Advertisement
ಬುಧವಾರ ಜಿಲ್ಲಾ, ತಾಲೂಕು ಕೇಂದ್ರ, ಶಾಲಾ ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ, ಕನ್ನಡ ಹಾಡುಗಳ ಗಾಯನ, ರಂಗೋಲಿ, ಕನ್ನಡದ ಜ್ಯೋತಿ ಬೆಳಗಿಸುವುದು, ಕೆಂಪು -ಹಳದಿ ಗಾಳಿಪಟ ಹಾರಾಟ, ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಹೀಗೆ ರಾಜ್ಯವ್ಯಾಪಿ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಲಿದೆ.
ಮನೆಗಳ ಮುಂದೆ ಕೆಂಪು-ಹಳದಿ ಕನ್ನಡ ಬಾವುಟವನ್ನು ಹಾರಿಸಿ
ರಾಜ್ಯೋತ್ಸವವನ್ನು ಬಿಂಬಿಸುವ ರಂಗೋಲಿಗಳನ್ನು ಹಾಕಿ
ಎಲ್ಲ ಮನೆಗಳಲ್ಲಿ ಬೆಳಗ್ಗೆ 9 ಗಂಟೆಗೆ ನಾಡಗೀತೆ ಮೊಳಗಲಿ
ಸಂಜೆ 5 ಗಂಟೆಗೆ ನಿಮ್ಮ ಊರಿನ ಮೈದಾನದಲ್ಲಿ ಕೆಂಪು-ಹಳದಿ ಗಾಳಿಪಟ ಹಾರಿಸಿ
ಸಂಜೆ 7ಕ್ಕೆ ಮನೆಗಳಲ್ಲಿ ಹಣತೆ ಹಚ್ಚಿ ಕನ್ನಡ ಜ್ಯೋತಿ ಬೆಳಗಿಸಿ “ಕರ್ನಾಟಕ ಪಾಕ್” ತಯಾರಿ
ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ, ಮೈಸೂರಿನಲ್ಲಿ ಮಾಜಿ ಸಿಎಂ ದೇವರಾಜ ಅರಸು ಪ್ರತಿಮೆ ನಿರ್ಮಾಣ, ಸಿದ್ಧಾಪುರದ ಭುವನೇಶ್ವರಿ ಪ್ರತಿಮೆ ಜೀರ್ಣೋದ್ಧಾರವನ್ನು ಕೈಗೊಳ್ಳುವುದಾಗಿ ಸರಕಾರ ಭರವಸೆ ನೀಡಿದೆ. 50 ಸಾಧಕ ಮಹಿಳೆಯರಿಗೆ ಸಮ್ಮಾನ, ಕಲೆ, ಸಾಹಿತ್ಯ, ಜಾನಪದ, ಸಂಸ್ಕೃತಿ ಕುರಿತು 50 ಪುಸ್ತಕ ಬಿಡುಗಡೆ, ಮೈಸೂರುಪಾಕ್ 50ರ ನೆನಪಿಗೆ ಕೆಎಂಎಫ್ ಸಹಯೋಗದಲ್ಲಿ “ಕರ್ನಾಟಕಪಾಕ್’ ತಯಾರಿ ಕಾರ್ಯಕ್ರಮ ನಡೆಯಲಿದೆ.
Related Articles
Advertisement