Advertisement

ಸಾಹಿತ್ಯ ಕ್ಷೇತ್ರ ಕಳಂಕಿತವಾಗುತ್ತಿದೆ: ದೊಡ್ಡರಂಗೇಗೌಡ

12:53 AM May 12, 2019 | Lakshmi GovindaRaj |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ಕಳಂಕಿತವಾಗುತ್ತಿದ್ದು ರಾಜಕೀಯ ವ್ಯಕ್ತಿಗಳನ್ನು ಮೀರಿಸುವಷ್ಟು ರಾಜಕೀಯ ಸಾಹಿತ್ಯ ವಲಯದಲ್ಲಿ ನಡೆಯುತ್ತಿದೆ ಎಂದು ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಡಾ.ವಿ.ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನ, ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಷ್ಠಾನದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಇದ್ದಷ್ಟು ರಾಜಕಾರಣ ಬೇರೆ ಯಾವುದೇ ಕ್ಷೇತ್ರದಲ್ಲಿ ಈಗಿಲ್ಲ. ಕಲುಷಿತವಾಗದೆ ಉಳಿದಿರುವ ಕ್ಷೇತ್ರ ಅಂದರೆ ಅದು, ಸಂಶೋಧನಾ ಕ್ಷೇತ್ರವಾಗಿದೆ ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರ ನಾವು -ನೀವು ಅಂದು ಕೊಂಡಂತಿಲ್ಲ. ಈಗಾಗಲೇ ನಾನು ಹಲವು ವಿಮರ್ಶ ಕೃತಿಗಳನ್ನು ರಚಿಸಿದ್ದೇನೆ. ಆದರೆ, ನನ್ನನ್ನು ವಿಮರ್ಶಕನಾಗಿ ನೋಡಲಿಲ್ಲ. ನನ್ನ ಕವನ ಸಂಕಲನಗಳಿಗಿಂತ ವಿಮರ್ಶ ಕೃತಿಗಳು ಹೆಚ್ಚಿವೆ. ಆದರೆ, ಜಾತಿ ಕಾರಣದಿಂದಲೋ ಏನೂ ಯಾರು ಕೂಡ ವಿಮರ್ಶ ಕೃತಿಗಳನ್ನು ತೆಗೆದು ಓದಿಲ್ಲ, ಅವುಗಳನ್ನು ಗುರುತಿಸಲಿಲ್ಲ ಇದು ಬೇಸರದ ಸಂಗತಿ ಎಂದರು.

ಈ ವೇಳೆ ಬಹುಭಾಷಾ ಲೇಖಕರಾದ ಬೊವ್ವೆರಿಯಂಡ ನಂಜಮ್ಮ ಮತ್ತು ಬಿ.ಎಂ.ಚಿಣ್ಣಪ್ಪ ದಂಪತಿಗೆ ಡಾ.ವಿ.ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನದ ಚೊಚ್ಚಲ ಪ್ರಶಸ್ತಿ ನೀಡಲಾಯಿತು. ಹಿರಿಯ ಸಂಶೋಧಕ ಡಾ.ಎಚ್‌.ಎಸ್‌.ಗೋಪಾಲರಾವ್‌, ಹಿರಿಯ ಸಂಶೋಧಕ ಡಾ.ಆರ್‌.ಶೇಷಶಾಸಿŒ, ಡಾ.ಕೆ.ಎಂ.ಲೋಕೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next