Advertisement
ಕಳೆದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿತ್ತು. ಅದರಲ್ಲಿ ಲಿಂಗಾಯತದ ಜೊತೆಗೆ ಬಸವ ತತ್ವ ಪಾಲಿಸುವ
ವೀರಶೈವರನ್ನೂ ಸೇರಿಸಲಾಗಿತ್ತು. ಆ ರೀತಿಯ ತೀರ್ಮಾನದಿಂದ ಕಾನೂನಿನ ತೊಡಕು ಉಂಟಾಗುತ್ತಾ? ಎನ್ನುವ ಕುರಿತಂತೆ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಿ ಕೊಡಲಾಗಿತ್ತು. ಕಾನೂನು ಇಲಾಖೆ ಗುರುವಾರ ತನ್ನ ಅಭಿಪ್ರಾಯ ತಿಳಿಸಿದ್ದು, ಶುಕ್ರವಾರದ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.