Advertisement
ಕುರುಡುತನವು ಕಾರ್ನಿಯಾಲ್ ದುರ್ಬಲತೆಯಿಂದಾಗಿ, ಕಣ್ಣಿನ ಪೊರೆ ಮತ್ತು ಗ್ಲುಕೋಮದಿಂದಾಗಿ ಉಂಟಾಗುತ್ತದೆ. ಈ ದುರ್ಬಲತೆಯನ್ನು ನೇತ್ರದಾನ ಮಾಡುವುದರ ಮೂಲಕ ಗುಣಪಡಿಸಬಹುದು. ಮರಣದ ಅನಂತರ ಇತರ ಅಂಗಾಂಗಗಳನ್ನು ದಾನ ಮಾಡಿದ ಹಾಗೆಯೇ ಕಣ್ಣಿನ ಕಾನೀìಯಾ ಸಹ ದಾನ ಮಾಡುವ ಮೂಲಕ ಅಂದರ ಜೀವನಕ್ಕೆ ಬೆಳಕನ್ನು ಚೆಲ್ಲಬಹುದು. ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ.
Related Articles
- ನೇತ್ರದಾನ ಮಾಡಲು ಯಾವುದೇ ವಯಸ್ಸಿನ, ಲಿಂಗದ, ಧರ್ಮದ, ರಕ್ತದ ಗುಂಪುಗಳ ನಿರ್ಬಂಧ ವಿಲ್ಲ ಮರಣ ಅನಂತರ ಯಾರು ಬೇಕಾದರೂ ನೇತ್ರದಾನವನ್ನು ಮಾಡಬಹುದು.
- ಕಣ್ಣಿನ ಪೊರೆ ಸಣ್ಣ ದೃಷ್ಟಿ ದೋಷ ಆಪರೇಟೆಡ್ ಕಣ್ಣುಗಳು ಅಥವಾ ಸಾಮಾನ್ಯ ಕಾಯಿಲೆ ಇರುವ ಯಾವ ವ್ಯಕ್ತಿಯಾದರೂ ನೇತ್ರದಾನ ಮಾಡಬಹುದು
- ಒಬ್ಬ ವ್ಯಕ್ತಿ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರಿಗೆ ದೃಷ್ಟಿ ನೀಡಿದಂತಾಗುತ್ತದೆ. ನೇತ್ರದಾನ ಮಾಡಿದ ನಂತರ ದಾನಿಯ ಮುಖದಲ್ಲಿ ಯಾವುದೇ ಗಾಯವಾಗಲಿ ಮುಖ ವಿಕಾರವಾಗುವುದಾಗಲಿ ಆಗುವುದಿಲ್ಲ ಮೃತ ವ್ಯಕ್ತಿಯಿಂದ ಕಣ್ಣನ್ನು ತೆಗೆಯುವ ಪ್ರಕ್ರಿಯೆಗೆ 15 ರಿಂದ 20 ನಿಮಿಷ ಸಾಕಾಗುತ್ತದೆ
- ನೇತ್ರದಾನೀಯ ಹಾಗೂ ಸ್ವೀಕರಿಸುವವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ. ನೇತ್ರದಾನ ಮಾಡುವುದಕ್ಕಾಗಿ ಸ ರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳಲ್ಲಿ ಉಚಿತವಾಗಿ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ.
- ನೇತ್ರದಾನ ಮಾಡಲು ಇಚ್ಚಿಸುವ ವ್ಯಕ್ತಿಗಳು ನೇತ್ರ ಬ್ಯಾಂಕ್ ನಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು. ಆ ವ್ಯಕ್ತಿಯು ಮರಣಕ್ಕೀಡಾದ ನಂತರ ವಿಷಯವನ್ನು ಕಣ್ಣಿನ ಬ್ಯಾಂಕಿಗೆ ತಿಳಿಸಬೇಕು. ಅವರ ತಂಡವು ಬಂದು ಕಾರ್ನಿಯಾವನ್ನು ಸಂಗ್ರಹಿಸಿಕೊಳ್ಳುತ್ತದೆ. ರಕ್ತದೊತ್ತಡ ಮಧುಮೇಹದಂತಹ ದೀರ್ಘಕಾಲದ ಕಾಯಿಲೆ ಇದ್ದು ಮೃತಪಟ್ಟವರು ಕೂಡ ತಮ್ಮ ನೇತ್ರಗಳನ್ನು ದಾನ ಮಾಡಬಹುದು.
Advertisement
ನೇತ್ರದಾನದ ವಾಗ್ಧಾನ ಮಾಡಿದವರೆಲ್ಲರ ನೇತ್ರಗಳನ್ನು ಇನ್ನೊಬ್ಬರಿಗೆ ಜೋಡಿಸಲು ಕೆಲವೊಂದು ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. 85ವರ್ಷ ಮೇಲ್ಪಟ್ಟವರ ಹಾಗೂ ಹೆಪಟೈಟಿಸ್, ವೈರಲ್ ಸಮಸ್ಯೆಗಳಿಂದ ಮೃತಪಟ್ಟವರ ನೇತ್ರಗಳನ್ನು ಜೋಡಣೆ ಮಾಡಲು ಆಗುವುದಿಲ್ಲ. ದೀಪದಿಂದ ದೀಪ ಬೆಳಗು ಎನ್ನುವಂತೆ ಒಂದು ಕಣ್ಣಿನ ಜ್ಯೋತಿ ಇನ್ನೊಂದು ದೃಷ್ಟಿ ಬೆಳಗಲಿ ಕಣ್ಣಿನ ಅಂಧತ್ವದೊಡನೆ ನೇತ್ರದಾನದ ಕುರಿತಾದ ಪೂರ್ವಾಗ್ರಹಗಳು ಅಳಿಯಲಿ , ತನ್ಮೂಲಕ ಬಾಳು ಬೆಳಕಾಗಲಿ.
– ಚೇತನ ಭಾರ್ಗವ
ಬೆಂಗಳೂರು