Advertisement

ಬೆಡ್‌ರೂಮ್‌ನ ಸೌಂದರ್ಯ ಹೆಚ್ಚಿಸುವ ಲೈಟಿಂಗ್ಸ್ 

02:46 PM Sep 01, 2018 | |

ಮನಸ್ಸಿನ ಒತ್ತಡವನ್ನು ನಿವಾರಿಸಿ ರಿಲ್ಯಾಕ್ಸ್‌ ಕೊಡುವ ಬೆಡ್‌ ರೂಮ್‌ನ ಶೃಂಗಾರಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಇಲ್ಲಿನ ಪ್ರತಿಯೊಂದು ವಸ್ತುವನ್ನೂ ನಾವು ಬಹಳಷ್ಟು ಯೋಚನೆ ಮಾಡಿಯೇ ಖರೀದಿಸುತ್ತೇವೆ. ವಿದ್ಯುತ್‌ ದೀಪಗಳ ಬಳಕೆಯಲ್ಲೂ ಹೆಚ್ಚು ಎಚ್ಚರಿಕೆ ವಹಿಸುತ್ತೇವೆ. ಎಲ್ಲಿಂದ, ಎಷ್ಟು ಬೆಳಕಿದ್ದರೆ ಕೋಣೆ ಸುಂದರವಾಗಿರುತ್ತದೆ, ಸ್ವಚ್ಛವಾಗಿ ಕಾಣುತ್ತದೆ, ಉತ್ತಮ ನಿದ್ದೆಯನ್ನು ತರಿಸುತ್ತದೆ… ಇತ್ಯಾದಿ. ಬೆಳಕು ಬೇಕು ಎಂದಾಕ್ಷಣ ಗೋಡೆಯ ಮೇಲೆಯೇ ವಿದ್ಯುತ್‌ ದೀಪಗಳನ್ನು ಹಾಕಬೇಕಿಲ್ಲ ಅದರಲ್ಲೂ ಬೆಡ್‌ ರೂಮ್‌ಗೆ. ಇಲ್ಲಿಗೆ ಹೊಂದಿಕೆಯಾಗುವ ಹಲವಾರು ವಿನ್ಯಾಸದ ದೀಪಗಳಿವೆ.

Advertisement

ಹಾಸಿಗೆ ದೀಪಗಳು
ಬೆಡ್‌ನ‌ ಎರಡೂ ಬದಿಯಲ್ಲಿ ಎತ್ತರದ ಸ್ಟಾಂಡ್‌ ನಲ್ಲಿ ಅಥವಾ ಬೆಡ್‌ನ‌ಷ್ಟು ಎತ್ತರದಲ್ಲಿ ಗೋಡೆಯಲ್ಲಿ ಉರಿಯುವ ದೀಪ. ಆದರೆ ಅವುಗಳು ಕೇವಲ ಬೆಡ್‌ ಉದ್ದ, ಅಗಲದವರೆಗೆ ಮಾತ್ರ ಬೆಳಕು ನೀಡುತ್ತದೆ. ಇವು ಹೆಚ್ಚು ಪ್ರಕಾಶಮಾನವಾಗಿ ಇರುವುದಿಲ್ಲ.

ಸ್ಕೋನ್ಸ್‌
ಸ್ಕೋನ್ಸ್‌ಗಳು ಬೆಡ್‌ರೂಂಗಳಿಗೆ ಮತ್ತೊಂದು ಉತ್ತಮ ಆಯ್ಕೆ. ಮಕ್ಕಳಿರುವ ಕೊಠಡಿಗೆ ಇದು ಸೂಕ್ತ. ಮಲಗಿಕೊಂಡು ಓದಲು ಪೂರಕ. ಇದಕ್ಕಾಗಿ ಪ್ರತ್ಯೇಕ ಟೇಬಲ್‌ ಬೇಕಿಲ್ಲ. ಬೆಡ್‌ನ‌ಲ್ಲಿಯೇ ಒರಗಿಕೊಂಡು ಪುಸ್ತಕ ಓದಲು ಇದು ಅನುವು ಮಾಡಿಕೊಡುತ್ತದೆ. ಇದರಿಂದ ಬೆಡ್‌ನ‌ ಎರಡು ಬದಿಯಲ್ಲಿ ಟೇಬಲ್‌ ಲೈಟ್‌ ರೂಪದಲ್ಲೇ ಎರಡು ದೀಪಗಳಿರುತ್ತವೆ. ಇದು ಬೆಡ್‌ರೂಂನ ಸೊಬಗನ್ನೂ ಹೆಚ್ಚಿಸುತ್ತದೆ.

ಹ್ಯಾಂಗಿಂಗ್‌ ಲೈಟಿಂಗ್ಸ್‌
ನೇತಾಡುವ ಲೈಟಿಂಗ್‌ಗಳು ನೋಡಲು ಬಲು ಸುಂದರವಾಗಿರುತ್ತವೆ. ಹಲವು ವಿನ್ಯಾಸದಲ್ಲಿ ಇವು ಲಭ್ಯವಿವೆ. ಹಕ್ಕಿಯ ಗೂಡಿನ ಆಕೃತಿಯೊಳಗೆ ಬೆಳಕನ್ನು ಉರಿಸುವುದರಿಂದ ಕೋಣೆಯ ತುಂಬೆಲ್ಲ ನಾನಾ ರೀತಿಯಲ್ಲಿ ಬೆಳಕು ಹರಡುವಂತೆ ಮಾಡುತ್ತದೆ. ಇದನ್ನು ಬೆಡ್‌ರೂಂನ ಮಧ್ಯಭಾಗದಲ್ಲಿ ನೇತು ಹಾಕಿದರೆ ಎಲ್ಲೆಡೆ ಬೆಳಕು ಹರಿಯುತ್ತದೆ.

ಮಿಕ್ಸ್‌ಡ್‌ ಡಿಸೈನ್‌
ಬೆಡ್‌ರೂಂನ ಗೋಡೆಗಳನ್ನು ಖಾಲಿ ಬಿಡುವುದಕ್ಕಿಂತ ಚಿತ್ರಗಳನ್ನು ರಚಿಸಿ ಅದಕ್ಕೆ ಫೋಕಸ್‌ ಆಗುವಂಗತೆ ಬೆಳಕನ್ನು ನೀಡುವುದರಿಂದ ಅದು ರೂಮಿಗೆಲ್ಲ ಹರಡುತ್ತದೆ. ಇದನ್ನೇ ಮಿಕ್ಸ್‌ಡ್‌ ಡಿಸೈನ್‌ ಲೈಟ್‌ ಗಳು ಎನ್ನಲಾಗುತ್ತದೆ. ಬೆಡ್‌ ರೂಮ್‌ ಮನೆಯ ಒಂದು ಭಾಗವೇ ಆಗಿದ್ದರೂ ಎಲ್ಲರೂ ಇದನ್ನು ಮಾತ್ರ ಹೆಚ್ಚು ಪ್ರೀತಿಯಿಂದಲೇ ಅಲಂಕರಿಸುತ್ತಾರೆ. ಹೀಗಾಗಿ ತರಹೇವಾರಿ ಬೆಡ್‌ ರೂಮ್‌ ಲೈಟ್‌ ಗಳು ಹೆಚ್ಚು ಪ್ರಾಮುಖ್ಯವೆನಿಸಿಕೊಂಡಿವೆ.

Advertisement

ರಿಸೆಸ್ಡ್ ಲೈಟಿಂಗ್‌
ಸೊಗಸಾದ ಒಳಾಂಗಣ ಮತ್ತು ಹಿಮ್ಮುಖ ಸೀಲಿಂಗ್‌ ಬೆಳಕಿನೊಂದಿಗೆ ವಿಶಾಲವಾದ ಬೆಡ್‌ ರೂಂಗೆ ಬ್ಯಾಕ್‌ಲೈಟ್‌ ಅನ್ನು ಒದಗಿಸುತ್ತದೆ. ಇಡೀ ಕೋಣೆಗೆ ಬೆಳಕನ್ನು ಹರಡುತ್ತದೆ.

ಪೆಂಡೆಂಟ್‌ ಲೈಟ್‌ಗಳು
ಪ್ರಕಾಶಮಾನವಾದ ನೇತು ಹಾಕಿರುವ ಪೆಂಡೆಂಟ್‌ ದೀಪಗಳನ್ನು ನೋಡಲು ಬಲು ಸುಂದರ. ಬೆಡ್‌ಗಳ ಎರಡು ಬದಿಯಲ್ಲಿ ಒಂದೊಂದು ದೊಡ್ಡ ವೃತ್ತಾಕಾರದ ವಸ್ತುವಿನೊಳಗೆ ವಿದ್ಯುತ್‌ ಬಲ್ಬ್ ಉರಿಯುವುದು ಅಥವಾ ಬೆಡ್‌ನ‌ ಮತ್ತೊಂದು ಕಡೆಯಲ್ಲಿ ಸಣ್ಣ ಸಣ್ಣ ದೀಪದ ಗೊಂಚಲುಗಳು ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ. ಇದು ಸರಳ ಮತ್ತು ಮನೋಹರವಾಗಿರುತ್ತದೆ. 

 ಭರತ್‌ ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next