Advertisement
ಸಂಗೀತವೆನ್ನುವುದೇ ಒಂದು ಭಾವ. ಅದೊಂದು ಮಜಬೂತು. ಅದೊಂದು ಅಪ್ಯಾಯಮಾನವಾದ ಪ್ರೀತಿಯ ಹಾಗೆ. ಪ್ರತಿಯೊಬ್ಬರಿಗೂ ಆಹ್ಲಾದಕರ ಮತ್ತು ತೃಪ್ತಿಯ ಅನುಭವವನ್ನು ನೀಡುತ್ತದೆ.
Related Articles
Advertisement
ಅನಾದಿಕಾಲದಿಂದಲೂ ಸಂಗೀತವೂ ಭಾರತದ ಸಂಸ್ಕೃತಿಯ ಒಂದು ಭಾಗವಾಗಿ ಬಂದಿದೆ. ವೇದಗಳಲ್ಲಿಯೂ ಸಂಗೀತಕ್ಕೆ ಪ್ರಮುಖ ಸ್ಥಾನವಿದೆ. ಸಮಗ್ರವಾಗಿ ಚಿಂತಿಸುವುದಾದರೇ, ಭಾರತವೇ ಒಂದು ಸಂಗೀಮಯ ದೇಶ. ಅಡಿಗಡಿ್ಐ ಸಂಗೀತವೇ ಪ್ರಧಾನಿಸುತ್ತದೆ. ಸಂವೇದವು ಸಂಗೀತದಿಂದ ತುಂಬಿದೆ. ವಾತ, ಪಿತ್ತ ಮತ್ತು ಕಫದಂತಹ ಸಮಸ್ಯೆಗಳನ್ನು ಸಂಗೀತ ಚಿಕಿತ್ಸೆಯ ಮೂಲಕ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಸಂಗೀತದಿಂದ ಗುಣಮುಖವಾಗಲು, ದೇಹದ ಜೀವಕೋಶಗಳನ್ನು ಕಂಪಿಸುವುದು ಅವಶ್ಯಕ. ಏಕೆಂದರೆ ಈ ಕಂಪನಗಳ ಮೂಲಕವೇ ಆರೋಗ್ಯವನ್ನು ಉತ್ತೇಜಿಸಲು ರೋಗಪೀಡಿತ ವ್ಯಕ್ತಿಯ ಪ್ರಜ್ಞೆಯನ್ನು ಪರಿಣಾಮಕಾರಿಯಾಗಿ ಬದಲಾಯಿಸಲು ಸಾಧ್ಯವಿದೆ ಎನ್ನುವುದು ಸಂಗೀತಕ್ಕಿರುವ ಶಕ್ತಿ.
ಸಂದರ್ಭಕ್ಕನುಸಾರವಾಗಿ ಸಂಗೀತವು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಹಿತವುಣಿಸುತ್ತದೆ. ಅದರ ಶಕ್ತಿಯೇ ಅಂತದ್ದು, ಹಾಗಾಗಿ ಸಂಗೀತ ಎಲ್ಲರೂ ಒಪ್ಪುವ ಲಲಿತ ಕಲೆಗಳಲ್ಲಿ ಒಂದು. ಸಂಗೀತವನ್ನು ಕೇಳುವುದು ನಮ್ಮ ವ್ಯಕ್ತಿತ್ವದ ಚಿಂತೆ, ಕೋಪದ ಮತ್ತು ನಕಾರಾತ್ಮಕ ಅಂಶಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ತಲೆನೋವು, ಹೊಟ್ಟೆನೋವು ಮತ್ತು ಉದ್ವೇಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಸಂಗೀತ ಚಿಕಿತ್ಸೆಯು ಭಾವನೆಗಳನ್ನು ನಿಯಂತ್ರಿಸುವ, ರಕ್ತದೊತ್ತಡ ಮತ್ತು ಯಕೃತ್ತಿನ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.
ಚೆನ್ನೈನ ರಾಗ ಸಂಶೋಧನಾ ಕೇಂದ್ರವು ಪ್ರಸ್ತುತ ಭಾರತೀಯ ರಾಗಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತಿದೆ ಮತ್ತು ಸಂಗೀತಗಾರರು, ವೈದ್ಯರು ಮತ್ತು ಮನೋವೈದ್ಯರ ಸಹಾಯದಿಂದ ಅವರ ಚಿಕಿತ್ಸಕ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತಿದೆ. ಸಂಗೀತವು ಸಂತೋಷ, ಶಾಂತಿ, ಆರೋಗ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿ ಇಂದಿಗೂ ಎಲ್ಲರ ಅಚ್ಚು ಮೆಚ್ಚೆನ್ನಿಸಿ ಕೊಂಡಿದೆ ಅಂದರೇ ಆ ಕಲೆಯ ಹೆಚ್ಚುಗಾರಿಕೆಯದು.
ಇದರ ಮೊದಲ ಹೆಜ್ಜೆ ರೋಗದ ಸರಿಯಾದ ರೋಗನಿರ್ಣಯ ಮತ್ತು ನಂತರ ಸಹಾಯವಾಗುವ ನಿಖರವಾದ ರಾಗವನ್ನು ಆಯ್ಕೆ ಮಾಡುವುದು. ಕಾರ್ಯವಿಧಾನ ಶಿಸ್ತು ಮತ್ತು ವ್ಯವಸ್ಥಿತ ವಿಧಾನವು ಈ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಉತ್ತಮ ಮತ್ತು ಫಲಪ್ರದ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುವಲ್ಲಿ ಸಂಗೀತವು ಪರಿಣಾಮಕಾರಿ ಪಾತ್ರ ವಹಿಸುತ್ತದೆ. ದಿನದ ನಿರ್ದಿಷ್ಟ ಸಮಯದಲ್ಲಿ ಸಂಗೀತವನ್ನು ಕೇಳುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.