Advertisement

ಲೈನ್‌ಮ್ಯಾನ್‌ ವಿಮೆ 50 ಲಕ್ಷ ರೂ.ಗೆ: ಸಚಿವ ವಿ. ಸುನಿಲ್‌ ಕುಮಾರ್‌

12:46 AM Mar 01, 2022 | Team Udayavani |

ಉಡುಪಿ: ಕೆಪಿಟಿಸಿಎಲ್‌ ವತಿಯಿಂದ ರಾಜ್ಯದ ಪವರ್‌ ಮ್ಯಾನ್‌ (ಲೈನ್‌ಮ್ಯಾನ್‌)ಗಳಿಗೆ ವಿದ್ಯುತ್‌ ಅಪಘಾತವಾದಲ್ಲಿ ನೀಡುವ ಜೀವವಿಮಾ ಪರಿಹಾರವನ್ನು 50 ಲಕ್ಷ ರೂ.ಗಳಿಗೆ ಏರಿಸಿ ಎಲ್ಲ ಎಸ್ಕಾಂಗಳಿಗೂ ವಿಸ್ತರಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಗುಜರಾತ್‌ ಮಾದರಿಯಲ್ಲಿ ರಾಜ್ಯದ ಎಲ್ಲ ವಿದ್ಯುತ್‌ ಕಂಪೆನಿಗಳನ್ನು ಒಳಗೊಂಡ ಹೋಲ್ಡಿಂಗ್‌ ಕಂಪೆನಿ ರಚನೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಕೇಂದ್ರೀಕೃತ ಆಡಳಿತ, ಲಾಭ ನಷ್ಟ, ವರ್ಗಾವಣೆಗೆ ಹೋಲ್ಡಿಂಗ್‌ ಕಂಪೆನಿ ರಚನೆ ಪೂರಕವಾಗಲಿದೆ ಎನ್ನುವ ಬೇಡಿಕೆಯಿದೆ ಎಂದರು.

ಇದನ್ನೂ ಓದಿ:ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯೆಯಿಂದ ವಿಡಿಯೋ ಚಿತ್ರಿಕರಣ : ವಿಪಕ್ಷ ಸದಸ್ಯರಿಂದ ಸಭಾತ್ಯಾಗ

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವ್ಯ. ನಿರ್ದೇಶಕಿ ಡಾ| ಎನ್‌. ಮಂಜುಳಾ ಮಾತನಾಡಿ, ವಿದ್ಯುತ್‌ ಅಪಘಾತ ತಡೆಗೆ ಕ್ರಮ ಕೈಗೊಳ್ಳುವ ಅಗತ್ಯ ವಿದೆ. ಕೆಪಿಟಿಸಿಎಲ್‌ ವತಿಯಿಂದ 55 ಸ್ಟೇಶನ್‌ ಕಾಮ ಗಾರಿ ಪ್ರಗತಿಯಲ್ಲಿದೆ. 1.50 ಲಕ್ಷ ರೈತರಿಗೆ ಕನಿಷ್ಠ 7 ತಾಸು ವಿದ್ಯುತ್‌ ಪೂರೈಕೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next