Advertisement

ಈ ವಾಹನಕ್ಕೆ ಮೀನೇ ಚಾಲಕ! ಮೀನಿಗೆ ನೆಲದ ಮೇಲೂ ಸಂಚರಿಸುವುದು ಕಲಿಸಿದ ವಿಜ್ಞಾನಿಗಳು

11:21 PM Jan 10, 2022 | Team Udayavani |

ಜೆರುಸಲೇಂ: ಮೀನು ಜಲಚರ. ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆ ಯನ್ನು ಬಿಟ್ಟುಬಿಡಿ. ಏಕೆಂದರೆ ಇಸ್ರೇಲ್‌ನ ವಿಜ್ಞಾನಿ ಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್‌ದೊಂದು ರೊಬೋಟಿಕ್‌ ವಾಹನವನ್ನು ತಯಾರಿಸಿದ್ದಾರೆ.

Advertisement

ಇಸ್ರೇಲ್‌ನ ಬೆನ್‌-ಗುರಿಯಾನ್‌ ವಿಶ್ವವಿದ್ಯಾ ನಿಲಯದ ವಿಜ್ಞಾನಿಗಳು ಹೊಸದೊಂದು ರೊಬೋ ಟಿಕ್‌ ವಾಹನ ವನ್ನು ತಯಾರಿಸಿದ್ದಾರೆ. ಇದರಲ್ಲಿ ಮಧ್ಯಭಾಗದಲ್ಲಿ ಫಿಶ್‌ ಟ್ಯಾಂಕ್‌ ಇದ್ದರೆ ಮೇಲೆ ಲಿಡಾರ್‌ ಅಳವಡಿಸಲಾಗಿದೆ.

ಕೆಮರಾ, ಓಮ್ನಿ ವೀಲ್ಸ್‌, ಕಂಪ್ಯೂಟರ್‌, ಎಲೆಕ್ಟ್ರಿಕ್‌ ಮೋಟಾರ್ಗಳನ್ನೂ ಇದರಲ್ಲಿ ಜೋಡಿಸಲಾಗಿದೆ.ಈ ವಾಹನದಲ್ಲಿ ಪಲ್ಸಡ್‌ ಲೇಸರ್‌ ಲೈಟ್‌ ಸೆನ್ಸರ್‌ಗಳನ್ನು ಬಳಸಲಾಗಿದ್ದು, ವಾಹನದಲ್ಲಿರುವ ಫಿಶ್‌ ಟ್ಯಾಂಕ್‌ನೊಳಗಿನ ಮೀನಿನ ಚಲನವಲನವನ್ನು ಗಮನಿಸಿ, ಅದರ ಅನುಸಾರ ಚಕ್ರ ತಿರುಗುತ್ತದೆ. ಅದರಿಂದಾಗಿ ವಾಹನ ತನ್ನಿಂತಾನಾಗೇ ಮುಂದೆ ಸಾಗುತ್ತದೆ.

ಇದನ್ನೂ ಓದಿ:ಗಳಿಕೆ ರಜೆ ಮಂಜೂರಿಗೆ ಆಗ್ರಹಿಸಿ ಶಿಕ್ಷ ಕರಿಂದ ಮನವಿ

ಮೀನೇ ನಿಯಂತ್ರಕ: ಅಂದ ಹಾಗೆ, ಈ ವಾಹನದ ನಿಜ ನಿಯಂತ್ರಣ ವಿರುವುದು ಮೀನಿನ ಬಳಿ. ಅದು ಯಾವ ಕಡೆ ಹೋಗಬೇಕೆಂದು ನಿರ್ಧರಿಸಿ, ಆ ಕಡೆಯ ಗ್ಲಾಸ್‌ನ್ನು ಮುಟ್ಟಿದರೆ ಮಾತ್ರವೇ ಚಕ್ರ ತಿರುಗುವುದು.

Advertisement

ಬೆಸ್ಟ್‌ ಡ್ರೈವರ್‌: ವಿಜ್ಞಾನಿಗಳು ಈ ವಾಹನದ ಪರೀಕ್ಷೆಗೆಂದು ಆರು ಗೋಲ್ಡನ್‌ ಫಿಶ್‌ಗಳನ್ನು ಬಳಸಿಕೊಂಡಿದ್ದಾರೆ. ನಿರ್ದಿಷ್ಟ ಗುರಿ ನಿಗದಿಪಡಿಸಿ, ಅಲ್ಲಿ ಮೀನಿನ ತಿಂಡಿ ಇಟ್ಟಾಗ, ಮೀನುಗಳು ತಾವಾಗಿಯೇ ವಾಹನವನ್ನು ಚಲಾಯಿಸಿಕೊಂಡು ತಿಂಡಿಯ ಬಳಿ ಬಂದಿವೆ ಯಂತೆ. ಕೇವಲ 10 ತರಬೇತಿಯಲ್ಲಿ ಈ ಮೀನುಗಳು ಉತ್ತಮ ಚಾಲಕರಾಗಿ ಹೊರ ಹೊಮ್ಮಿದವು ಎನ್ನುತ್ತಾರೆ ವಿಜ್ಞಾನಿಗಳು.

 

Advertisement

Udayavani is now on Telegram. Click here to join our channel and stay updated with the latest news.

Next