Advertisement

ರಾಯರ ದರ್ಶನದಿಂದ ಜೀವನ ಪಾವನ: ಪ್ರಹ್ಲಾದಾಚಾರ್ಯ

07:30 PM Feb 01, 2021 | Team Udayavani |

ಮುಂಬಯಿ, ಜ. 31: ಕಲಿಯುಗದ ದೇವರೆಂದು ಕರೆಯಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆ ನಮ್ಮೆಲ್ಲರ ಮೇಲಿದೆ. ಪುಷ್ಯ ನಕ್ಷತ್ರದ ಪುಣ್ಯ ದಿನ ಮತ್ತು ಹುಣ್ಣಿಮೆಯ ಗುರುವಾರದ ಶುಭ ದಿನದಲ್ಲಿ ರಾಯರ ಮಠಕ್ಕೆ ಬಂದು ರಾಯರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ನಮಸ್ಕರಿಸಿ ರಾಯರ ಪವಿತ್ರ ಮಂತ್ರಾಕ್ಷತೆ ಪಡೆದುಕೊಂಡು ಬಂದರೆ ನಮ್ಮ ಜೀವನ ಪಾವನವಾಗುತ್ತದೆ. ಕಲಿಯುಗದ ಕಾಮಧೇನು, ಕಲ್ಪವೃಕ್ಷವಾದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಪೂಜಿಸಿದರೆ ಎಂದಿಗೂ ಸಿರಿ ಸಂಪತ್ತಿನ ಕೊರತೆಯಿರದು ಎಂದು ಜೋಗೇಶ್ವರಿ ಪಶ್ಚಿಮದ ರಾಘವೇಂದ್ರ ಮಠದ ಶ್ರೀ ಪ್ರಹ್ಲಾದಾಚಾರ್ಯ ತಿಳಿಸಿದರು.

Advertisement

ಜ. 28ರಂದು ಬೆಳಗ್ಗೆ ಜೋಗೇಶ್ವರಿ ಪಶ್ಚಿಮದ ಶ್ರೀ ರಾಘವೇಂದ್ರ ಮಠದಲ್ಲಿ ನಡೆದ ಶ್ರೀ ರಾಘವೇಂದ್ರ ಅಷೊuàತ್ತರ ಹೋಮ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಿ, ಲೋಕಕ್ಕೆ ಅಂಟಿದ ಕೊರೊನಾ ಮಹಾಮಾರಿಯು ಶೀಘ್ರದಲ್ಲೇ ನಿರ್ಮೂಲನ ಹೊಂದಿ, ಜನತೆ ಸಂತೋಷದಿಂದ ಬಾಳುವಂತಾಗಲಿ ಎಂದು ತಿಳಿಸಿ ಶುಭ ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಹುಣ್ಣಿಮೆಯ ದಿನವಾದ ಗುರುವಾರ ಬೆಳಗ್ಗೆ ರಾಯರಿಗೆ ಪಂಚಾ ಮೃತ ಅಭಿಷೇಕ, ಬೆಳಗ್ಗೆ 9ರಿಂದ ಸಾಮೂಹಿಕ ಶ್ರೀ ರಾಘವೇಂದ್ರ ಅಷೊuàತ್ತರ ಹೋಮ, ಬೆಳಗ್ಗೆ 11ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಮಠದ ವಾಮನಾಚಾರ್ಯರ ನೇತೃತ್ವದಲ್ಲಿ ನೆರವೇರಿತು. ಬಳಿಕ ಹಸ್ತೋದಕ, ರಾಯರಿಗೆ ಮಹಾಮಂಗಳಾರತಿ, ರಾಯರ ಪ್ರಸಾದ ರೂಪದಲ್ಲಿ ಅನ್ನದಾನ ನಡೆಯಿತು.

ಇದನ್ನೂ ಓದಿ:ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿ ಬಜೆಟ್ – ಜನಪರ ಬಜೆಟ್ ಸ್ವಾಗತಿಸಿದ ಜಲಸಂಪನ್ಮೂಲ ಸಚಿವ

ಈ ಸಂದರ್ಭದಲ್ಲಿ ವ್ಯಾಸಾಚಾರ್ಯ, ರಾಘವೇಂದ್ರಾಚಾರ್ಯ, ಜಿ. ಸುರೇಶ್‌, ಸಂಪತ್‌ ಹೆಗ್ಡೆ, ಗಿರೀಶ್‌ ಕರ್ಕೇರ, ಸಂಜೀವ ಪೂಜಾರಿ ಹಾಗೂ ರಾಯರ ಭಕ್ತರು ಉಪಸ್ಥಿತರಿದ್ದು ಸಹ
ಕರಿಸಿದರು. ಕೊರೊನಾ ಲಾಕ್‌ಡೌನ್‌ ಮಾರ್ಗಸೂ ಚಿಗಳಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ರಾಯರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next