ನವದೆಹಲಿ: ಎಲ್‌ಐಸಿ ಐಪಿಒ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವುದರಿಂದ ಬಂಡವಾಳ ವಾಪಸಾತಿ ಮೂಲಕ ಸಂಗ್ರಹಿಸಲು ಉದ್ದೇಶಿಸಿರುವ ಒಟ್ಟು ಮೊತ್ತದಲ್ಲಿ ಇಳಿಕೆಯಾಗುವುದು ಬಹುತೇಕ ಖಚಿತ.
ಪ್ರಸಕ್ತ ವರ್ಷ 65 ಸಾವಿರ ಕೋಟಿ ರೂ. ಮೊತ್ತವನ್ನು ಬಂಡವಾಳ ವಾಪಸಾತಿಯಿಂದ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿತ್ತು. ಈ ಪೈಕಿ 50 ಸಾವಿರ ಕೋಟಿ ರೂ.ಗಳನ್ನು ಸರ್ಕಾರಿ ವಿಮಾ ಕಂಪನಿಯಿಂದಲೇ ನಿರೀಕ್ಷಿಸಲಾಗಿತ್ತು. ಕೇಂದ್ರ ಸರ್ಕಾರದ ಪರಿಷ್ಕೃತ ನಿರ್ಧಾರದ ಅನ್ವಯ ಶೇ.3.5 ಷೇರುಗಳ ಮಾರಾಟದ ಮೂಲಕ 21 ಸಾವಿರ ಕೋಟಿ ರೂ.ಗಳನ್ನು ಮಾತ್ರ ಎಲ್‌ಐಸಿ ಐಪಿಒ ಮೂಲಕ ಸಂಗ್ರಹಿಸಲು ಸಾಧ್ಯವಾಗಲಿದೆ.
ಬಿಪಿಸಿಎಲ್, ಪವನ್ ಹನ್ಸ್, ಆರ್‌ಐಎನ್‌ಎಲ್‌ಗಳ ಷೇರುಗಳನ್ನು ಮಾರಲೂ ಸರ್ಕಾರ ಮುಂದಾಗಿದೆ. ಮುಂದಿನ ತಿಂಗಳ ಮೊದಲ ವಾರ ಮಾರುಕಟ್ಟೆ ಪ್ರವೇಶಿಸಲಿರುವ ಎಲ್‌ಐಸಿ ಐಪಿಒದ ಷೇರುಗಳ ಬೆಲೆ 950 ರೂ.ಗಳಿಂದ 1 ಸಾವಿರ ರೂ. ಇರುವ ಸಾಧ್ಯತೆ ಇದೆ.
ಇದನ್ನೂ ಓದಿ : ಜಗತ್ತಿನ ಅತ್ಯಂತ ಹಿರಿಯಜ್ಜಿ ಇನ್ನಿಲ್ಲ, ಇದು ಹಿರಿಯ ವಯಸ್ಸಿನವರೇ ಹೆಚ್ಚಿರುವ ದೇಶವಂತೆ