Advertisement

ವಿಮೋಚನೆ ರಾಜಸತ್ತೆ ವಿರುದ್ದ ನಡೆದ ಹೋರಾಟ

02:26 PM Sep 07, 2022 | Team Udayavani |

ಕಲಬುರಗಿ: ಹೈದ್ರಾಬಾದ್‌ ಸಂಸ್ಥಾನವನ್ನು ಆಳ್ವಿಕೆ ಮಾಡುತ್ತಿದ್ದ ನಿಜಾಮ ಮೀರ್‌ ಉಸ್ಮಾನ್‌ ಅಲಿ ಖಾನ್‌ ಬಳಿಯಿದ್ದ ರಜಾಕರ ಪಡೆಯ ಕಾಶಿಂ ರಜ್ವಿಯ ಉಪಟಳದಿಂದ ಬೇಸತ್ತಿದ್ದ ಈ ಭಾಗದ ಜನತೆ ನಿಜಾಮ ಸರ್ಕಾರದ ವಿರುದ್ಧ ಬಂಡೆದ್ದರ ಫಲವಾಗಿಯೇ 1948 ಸೆ. 17ರಂದು ಈ ಭಾಗಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಪತ್ರಕರ್ತ-ಲೇಖಕ ಡಾ|ಶಿವರಂಜನ ಸತ್ಯಂಪೇಟೆ ತಿಳಿಸಿದರು.

Advertisement

ಜಿಲ್ಲಾಡಳಿತ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ, ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಮೋಚನಾ ಸಪ್ತಾಹ ಕಾರ್ಯಕ್ರಮದಲ್ಲಿ “ವಿಮೋಚನೆ ಅಂದು-ಇಂದು’ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಶರಣಗೌಡ ನಾಮದಾರ್‌, ಅಚ್ಚಪ್ಪಗೌಡ ಸುಬೇದಾರ, ಚನ್ನಬಸಪ್ಪ ಕುಳಗೇರಿ, ರಾಜಾ ವೆಂಕಟಪ್ಪ ನಾಯಕ, ಮಟಮಾರಿ ನಾಗಪ್ಪ, ದತ್ತಾತ್ರೇಯ ಅವರಾದಿ, ಸ್ವಾಮಿ ರಮಾನಂದತೀರ್ಥರು ಸೇರಿದಂತೆ ನೂರಾರು ಜನರು ಈ ಭಾಗದ ಬಿಡುಗಡೆಗಾಗಿ ಹೋರಾಡಿದರು ಎಂದರು.

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶದ ಅಸಮತೋನ ನಿವಾರಣೆಗಾಗಿ ನಂಜುಂಡಪ್ಪ ವರದಿ, 371ನೇ(ಜೆ), ಕೆಕೆಆರ್‌ಡಿಬಿಗಳು ರಚನೆಯಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಎಂದು ಮರು ನಾಮಕರಣವಾದರೂ ಈ ಭಾಗದ ಸಮಸ್ಯೆ ಈವರೆಗೆ ನೀಗಿಲ್ಲ. ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟ ರಾಜಸತ್ತೆ ವಿರುದ್ಧ ನಡೆದ ಪ್ರಜಾಸತ್ತೆಯ ಹೋರಾಟವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ|ಶಮೀಮ್‌ ಸುಲ್ತಾನಾ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್‌ ಮುಖಂಡ ಬಸವರಾಜ ಬಿರಬಿಟ್ಟಿ ಮುಖ್ಯ ಅತಿಥಿಯಾಗಿದ್ದರು. ಜಗನ್ನಾಥ ಸೂರ್ಯವಂಶಿ ನೇತೃತ್ವ ವಹಿಸಿದ್ದರು. ಶಿವಾನಂದ ಮಠಪತಿ, ಸಂತೋಷ ಹಂಪ್ಳಿ, ಮಂಜುನಾಥ ನಾಲವಾರಕರ್‌, ಸಚಿನ್‌ ಫರಹತಾಬಾದ, ದತ್ತು ಭಾಸಗಿ ವೇದಿಕೆಯಲ್ಲಿದ್ದರು. ಜ್ಯೋತಿರೆಡ್ಡಿ ನಿರೂಪಿಸಿದರು. ಡಾ|ಮೀನಾಕ್ಷಿ ವಿಜಯಕುಮಾರ ಸ್ವಾಗತಿಸಿದರು. ಸಿದ್ಧಾರ್ಥ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ|ಮಹಾದೇವ ಬಡಿಗೇರ, ಡಾ| ಪದ್ಮರಾಜ ರಾಸಣಗಿ, ಪ್ರಕಾಶ ಪಾಟೀಲ, ಸೂರ್ಯಕಾಂತ ಸೊನ್ನದ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next