Advertisement

ನಂ.18 ವಾಯುನೆಲೆ ಪುನಾರಂಭ ; ತೇಜಸ್‌ ಎಲ್‌ಸಿಎ ಚಲಾಯಿಸಿ ಉದ್ಘಾಟಿಸಿದ ಐಎಎಫ್ ಮುಖ್ಯಸ್ಥ

07:00 AM May 28, 2020 | Hari Prasad |

ಚೆನ್ನೈ: ಪರಮವೀರ ಚಕ್ರ ಗೌರವ ಪಡೆದ ಭಾರತದ ಏಕೈಕ ವಾಯುಸೇನೆ ಘಟಕವೆನಿಸಿಕೊಂಡಿರುವ ಕೊಯಂಬತ್ತೂರು ಸಮೀಪದ ಸೂಲೂರು ವಾಯುನೆಲೆಗೆ ಪುನರ್‌ ಚಾಲನೆ ನೀಡಲಾಗಿದೆ.

Advertisement

ವಾಯುದಳ ಮುಖ್ಯಸ್ಥ ಆರ್‌.ಕೆ.ಎಸ್‌. ಭದೌರಿಯಾ, 4ನೇ ತಲೆಮಾರಿನ ಹಗುರ ಯುದ್ಧವಿಮಾನ ತೇಜಸ್‌ ಅನ್ನು ಚಲಾಯಿಸುವ ಮೂಲಕ ಬುಧವಾರ 18ನೇ ವಾಯುನೆಲೆಯನ್ನು ಉದ್ಘಾಟಿಸಿದರು.

ಎಲ್‌ಸಿಎ ತೇಜಸ್‌ನ ಅಂತಿಮ ಪರೀಕ್ಷೆಗಳು ಈ ವಾಯುನೆಲೆಯಲ್ಲಿ ನಡೆಯಲಿವೆ. ಏರ್‌ ಟು ಏರ್‌ ಇಂಧನ ತುಂಬುವಿಕೆ, ಬಿಯಾಂಡ್‌ ವಿಜುವಲ್‌ ರೇಂಜ್‌ (ಬಿವಿಆರ್‌) ಕ್ಷಿಪಣಿ ವ್ಯವಸ್ಥೆ ಮುಂತಾದ ಸುಧಾರಿತ ತಂತ್ರಜ್ಞಾನಗಳು ಇಲ್ಲಿ ತೇಜಸ್‌ಗೆ ಇನ್ನಷ್ಟು ಬಲ ತುಂಬಲಿವೆ.

ತೇಜಸ್‌ನ 20 ಜೆಟ್‌ಗಳು, 16 ಫೈಟರ್ಸ್‌ಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದು, 4 ತರಬೇತುದಾರರನ್ನು ಈ ಘಟಕ ಹೊಂದಿದೆ. ಈ ಹಿಂದೆ ಇದೇ ಘಟಕದಲ್ಲಿ ಫಾಲ್ಯಾಂಡ್‌ ಗ್ನ್ಯಾಟ್‌, ಎಚ್‌ಎಎಲ್‌ನ ಅಜೀತ್‌, ಮಿಗ್‌- 27 ಎಂ.ಎಲ್‌. ಕಾರ್ಯಾಚರಣೆ ನಡೆಸಿದ್ದವು.

ನಂ.18 ವಾಯುನೆಲೆಯ ತೇಜಸ್‌ ಸ್ಪೆಷಾಲಿಟಿ

Advertisement

– ಸಿಂಗಲ್‌ ಎಂಜಿನ್‌, ಡೆಲ್ಟಾ ವಿಂಗ್‌, 4ನೇ ತಲೆಮಾರಿನ ಫೈಟರ್‌ ಜೆಟ್‌

– ಎಲ್‌ಸಿಎ ತೇಜಸ್‌ ವಿನ್ಯಾಸವನ್ನು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ) ರೂಪಿಸಿದ್ದು, ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿಸಿದೆ.

– ಎಲ್ಲ ಎತ್ತರದಲ್ಲಿಯೂ ಇದು ಸೂಪರ್‌ಸಾನಿಕ್‌, ಗರಿಷ್ಠ ವೇಗದ ಹಾರಾಟ

– 6,560 ಕಿಲೋ ತೂಕ
– 15ಕಿ.ಮೀ. ಎತ್ತರದವರೆಗೆ ಹಾರಾಟ
– 4.4ಕಿ.ಮೀ. ಮೀಟರ್‌ ಎತ್ತರ
– 13.2 ಮೀಟರ್‌ ಉದ್ದ
– 8.20ಮೀಟರ್‌ ರೆಕ್ಕೆಯ ಉದ್ದ


Advertisement

Udayavani is now on Telegram. Click here to join our channel and stay updated with the latest news.

Next