Advertisement
ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುರತ್ಕಲ್‌ನಲ್ಲಿ ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಸಕೀಟ್ ಹೌಸ್‌ನಲ್ಲಿ ಲೋಕಾ ಯುಕ್ತಕ್ಕೆ ಸಾರ್ವಜನಿಕರಿಂದ ಬಂದ ಕೆಲವು ದೂರುಗಳ ವಿಚಾರಣೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು.ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಮನೆಗಳು ದೂರ ದೂರ ಇರುವುದರಿಂದ ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಆಹಾರ ಸ್ವೀಕರಿಸಲು ಮುಂದಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದರು.
ನಗರದ ಮಾಲೆಮಾರ್‌ನಿಂದ ಫೋರ್ತ್‌ಮೈಲ್- ಬಂಗ್ರ ಕೂಳೂರು ವರೆಗಿನ ರಾಜ ಕಾಲುವೆಯಲ್ಲಿ ಮಲಿನ ನೀರು ನಿಂತು ಸುತ್ತಮುತ್ತಲ ಸುಮಾರು 1,000 ಮನೆಗಳ ಪರಿಸರದಲ್ಲಿ ಮಾಲಿನ್ಯ ಉಂಟಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾ| ವಿಶ್ವನಾಥ ಶೆಟ್ಟಿ ಸೂಚಿಸಿದರು. ಬಂಗ್ರ ಕೂಳೂರಿನ ರಾಜ ಕಾಲುವೆಯ ಸಮಸ್ಯೆ ಕುರಿತಂತೆ ಸುರೇಶ್ ಉಡುಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣ ಈಗ ವಿಚಾರಣೆಯಲ್ಲಿದೆ. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆ ಹರಿಸಲು ಅನುಕೂಲವಾಗುವಂತೆ ಮಹಾ ನಗರ ಪಾಲಿಕೆ, ಎಂಎಸ್‌ಇಝಡ್, ಎನ್‌ಎಚ್‌ಎಐ, ಮೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಲೋಕಾಯುಕ್ತರು ಸುದ್ದಿಗಾರರಿಗೆ ತಿಳಿಸಿದರು.
Related Articles
Advertisement
ಕಂಕನಾಡಿಯ ಕಪಿತಾನಿಯೊ ಸಮೀಪದ ರೆಡ್ ಬಿಲ್ಡಿಂಗ್ ಲೇನ್‌ನ ಒಳ ಚರಂಡಿ ನೀರಿನ ಸಮಸ್ಯೆ ಕುರಿತಂತೆ 2012ರಿಂದ ಇರುವ ವಿವಾದವನ್ನು ಕೂಡ ಸೋಮವಾರ ಬಗೆಹರಿಸಲಾಗಿದೆ. ಸಮಸ್ಯೆ ಪರಿಹರಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.