ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಒಟ್ಟು ಆಸ್ತಿ ಮೌಲ್ಯ 50 ಲಕ್ಷ ಕೋಟಿ ರೂ. ದಾಟಿದೆ. ಇದು ಪಾಕಿಸ್ಥಾನದ ಜಿಡಿಪಿ ಗಿಂತ ದುಪ್ಪಟ್ಟು ಹೆಚ್ಚು ಎನ್ನಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ತನ್ನ ಮೌಲ್ಯವನ್ನು ತಿಳಿಯಪಡಿಸಿದ್ದು, ಕಳೆದ ವರ್ಷಕ್ಕಿಂತ ಶೇ.16ರಷ್ಟು ಏರಿಕೆ ಯಾಗಿದೆ. ಈ ಮೂಲಕ ಒಟ್ಟು 51,21,887 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದರ ಮೌಲ್ಯ 43 ಲಕ್ಷ ಕೋಟಿ ರೂ.ನಷ್ಟಿತ್ತು. 24ನೇ ಆರ್ಥಿಕ ವರ್ಷದಲ್ಲಿ ಎಲ್‌ಐಸಿ 40,676 ಕೋಟಿ ರೂ. ಲಾಭ ಗಳಿಸಿದೆ.
ಪಾಕಿಸ್ಥಾನದ ಜಿಡಿಪಿ ಮೌಲ್ಯ 28 ಲಕ್ಷ ಕೋಟಿ ರೂ.ನಷ್ಟಿದೆ. ಆದರೆ ಎಲ್‌ಐಸಿಯ ಮೌಲ್ಯ 51 ಲಕ್ಷ ಕೋಟಿ ರೂ.ನಷ್ಟಿದ್ದು, ಪಾಕಿಸ್ಥಾನದ ಜಿಡಿಪಿಗಿಂತ ದುಪ್ಪಟ್ಟು ಹೆಚ್ಚಾಗಿದೆ.
ಭಾರತ ಆರ್ಥಿಕವಾಗಿ ಸದೃಢ ರಾಷ್ಟ್ರ ಎನಿಸಿಕೊಂಡಿದ್ದರೆ, ಪಾಕಿಸ್ಥಾನ ಸಾಲದ ಸುಳಿಗೆ ಸಿಲುಕಿ ನಲುಗುತ್ತಿದೆ. ಇಂಧನ ಸಮಸ್ಯೆ, ಆಹಾರ ಪೂರೈಕೆ ಸಮಸ್ಯೆ ಜತೆಗೆ ರಾಜಕೀಯ ಅಸ್ತಿ ರತೆಯೂ ಪಾಕಿಸ್ಥಾನವನ್ನು ನಲು ಗಿಸಿದೆ. ಪಾಕಿಸ್ಥಾನದ ಆರ್ಥಿಕತೆ ದುಸ್ಥಿ ತಿಯ ಬಗ್ಗೆ ಅಂತಾರಾಷ್ಟ್ರೀಯ ಹಣ ಕಾಸು ಸಂಸ್ಥೆ (ಐಎಂಡಿ)ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: Alert: ರೆಮಲ್ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆ ಏಳು ಜಿಲ್ಲೆಗಳಿಗೆ ಅಲರ್ಟ್