Advertisement

ಯಡ್ರಾಮಿ ಸ್ವಚ್ಛತೆಗೆ ಅನುದಾನ ಕೊರತೆಯಂತೆ!

11:17 AM Oct 25, 2021 | Team Udayavani |

ಯಡ್ರಾಮಿ: ಯಡ್ರಾಮಿ ತಾಲೂಕಾಗಿ ಸುಮಾರು ಮೂರು ವರ್ಷಗಳೇ ಕಳೆದರೂ ಪಟ್ಟಣ ಪಂಚಾಯಿತಿಗೆ ಅನುದಾನದ ಕೊರತೆ ಎದುರಾಗಿದ್ದರಿಂದ ಸ್ವಚ್ಛತೆ ಎನ್ನುವುದು ಮಾಯವಾಗಿದೆ.

Advertisement

ಪಟ್ಟಣದ ವಾರ್ಡ್‌-06ರಲ್ಲಿ ವ್ಯವಸ್ಥಿತವಾದ ಚರಂಡಿ, ರಸ್ತೆ ನಿರ್ಮಾಣ ಆಗಿಲ್ಲ. ಅಲ್ಪ ಸ್ವಲ್ಪ ಮಳೆ ಬಂದರೂ ಓಡಾಟಕ್ಕೆ ತೊಂದರೆ ತಪ್ಪಿದ್ದಲ್ಲ. ಜೋರಾಗಿ ಮಳೆ ಬಂತೆಂದರೆ ರಸ್ತೆಯಲ್ಲಿನ ಚರಂಡಿ ನೀರು ಮನೆಗಳಲ್ಲಿಯೇ ನುಗ್ಗುತ್ತದೆ. ಅಲ್ಲದೇ, ರಸ್ತೆ ಮಧ್ಯದಲ್ಲಿಯೇ ಕೊಳಕು ನೀರು ಸಂಗ್ರಹವಾಗಿ ಸೊಳ್ಳೆಗಳ ಕೇಂದ್ರವಾಗುತ್ತಿದೆ.

ಅತಿಯಾದ ಸೊಳ್ಳೆಗಳ ಕಾಟದಿಂದ ಡೆಂಘೀ, ಮಲೇರಿಯಾದಂತ ರೋಗ ಉಲ್ಬಣಿಸುತ್ತಿದೆ. ಹೀಗಿದ್ದರೂ ಸೂಕ್ತ ಕ್ರಮ ಕೈಗೊಳ್ಲಲು ಯಾರೂ ಮುಂದಾಗುತ್ತಿಲ್ಲ ಎಂದು ವಾರ್ಡ್‌-6ರ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಕರವೇ ಮನವಿ

ಪಟ್ಟಣದ ರಸ್ತೆಯಲ್ಲಿ ಒಂದು ಬೈಕ್‌ ಕೂಡಾ ಓಡಾಡಲು ಆಗುವುದಿಲ್ಲ. ಕಳೆದ 30 ವರ್ಷಗಳಿಂದ ಈ ಸಮಸ್ಯೆ ಇದೆ. ಪಪಂ ಅಧಿಕಾರಿಗಳಿಗೆ ಈ ಕುರಿತು ಕೇಳಿದರೆ ಅನುದಾನ ಇಲ್ಲ ಎನ್ನುತ್ತಿದ್ದಾರೆ. ತಾತ್ಕಾಲಿಕವಾಗಿಯಾದ್ರೂ ಚರಂಡಿ ಸ್ವತ್ಛತೆ ಮಾಡಿಸಿ, ಜನರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಕರವೇ ಅಲ್ಪಸಂಖ್ಯಾತ ತಾಲೂಕು ಘಟಕದ ಅಧ್ಯಕ್ಷ ಅಫ್ರೋಜ್‌ ಅತ್ನೂರ ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ: ನಿರಂತರ ವಿದ್ಯುತ್‌ ನೀಡಲು ಮನವಿ

ನೂತನ ಪಟ್ಟಣ ಪಂಚಾಯಿತಿ ಆಗಿರುವುದರಿಂದ ಅನುದಾನದ ಕೊರತೆ ಇದೆ. ಸದ್ಯ ನಾವು ಪಟ್ಟಣದಲ್ಲಿನ ಒಳಚರಂಡಿ, ಸಿಸಿ ರಸ್ತೆ ಜತೆಗೆ ರಾಜ ಕಾಲುವೆ, ಪೌರ ಕಾರ್ಮಿಕರ ನೇಮಕ ಸೇರಿದಂತೆ ಅನೇಕ ಕೆಲಸಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ನಂತರ ಶಾಸಕರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಶೀಘ್ರದಲ್ಲೇ ಚರಂಡಿ, ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. -ಸಂತೋಷ ರೆಡ್ಡಿ, ಮುಖ್ಯಾಧಿಕಾರಿ, ಪ.ಪಂ, ಯಡ್ರಾಮಿ

ಸಂತೋಷ ಬಿ.ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next