Advertisement

ಏ.1ರಿಂದ ಹಗಲಲ್ಲೂ ಬೈಕ್ ಗೆ ಹೆಡ್ ಲೈಟ್ ಕಡ್ಡಾಯ! ಏನಿದು AHO

06:09 PM Mar 21, 2017 | Team Udayavani |

ನವದೆಹಲಿ:ಅಪಘಾತದಿಂದಾಗುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮಟ್ ಕಡ್ಡಾಯಗೊಳಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಏಪ್ರಿಲ್ 1ರಿಂದ ಮಾರಾಟವಾಗುವ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಹಗಲೂ, ರಾತ್ರಿ ಉರಿಯಬಲ್ಲ ಹೆಡ್ ಲೈಟ್(ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್) ವ್ಯವಸ್ಥೆ ಜಾರಿಗೆ ಬರಲಿದೆ.

Advertisement

ಏನಿದು ಎಎಚ್ ಒ?
ಏಪ್ರಿಲ್ ತಿಂಗಳಿನಿಂದ ರಸ್ತೆಗಿಳಿಯಲಿರುವ ಹೊಸ ಬೈಕ್ ಗಳಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್(ಎಎಚ್ಒ) ವ್ಯವಸ್ಥೆ ಕಡ್ಡಾಯವಾಗಿ ಇರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲ ಎಎಚ್ ಒ ಮಾದರಿಯಲ್ಲೇ ಕಾರಿಗೂ ಹಗಲೂ ಉರಿಯುವ ಹೆಡ್ ಲೈಟ್ ವ್ಯವಸ್ಥೆ ಬರಲಿದೆ.

ಹಗಲಲ್ಲೂ ಹೆಡ್ ಲೈಟ್ ಯಾಕೆ?
ರಸ್ತೆಯಲ್ಲಿ ನಡೆದು ಹೋಗುವವರಿಗೆ ಹಾಗೂ ಇತರ ಸವಾರರಿಗೆ ವಾಹನಗಳು ಸ್ಪಷ್ಟವಾಗಿ ಕಾಣಿಸಲಿ ಎಂದು ಹಾಗೂ ಸವಾರರ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶ ಇದಾಗಿದೆ. ಯಾಕೆಂದರೆ ಸರ್ಕಾರಿ ದಾಖಲೆಗಳ ಪ್ರಕಾರ 2015ರಲ್ಲಿ ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ದ್ವಿಚಕ್ರ ವಾಹನ ಸವಾರರ ಅಪಘಾತ ಸಂಭವಿಸಿದೆ. 44, 011 ದ್ವಿಚಕ್ರ ವಾಹನ ಅಪಘಾತ ನಡೆದಿತ್ತು.

ದ್ವಿಚಕ್ರ ವಾಹನ ಅಪಘಾತದಲ್ಲಿ 1.4 ಲಕ್ಷ ಸವಾರರು ಸಾವನ್ನಪ್ಪಿರುವುದಾಗಿ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಅಂಕಿಅಂಶ ತಿಳಿಸಿದೆ. 

ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ತಜ್ಞರ ತಂಡ ದ್ವಿಚಕ್ರ ವಾಹನ ಸವಾರರಿಗೆ ಈ ಎಎಚ್ ಒ ನಿಯಮ ಜಾರಿ ಬಗ್ಗೆ ವರದಿ ನೀಡಿತ್ತು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಜಸ್ಟೀಸ್ ರಾಧಾಕೃಷ್ಣನ್ ಸಮಿತಿ ನೀಡಿರುವ ನಿರ್ದೇಶನದ ಆಧಾರದ ಮೇಲೆ ಸಚಿವಾಲಯ 2016ರ ಮಾರ್ಚ್ ನಲ್ಲಿ ಪ್ರಕಟಣೆ ಹೊರಡಿಸಿತ್ತು. ಬಳಿಕ 2017ರ ಏಪ್ರಿಲ್ ನಿಂದ ದ್ವಿಚಕ್ರ ವಾಹನ ಸವಾರರಿಗೆ ಎಎಚ್ ಒ ಕಡ್ಡಾಯ ಎಂದು ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next