Advertisement

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

02:51 PM Nov 20, 2024 | Team Udayavani |

ದಾಂಡೇಲಿ: ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮಾಲು ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ನ.20ರ ಬುಧವಾರ ನಡೆದಿದೆ.

Advertisement

ಕಳೆದ ಕೆಲ ದಿನಗಳಿಂದ ನಗರದ ಐಪಿಎಂ, ಹಳೆ ದಾಂಡೇಲಿ ಕೋಗಿಲಬನ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಜಿಓಎಸ್ ಕಳವು ಮಾಡಲಾಗಿತ್ತು. ಪ್ರತಿನಿತ್ಯ ಒಂದಲ್ಲ ಒಂದು ಕಡೆಗಳಲ್ಲಿ ವಿದ್ಯುತ್ ಕಂಬದ ಜಿಓಎಸ್ ಕಳವಾಗುತ್ತಿತ್ತು. ಈ ಕೃತ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ  ಹೆಸ್ಕಾಂ ಅಧಿಕಾರಿಗಳು ಒಂದು ತಂಡ ರಚಿಸಿ ಕಳವಾಗಿರುವ ವಿದ್ಯುತ್ ಕಂಬದ ಜಿಓಎಸ್ ಹುಡುಕುವ ಕಾರ್ಯಾಚರಣೆ ಆರಂಭಿಸಿತ್ತು.

ನ.20ರ ಬುಧವಾರ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪಟೇಲ್ ವೃತ್ತದ ಬಳಿಯಿರುವ ಸ್ಕ್ರಾಪ್ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಜಿಓಎಸ್ ಗಳಿಗೆ ಸಂಬಂಧಿಸಿದ ಕೆಲ ಕಬ್ಬಿಣದ ಸಾಮಗ್ರಿಗಳು ದೊರತಿವೆ.

ಅಂಗಡಿ ನಡೆಸುತ್ತಿದ್ದವನಿಂದ ಇದು ಎಲ್ಲಿಂದ, ಯಾರಿಂದ ಬಂತು ಎಂಬ ಮಾಹಿತಿ ಕಲೆ ಹಾಕಿ, ಸ್ಕ್ರಾಪ್ ಅಂಗಡಿಯವನೇ ಜಿಓಎಸ್ ಕಳವು ಮಾಡಿದಾತನ ಮನೆಯನ್ನು ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಪೊಲೀಸರಿಗೆ ತೋರಿಸಿಕೊಟ್ಟಿದ್ದಾನೆ.

Advertisement

ಕಳವು ಮಾಡಿರುವ ಆರೋಪಿ ದಾಂಡೇಲಿ ನಗರದ ಬೈಲುಪಾರು‌ ನಿವಾಸಿ ವಿಲ್ಸನ್ ಎಂಬಾತನಾಗಿದ್ದು, ಈತನ ಮನೆಯನ್ನು ಪರಿಶೀಲಿಸಿದಾಗ ಮನೆಯಲ್ಲಿಯೂ ವಿದ್ಯುತ್ ಕಂಬದ ಜಿಓಎಸ್ ಸಾಮಗ್ರಿಗಳು ದೊರೆತಿವೆ.

ಪಿಎಸ್ಐ ಕಿರಣ್ ಪಾಟೀಲ್ ನೇತೃತ್ವದಲ್ಲಿ ನಗರ ಠಾಣೆಯ ಪೊಲೀಸರು ಕಳವು ಮಾಡಿರುವ ವಸ್ತುಗಳನ್ನು ವಶಪಡಿಸಿಕೊಂಡು ಕಳವು ಮಾಡಿದ ಆರೋಪಿ ಮತ್ತು ಕಳವು ಮಾಡಿದ ವಸ್ತುಗಳನ್ನು ಖರೀದಿಸಿದ ಸ್ಕ್ರ್ಯಾಪ್ ಅಂಗಡಿಯಾತನನ್ನು ವಶಕ್ಕೆ ಪಡೆದು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೀಪಕ್ ನಾಯಕ, ಶಾಖಾಧಿಕಾರಿ ಉದಯ ಹಾಗೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು‌, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next