Advertisement
ಮಹಾಭಾರತದಲ್ಲಿಯೂ ಕೂಡ ಶ್ರೀಕೃಷ್ಣ ಅರ್ಜುನನಿಗೆ ರಾಜಧರ್ಮದ ನೀತಿ ಹೇಳಿ, ಧರ್ಮದ ಪರವಾಗಿ ನಿಂತಿದ್ದನು. ಆದ್ದರಿಂದ ಶ್ರೀಕೃಷ್ಣ ಪಕ್ಷಪಾತಿ ಎಂದು ಹೇಳುವವರೂ ಇದ್ದಾರೆ. ಶೋಷಿತ ವರ್ಗಗಳಿಗೆ ಸಾಮಾಜಿಕವಾಗಿ ನ್ಯಾಯ ಸಿಗಬೇಕು ಎಂಬ ಸಿದ್ಧಾಂತವನ್ನು ನಾನು ನಂಬಿದ್ದು, ಕೃಷ್ಣನಂತೆ ನಾನು ಕೂಡ ಅಹಿಂದ ಪರ ಪಕ್ಷಪಾತಿಯಾಗಿದ್ದೇನೆ. ಶೋಷಿತರಿಗೆ ಜಾತಿ ಸಮೀಕ್ಷೆ ವರದಿ ಬಂದ ನಂತರ ಚರ್ಚಿಸಿ ಸರ್ಕಾರ ಅಗತ್ಯ ಸೌಲಭ್ಯ ಒದಗಿಸುತ್ತದೆ ಎಂದು ಭರವಸೆ ನೀಡಿದರು.
Related Articles
Advertisement
ಈ ಬಾರಿಯ ಚುನಾವಣೆಯಲ್ಲಿ 6 ಮಂದಿ ಯಾದವರಿಗೆ ಪಕ್ಷದಿಂದ ಟಿಕೆಟ್ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಪತ್ರ ಸಲ್ಲಿಸಿದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮೇಯರ್ ಪದ್ಮಾವತಿ, ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಬೆಂಗಳೂರು ಗ್ರಾಮಾಂತರ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನು ಗೋರಕ್ಷಕನಲ್ಲವೇ?“ಯಾದವರು ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಬಲಾಡ್ಯರಾಗಿದ್ದಾರೆ. ರಾಜ್ಯದಲ್ಲಿ ಮಾತ್ರ ಹಿಂದುಳಿದಿದ್ದಾರೆ. ಗೋ ಪಾಲನೆಯನ್ನು ಪುರಾತನ ಕಾಲದಿಂದಲೂ ಮಾಡಿದ್ದಾರೆ. ಪ್ರಸ್ತುತ ಗೋ ರಕ್ಷಣೆ ಹೆಸರಿನಲ್ಲಿ ಕೆಲವರು ನಾಟಕ ಆಡುತ್ತಿದ್ದಾರೆ. ಅವರು ಒಂದು ದಿನವೂ ಸಗಣಿ ಎತ್ತಿಲ್ಲ. ಸರ್ಕಾರ ಒಂದು ಲೀಟರ್ ಹಾಲಿಗೆ 5 ರೂ. ಬೆಂಬಲ ಬೆಲೆ ನೀಡುತ್ತಿದೆ. ಹಾಗಾದರೆ ನಾನು ಗೋ ರಕ್ಷಕನಲ್ಲವೇ? ನಿಜವಾಗಿ ಸಗಣಿ ಎತ್ತುವವನೇ ಗೋರಕ್ಷಕ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸುಮಾರು 33 ಶೋಷಿತ ಸಮುದಾಯದ ಜಾತಿಗಳಿಗೆ ಬೆಂಗಳೂರಿನಲ್ಲಿ ಒಂದೇ ಕಡೆ ಸಮುದಾಯ ಭವನ ಸ್ಥಾಪನೆಗೆ ಜಾಗ ಕೊಡಲು ನಿರ್ಧರಿಸಲಾಗಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅದನ್ನು ಪರಿಶೀಲಿಸಿ ಅನುಮೋದನೆ ನೀಡಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ