Advertisement

ಲಿಮ್ಕಾ ದಾಖಲೆ ಸೇರಿತು ರಂಗೋಲಿ ಸ್ಪರ್ಧೆ

11:19 AM Nov 27, 2017 | |

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ, ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿದೆ.

Advertisement

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಬಸವೇಶ್ವರ ಬ್ಯಾಂಕ್‌ನಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನೇಮಿಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಮಹಿಳೆ, ಮಕ್ಕಳು, ಯುವಕರಿಗೆ ರಂಗೋಲಿ ಒದಗಿಸಲಾಯಿತು. ಜತೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಂಗೋಲಿ ಬಿಡಿಸಲು ಪ್ರತಿಯೊಬ್ಬರಿಗೂ ಒಂದೊಂದು ಸ್ಥಳ ನಿಗದಿ ಮಾಡಲಾಗಿತ್ತು. 45 ನಿಮಿಷಗಳು ಮಾತ್ರ ರಂಗೋಲಿ ಬಿಡಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಒಬ್ಬರು, ಒಂದಕ್ಕೂ ಹೆಚ್ಚು ರಂಗೋಲಿ ಬಿಡಿಸಲು ಅವಕಾಶ ಕಲ್ಪಿಸಲಾಗಿತ್ತು. ಕೆಲವು ಮಹಿಳೆಯರು ಒಂದರಿಂದ 4ರವರೆಗೂ ರಂಗೋಲಿ ಬಿಡಿಸಿದರು. ಸಚಿವೆ ಉಮಾಶ್ರೀ ರಂಗೋಲಿ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಹಿಂದೆ, ಬೆಳಗಾವಿಯಲ್ಲಿ 45 ನಿಮಿಷದಲ್ಲಿ 3,500 ರಂಗೋಲಿ ಬಿಡಿಸಿದ್ದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next