Advertisement

ಯೋಧನ ಎದೆಯ ಮೇಲಿನ ಪದಕಗಳಂತೆ ಕೇಸುಗಳು: ರಾಹುಲ್‌

09:52 AM Dec 06, 2019 | Team Udayavani |

ವಯನಾಡ್‌/ಕಲ್ಲಿಕೋಟೆ: ಸೈನಿಕನ ಎದೆಯ ಮೇಲೆ ಪದಕಗಳು ಇರುವಂತೆ ತಮ್ಮ ವಿರುದ್ಧ ಕೇಸುಗಳು ಇವೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಬಣ್ಣಿಸಿದ್ದಾರೆ. ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ಅವರು ಗುರುವಾರ ವಯನಾಡ್‌ನ‌ ವಿನ್ನಿಯಂಬಲಂನಲ್ಲಿ ಮಾತನಾಡಿದರು.

Advertisement

ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿ ಮತ್ತು ಆ ಪಕ್ಷದ ಬೆಂಬಲಿಗರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳಿಂದ ಎದೆಗುಂದಿಲ್ಲ ಎಂದರು. ಸದ್ಯ ತಮ್ಮ ವಿರುದ್ಧ 15 ರಿಂದ 16 ಕೇಸುಗಳು ಇವೆ ಎಂದು ಹೇಳಿದ್ದಾರೆ. ಪ್ರತಿಯೊಂದು ಪ್ರಕರಣವೂ ಪದಕ ಇದ್ದಂತೆ ಎಂದರು. ಭಾರತದಲ್ಲಿ ತ್ವೇಷಮಯ ವಾತಾವರಣ ಇದೆ ಎಂದು ನನಗೆ ಅನಿಸುವುದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿಯ ಪ್ರಭಾವಕ್ಕೆ ಮಣಿಯುವುದಿಲ್ಲ ವೆಂದರು.

ವಿರೋಧ: ಕಲ್ಲಿಕೋಟೆಯಲ್ಲಿ ಮಾತನಾಡಿದ ಅವರು, ಸಂಸತ್‌ನಲ್ಲಿ ಸೋಮವಾರ ಮಂಡನೆಯಾಗುವ ಪೌರತ್ವ ವಿಧೇಯಕವನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ದೇಶದಲ್ಲಿ ಯಾರನ್ನೇ ಆಗಿ ಭಿನ್ನ ರೀತಿಯಿಂದ ನೋಡುವುದನ್ನು ಪಕ್ಷ ವಿರೋಧಿಸುತ್ತದೆ ಎಂದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ‘ಭಾವನಾ ಲೋಕ’ದಲ್ಲಿ ಇದ್ದಾರೆ. ಅವರ ಸರಕಾರದ ಆರ್ಥಿಕ ನೀತಿಗಳಿಂದ ಜನರಿಗೆ ತೊಂದರೆಯಾಗಿದೆ ಎಂದು ರಾಹುಲ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next