Advertisement
2002 ರಲ್ಲಿ ನನ್ನ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮೇಳನ ಮಂಗಳೂರಿನಲ್ಲಿ ನಡೆದಿದ್ದು ತದ ನಂತರ ಅಂತಹ ಕಾರ್ಯ ನಡೆದಿಲ್ಲವಾದ್ದರಿಂದ ಪುಣೆಯಲ್ಲಿನ ಬಂಟರು ಒಗ್ಗಟ್ಟಿನಿಂದ ವಿಶ್ವದ ಎಲ್ಲಾ ಬಂಟರನ್ನು ಒಂದೇ ಛತ್ರದಲ್ಲಿ ಪುಣೆ ಯಲ್ಲಿ ಸೇರಿಸಿ ವಿಶ್ವ ಬಂಟ ಸಮ್ಮೇಳ ನವನ್ನು ಆಯೋಜಿಸಬೇಕಾಗಿದೆ. ಆ ಮೂಲಕ ನಮ್ಮ ಸಮಾಜದ ಒಗ್ಗಟ್ಟನ್ನು ಸಾರಬೇ ಕಾಗಿದೆ. ಪುಣೆಯಲ್ಲಿನ ಬಂಟರಿಗೆ ಇಂತಹ ಸಾಮರ್ಥ್ಯವಿದ್ದು ಈ ಕಾರ್ಯಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಇಂಟನ್ಯಾಶನಲ್ ಬಂಟ್ಸ್ ವೆಲ್ಫೆàರ್ ಟ್ರಸ್ಟ್ ಇದರ ಅಧ್ಯಕ್ಷ ಹಾಗೂ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ಕಾರ್ಯಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
Related Articles
Advertisement
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಉಪಾಧ್ಯಕ್ಷರುಗಳಾದ ಸುರೇಶ್ ಎಸ್. ಶೆಟ್ಟಿ, ಆನಂದ್ ಶೆಟ್ಟಿ ಮಿಯ್ನಾರು, ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಗೌರವ ಕೋಶಾಧಿಕಾರಿ ಅರವಿಂದ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಸರೋಜಿನಿ ಜಯ ಶೆಟ್ಟಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್ ಶೆಟ್ಟಿ, ಕಾರ್ಯದರ್ಶಿ ಉಷಾ ಉಲ್ಲಾಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದ ವತಿಯಿಂದ ಇಂಟನ್ಯಾಶನಲ್ ಬಂಟ್ಸ್ ವೆಲ್ಫೆàರ್ ಟ್ರಸ್ಟ್ ಇದರ ಅಧ್ಯಕ್ಷ ಎ. ಸದಾನಂದ ಹಾಗೂ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಶಿವರಾಮ ಶೆಟ್ಟಿ ಹಿರಿಯಡ್ಕ, ಗಣೇಶ್ ಹೆಗ್ಡೆ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು. ಪ್ರಫುಲ್ಲಾ ವಿ. ಶೆಟ್ಟಿ, ಶಾಲಿನಿ ಮಹೇಶ್ ಶೆಟ್ಟಿ ಹಾಗೂ ಲತಾ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ವಾಚಿಸಿದರು. ಕೆಮೂ¤ರು ಸುಧಾಕರ ಶೆಟ್ಟಿ ಮತ್ತು ಶಾಲಿನಿ ಎಂ. ಶೆಟ್ಟಿ ಸಮ್ಮಾನ ಪತ್ರವನ್ನು ವಾಚಿಸಿದರು. ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನಗಳನ್ನು ಅತಿಥಿಗಳ ಹಸ್ತದಿಂದ ವಿತರಿಸಲಾಯಿತು. ಬಹುಮಾನ ವಿಜೇತರ ಹೆಸರನ್ನು ಸ್ನೇಹಲ್ ನಾರಾಯಣ ಶೆಟ್ಟಿ ಹಾಗೂ ನಮ್ರತಾ ಶೆಟ್ಟಿ ವಾಚಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಲೋಹಿತ್ ಶೆಟ್ಟಿ ನಿರೂಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ತಾರಾನಾಥ ರೈ ಸೂರಂಬೈಲ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರುಗಳಿಂದ ನೃತ್ಯ ಪ್ರದರ್ಶನ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಮನೋರಂಜನೆಯ ಅಂಗವಾಗಿ ಪ್ರವೀಣ್ ಮರ್ಕಮೆ ಮತ್ತು ತಂಡದವರಿಂದ ಕುಸಲ್ದ ಕುರ್ಲರಿ ಹಾಸ್ಯ ಕಾರ್ಯಕ್ರಮ ನಡೆಯಿತು. ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರುಗಳು ಹಾಗೂ ಸಮಾಜ ಬಾಧವರು ಹೆಚಿØನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನಮ್ಮ ಸಮಾಜ ಬಾಂಧವರ ಪ್ರೀತಿ ವಿಶ್ವಾಸಗಳೊಂದಿಗೆ ನಮ್ಮ ಸಂಘವು ಬೆಳೆಯುತ್ತಿದ್ದು ಇಂದಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಹಕಾರ ನೀಡಿದ ಅಂತೆಯೇ ಸಂಘದ ಮೇಲಿನ ಅಭಿಮಾನದಿಂದ ಆಗಮಿಸಿದ ಎÇÉಾ ಸಮಾಜ ಬಾಂಧವರಿಗೆ ಹಾಗೂ ಅತಿಥಿಗಣ್ಯರಿಗೆ ಕೃತಜ್ಞತೆಗಳು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಎÇÉಾ ಸದಸ್ಯರೂ ಸಂಘದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವಲ್ಲಿ ಬಹಳಷ್ಟು ಶ್ರಮಿಸಿದ್ದು ಅವರೆಲ್ಲರಿಗೂ ಕೃತಜ್ಞತೆಗಳು. ಮುಂದೆಯೂ ನಮ್ಮದೇ ಸಂಘವೆಂಬ ಭಾವನೆಯಿಂದ ಸಂಘದೊಂದಿಗೆ ಬೆರೆತು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸುವಲ್ಲಿ ಸಂಘವು ಮಾಡುತ್ತಿರುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು.
ನಾರಾಯಣ ಕೆ. ಶೆಟ್ಟಿ (ಅಧ್ಯಕ್ಷರು : ಬಂಟ್ಸ್ ಅಸೋಸಿಯೇಶನ್ ಪುಣೆ)
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು