ಮೊದಲೇ ಇಲ್ಲಿನ ಇಕ್ಕಟ್ಟಾದ ರಸ್ತೆ, ಅಧಿಕ ಸಂಖ್ಯೆಯಲ್ಲಿ ಸಂಚರಿಸುವ ವಾಹನಗಳು ಮಧ್ಯೆ ಇಂತಹ ಹೊಂಡ ಸಂಚಾರಿಗಳಿಗೆ ತೀವ್ರ ಸಂಕಟ ತಂದೊಡ್ಡಿದೆ.ಕೆಲವು ತಿಂಗಳ ಹಿಂದೆಯೇ ಇಲ್ಲಿನ ಹೊಂಡ ನಿರ್ಮಾಣವಾಗಿದ್ದು, ಅದು ಮುಂದೆ ದೊಡ್ಡದಾಗುತ್ತಾ ಬಂದಿದೆ.
Advertisement
ದಿನವಿಡೀ ಇಲ್ಲಿ ಸಾವಿರಾರು ಘನ , ಲಘು ವಾಹನಗಳು ಸಂಚರಿಸುತ್ತಿದ್ದು ಮಳೆನೀರು ನಿಂತಿದ್ದರಿಂದ ದ್ವಿಚಕ್ರ ಸವಾರಿಗೆ ಹೊಂಡಗಳು ಗಮನಕ್ಕೆ ಬಾರದೇ ಹೆಚ್ಚಿನ ಅಪಾಯ ತಂದೊಡ್ಡುತ್ತಿದೆ. ಹೊಂಡ ಭರ್ತಿ ಮಾಡಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.