Advertisement

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

07:58 PM Mar 26, 2024 | Team Udayavani |

ನ್ಯೂಯಾರ್ಕ್‌: ಸಲಿಂಗ ಜೋಡಿಯಾಗಿ ಮದುವೆಯಾಗಲು ಹೊರಟು ಭಾರೀ ಸುದ್ದಿಯಾಗಿದ್ದ ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯುಯೆನ್ಸರ್‌ ಗಳಾದ ಭಾರತ ಮೂಲದ ಅಂಜಲಿ ಚಕ್ರ ಮತ್ತು ಪಾಕಿಸ್ತಾನ ಮೂಲದ ಸೂಫಿ ಮಲಿಕ್‌ ಅವರ ಮದುವೆ ಮುರಿದುಬಿದ್ದಿದೆ!

Advertisement

2019ರಲ್ಲಿ ಸಲಿಂಗ ಸಂಬಂಧದಿಂದಾಗಿ ಇವರಿಬ್ಬರು ಸುದ್ದಿಯಲ್ಲಿದ್ದರು. ಆದರೆ ಇಷ್ಟು ವರ್ಷಗಳ ಪರಸ್ಪರ ಪ್ರೇಮವು ಬ್ರೇಕ್‌ ಅಪ್‌ನಲ್ಲಿ ಅಂತ್ಯಗೊಂಡಿದೆ.

“ಸೂಫಿ ಮಲಿಕ್‌ ನನಗೆ ದ್ರೋಹ ಬಗೆದಳು. ಹೀಗಾಗಿ ನಮ್ಮ ಮದುವೆಯನ್ನು ರದ್ದು ಮಾಡುತ್ತಿದ್ದೇವೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಂಜಲಿ ಚಕ್ರ ಬರೆದುಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಅಂಜಲಿ, ಸೌತ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಈವೆಂಟ್‌ ಪ್ಲ್ರಾನರ್‌ ಆಗಿ ವೃತ್ತಿ ಮಾಡುತ್ತಿದ್ದಾರೆ. ಜತೆಗೆ ಪ್ರವಾಸ, ಸೌಂದರ್ಯ, ಈವೆಂಟ್‌ ಪ್ಲ್ರಾನಿಂಗ್‌ ಕುರಿತು ಬ್ಲಾಗ್‌ ಬರೆಯುತ್ತಾರೆ.

“ಮದುವೆಗೆ ಕೆಲವೇ ವಾರಗಳಿರುವಂತೆ ನಾನು ಅಂಜಲಿಗೆ ದ್ರೋಹವೆಸಗಿ, ಗುರುತರ ತಪ್ಪು ಮಾಡಿದ್ದೇನೆ. ನನ್ನ ತಿಳಿವಳಿಕೆ ಮೀರಿ ಅವಳಿಗೆ ತುಂಬ ನೋಯಿಸಿದ್ದೇನೆ’ ಎಂದು ಇನ್ಸ್‌ಸ್ಟಾದಲ್ಲಿ ಸೂಫಿ ಮಲಿಕ್‌ ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next