Advertisement
ಸ್ಫೋಟದ ತೀವೃತೆ ಕುರಿತು ಪರಿಶೀಲನೆಗಣಿಗಾರಿಕೆ ಸಂದರ್ಭ ನಡೆಸುವ ನ್ಪೋಟದಿಂದ ಮನೆಗಳಿಗೆ ಹಾನಿ ಯಾಗುತ್ತಿದೆ. ಆದ್ದರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ದೂರು ನೀಡಿರುವುದರಿಂದ, ಇಲ್ಲಿ ನಡೆಸಲಾಗುವ ನ್ಪೋಟ ಹಾಗೂ ಅದರ ತೀವೃತೆ ಮತ್ತು ಹಾನಿಯ ಕುರಿತು ತಜ್ಞರ ತಂಡ ಪರಿಶೀಲನೆ ನಡೆಸಿತು.
ಗಣಿಗಾರಿಕೆ ನಡೆಯುವ ಪಕ್ಕದಲ್ಲೇ ಹಲವಾರು ಮನೆಗಳಿದೆ. ಒಮ್ಮೆಲೆ ನೂರಾರು ನ್ಪೋಟಕಗಳನ್ನು ಸಿಡಿಸುವುದರಿಂದ ಮನೆಗಳಿಗೆ ಹಾನಿ ಯಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಗಣಿಗಾರಿಕೆ ಮುಂದುವರಿಸಲು ಅವಕಾಶ ನೀಡಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಸಂಬಂಧಪಟ್ಟ ಇಲಾಖೆ ನಮ್ಮ ಮನವಿಯನ್ನು ಪುರಸ್ಕರಿಸುವ ಬದಲು ಸ್ಫೋಟಕದ ತೀವ್ರತೆಯನ್ನು ಪರಿಶೀಲಿಸುವ ನಾಟಕ ವಾಡುತ್ತಿದೆ. ತತ್‌ಕ್ಷಣ ಗಣಿಗಾರಿಕೆಗೆ ನೀಡಲಾದ ಪರವಾನಿಗೆಯನ್ನು ವಾಪಾಸು ಪಡೆಯುವ ಮೂಲಕ ನಮಗೆ ನ್ಯಾಯ ನೀಡಬೇಕು. ಇಲ್ಲವಾದರೆ ಮುಂದೆ ನಮ್ಮ ಅಸ್ಥಿತ್ವಕ್ಕಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೋರಾಟಗಾರರ ಪರವಾಗಿ ಗಣೇಶ ಅವರು ತಿಳಿಸಿದರು. ಕೋಟ ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪ ಸ್ಥಿತರಿದ್ದರು.