Advertisement

Court ಮೆಟ್ಟಿಲೇರಿದ ಪ್ರಾಣಿಗಳ ಹೆಸರಿನ ಕಥೆ: ಸಿಂಹಿಣಿ ಸೀತಾಳೊಂದಿಗೆ ಅಕ್ಬರ್ ಬೇಡ!!

04:38 PM Feb 17, 2024 | Team Udayavani |

ಕೋಲ್ಕತಾ: ಸಿಲಿಗುರಿಯ ಸಫಾರಿ ಪಾರ್ಕ್ ನಲ್ಲಿ ‘ಸೀತಾ’ ಎಂಬ ಹೆಸರಿನ ಸಿಂಹಿಣಿಯೊಂದಿಗೆ ‘ಅಕ್ಬರ್’ ಎಂಬ ಹೆಸರಿನ ಗಂಡು ಇರಿಸಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ.

Advertisement

ವಿಶ್ವ ಹಿಂದೂ ಪರಿಷತ್ತಿನ ಬಂಗಾಳ ಘಟಕವು ಫೆಬ್ರವರಿ 16 ರಂದು ಜಲ್ಪೈಗುರಿಯಲ್ಲಿರುವ ಕಲ್ಕತ್ತಾ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅನ್ನು ಸಂಪರ್ಕಿಸಿದ್ದು, ಫೆಬ್ರವರಿ 20 ರಂದು (ಮಂಗಳವಾರ) ವಿಚಾರಣೆಗೆ ಬರಲಿದೆ. ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಂಗಾಳದ ಸಫಾರಿ ಪಾರ್ಕ್‌ನ ನಿರ್ದೇಶಕರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ, ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸ್ಥಳಾಂತರಿಸಲಾಗಿದ್ದು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.

ಅಕ್ಬರ್ ಒಬ್ಬ ಮೊಘಲ್ ಚಕ್ರವರ್ತಿ ಮತ್ತು ಸೀತೆ ರಾಮಾಯಣದ ಒಂದು ಪ್ರಮುಖ ಪಾತ್ರ ಮತ್ತು ಹಿಂದೂ ದೇವತೆಯಾಗಿ ಪೂಜಿಸಲ್ಪಟ್ಟಿದ್ದಾಳೆ. ಈ ರೀತಿ ಜೋಡಿ ಮಾಡಿರುವುದು ಹಿಂದೂಗಳಿಗೆ ಅಗೌರವವೆಂದು ಪರಿಗಣಿಸಲಾಗಿದೆ ಎಂದು VHP ವಾದಿಸಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next