಕ್ಕೊಬ್ಬರಂತೆ ಈ ಗ್ರೂಪ್‌ನಲ್ಲಿ ಸಂದರ್ಶಿಸಲಾಗುತ್ತದೆ. ದಿನವೂ ರಾತ್ರಿ 8ರಿಂದ 10 ಗಂಟೆ ವರೆಗೆ 2 ತಾಸು ಸಂವಾದಕ್ಕೆ ಮೀಸಲು.
ಈ ಸಂದರ್ಭ ಎಡ್ಮಿನ್‌ಗಳು ಮತ್ತು ಮಾಜಿ ಆಟಗಾರ ಮಾತ್ರವೇ ಮಾತನಾಡಬಹುದಾಗಿದೆ. ಈ ಅವಧಿ ಮುಗಿದ ಬಳಿ ಗ್ರೂಪನ್ನು ಮುಕ್ತಗೊಳಿಸಲಾಗುತ್ತದೆ.
Related Articles
ಈ ಗ್ರೂಪನ್ನು ಜು. 14ರಿಂದ ಆರಂಭಿಸಲಾಗಿದ್ದು, 450ಕ್ಕೂ ಅಧಿಕ ವಾಲಿಬಾಲ್ ಪ್ರಿಯರಿಗೆ ಸಂವಾದ ಆಲಿಸಲು ಅವಕಾಶ ಕಲ್ಪಿಸಲಾಗಿದೆ.
Advertisement
ಗ್ರೂಪ್ ‘ವಾಲಿಬಾಲ್ ಪರಂಪರೆ ಅನಾವರಣ’ ಎಂಬ ಧ್ಯೇಯ ವಾಕ್ಯದಡಿ ಕಾರ್ಯ ನಿರ್ವಹಿಸುತ್ತಿದೆ. ಅಂದಿನ ಪ್ರಸಿದ್ಧ ಆಟಗಾರರ ಪರಿಚಯ ಈಗಿನ ಪೀಳಿಗೆಗೆ ಬೇಕು, ಸಾಧನೆಯಿಂದ ಪ್ರೇರಣೆ ಪಡೆಯಬೇಕೆಂಬುದು ಗ್ರೂಪ್‌ನ ಹಂಬಲ. ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಅವಿನಾಶ್ ಶೆಟ್ಟಿ, ಅನೂಪ್ ಡಿ’ಕೋಸ್ತಾ, ಅಶ್ವಲ್ ರೈ, ಇಮ್ತಿಯಾಝ್ ಸಹಿತ ಅನೇಕರು ಈ ಗ್ರೂಪ್‌ನಲ್ಲಿದ್ದಾರೆ.
ಗ್ರೂಪ್‌ನಲ್ಲಿ ಇಂಡಿಯನ್ ಸರ್ವಿಸಸ್ ತಂಡ, ವೈಎಂಸಿ ಮಂಗಳೂರು ತಂಡವನ್ನು ಪ್ರತಿನಿಧಿಸಿದ ರಾಜಾರಾಂ ಮಂಗಳೂರು, ರಾಷ್ಟ್ರೀಯ, ರಾಜ್ಯ ತಂಡಗಳನ್ನು ಪ್ರತಿನಿಧಿಸಿದ ಜೂಲಿಯನ್ ಪಿಂಟೋ, ರಾಜ್ಯ ತಂಡ ಮತ್ತು ಸಿಂಡಿಕೇಟ್ ಬ್ಯಾಂಕ್ ತಂಡವನ್ನು ಪ್ರತಿನಿಧಿಸಿದ್ದ ಎವರೆಸ್ಟ್ ಪಿಂಟೋ, ಕರಾವಳಿ ಕರ್ನಾಟಕದ ನಂ.1 ಆಟಗಾರನಾಗಿದ್ದ ಭಗವಾನ್ ದಾಸ್, ರಾಜ್ಯ, ವಿ.ವಿ. ಪ್ರತಿನಿಧಿಸಿದ ಥಾಮಸ್ ಧರ್ಮಸ್ಥಳ, ರಾಜ್ಯ ತಂಡದ ಕಪ್ತಾನ, ಮಂಗಳ ಫ್ರೆಂಡ್ಸ್‌ನ ಆಟಗಾರ ಸುನಿಲ್ ಬಾಳಿಗಾ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಸಿದ್ಧಿ ಗಳಿಸಿದ್ದ ಯಾಕೂಬ್ ಕೈರಂಗಳ, ರಾಷ್ಟ್ರೀಯ ಆಟಗಾರರಾದ ಮಂಗಳ ಫ್ರೆಂಡ್ಸ್‌ನ ಕೋಚ್ ನಾಗೇಶ್, ಎಚ್‌ಎಂಟಿ ತಂಡದ ಪ್ರಕಾಶ್ ರಾವ್, ಗಣೇಶ್ ರೈ, ರಾಜ್ಯ ತಂಡದ ಬೇಬಿ ಜಾನ್, ವಿದೇಶಗಳಲ್ಲಿ ಛಾಪು ಮೂಡಿಸಿದ್ದ ರಿಜ್ವಾನ್ ಮಲ್ಪೆ ಅವರ ಸಂದರ್ಶನ ನಡೆದಿದೆ.
ಅನುಭವ ಹಂಚಿಕೊಳ್ಳಲು ಇಂತಹ ವೇದಿಕೆ ಸಿಗುವುದು ಅಪರೂಪ. ನಮ್ಮ ಕಾಲದ ಆಟಗಾರರನ್ನು ಗುರುತಿಸಿ ಒಂದೆಡೆ ಕಲೆ ಹಾಕಿದೆ, ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. – ಸುನಿಲ್ ಬಾಳಿಗಾ, ಮಾಜಿ ಆಟಗಾರ 90ರ ದಶಕದ ಆಟದ ಅನುಭವವನ್ನು ಮಾತಿನ ಮೂಲಕ ಯುವ ಮನಸ್ಸುಗಳಿಗೆ ದಾಟಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಕ್ರೀಡಾ ಪಯಣದಿಂದ ಯುವಕರು ಪ್ರೇರಣೆಗೊಂಡು ಅವರ ಮುಂದಿನ ಸಾಧನೆಗೆ ಇದು ದಾರಿಯಾದರೆ ಖುಷಿ.
– ಯಾಕೂಬ್ ಕೈರಂಗಳ, ಮಾಜಿ ಆಟಗಾರ