Advertisement
ಅತ್ತಾಗ, ಕೋಪಗೊಂಡಾಗ ಮುಖದ ಸ್ನಾಯುಗಳು ಬಿಗಿದುಕೊಳ್ಳುತ್ತವೆ ಹಾಗೂ ಮುಖ ಕಪ್ಪಾಗಿ ಬಿಡುತ್ತದೆ, ಕಳಾ ಹೀನ ವಾಗು ತ್ತದೆ. ಆದರೆ ನಕ್ಕಾಗ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಮುಖ ಅರಳುತ್ತದೆ. ಕಣ್ಣುಗಳು ಕಾಂತಿಯುತ ವಾಗುತ್ತವೆ. ಕೋಪಗೊಂಡ ಮುಖ, ಗಂಟಿಕ್ಕಿಕ ೊಂಡ ಮುಖ ಕತ್ತಲೆಯಂತೆ ಅನಿಸಿದರೆ ನಗುವ ಮುಖ ಬೆಳಕಿನಂತೆ ಕಾಣುತ್ತದೆ. ಮುಖಕ್ಕೆ ಸೌಂದರ್ಯವನ್ನೂ, ಆಕರ್ಷಣೀಯತೆಯನ್ನೂ ನೀಡಲು ಕೇವಲ ನಗುವಿಗಷ್ಟೇ ಸಾಧ್ಯ. ನಗುವ ಮುಖವೊಂದನ್ನು ಕಂಡಾಗ ನಮಗೆ ನಿರಾ ಳತೆ ಅನಿಸಿದರೆ ಗಂಟಿಕ್ಕಿದ ಮುಖ ಕಂಡಾಗ ಉಸಿರುಗಟ್ಟಿದ ಅನುಭವವಾಗುತ್ತದೆ.
ವಕ್ರ ರೇಖೆ. ಸೌಮ್ಯ ಸ್ವಭಾವ ಇದ್ದರಷ್ಟೇ ಮನಬಿಚ್ಚಿ ನಗಲು ಸಾಧ್ಯ. ಸಣ್ಣಸಣ್ಣ ವಿಷಯಗಳನ್ನೂ ಆಸ್ವಾದಿಸುವ ಸರಳ ಮನಸ್ಸಿನವರಷ್ಟೇ ಸುಲಭವಾಗಿ ನಗಬಲ್ಲರು. ಸ್ವಭಾವದಲ್ಲಿ ಒರಟರಾದವರು, ಅಹಂಕಾರ ತುಂಬಿ ದವರು, ಒಣ ಪ್ರತಿಷ್ಠೆಯ ಜನರು, ಕ್ರೌರ್ಯ ತುಂಬಿದವರು ಮುಂತಾದ ಜನರು ನಗುವುದು ಕಡಿಮೆ. ನಗು ಮುಖ ತೋರಿದರೆ ತಮಗಿರುವ ಗೌರವ, ತಮ್ಮ ಕುರಿತಾದ ಗೌರವ ಹೊರಟು ಹೋಗು ತ್ತದೆಂದು ಅವರು ಭಾವಿಸುತ್ತಾರೆ.
ನಗು ಉತ್ತಮವಾದುದೆಂದು ಯಾವಾ ಗಲೂ ನಗುತ್ತಿದ್ದರೆ ಜನರು ನಮ್ಮನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಾರೆ. ನಮ್ಮನ್ನು ಅಪ್ರಬುದ್ಧರು, ಶುದ್ಧ ಹೃದಯದವರು, ಜವಾಬ್ದಾರಿ ರಹಿತರು ಎಂದೆಲ್ಲ ಭಾವಿಸಿ ನಮ್ಮ ಒಳ್ಳೆಯತನವನ್ನು ದುರುಪಯೋಗಿಸಿಕೊಳ್ಳಲು ಹವಣಿ ಸು ತ್ತಾರೆ. ಆದುದರಿಂದ ಅಗತ್ಯ ಬಂದಾಗ ತಕ್ಕಮಟ್ಟಿನ ಬಿಗುತನವೂ ನಮಗಿರಬೇಕು. ಆದರೆ ನಗುವನ್ನು ಸ್ಥಾಯೀ ಭಾವವಾಗಿ ಇಟ್ಟುಕೊಳ್ಳಬೇಕು. ನಿರಂತರವಾದ ಅನಗತ್ಯ ಬಿಗುತನದಿಂದ ಸ್ನಾಯುಗಳಿಗೆ ಒತ್ತಡ ನೀಡಿದರೆ ಆ ಬಿಗುತನ ಕ್ರಮೇಣ ಮನಸ್ಸು ಹಾಗೂ ಶರೀರವನ್ನು ವ್ಯಾಪಿಸುತ್ತದೆ. ಆದುದರಿಂದ ಪ್ರಸನ್ನಭಾವವನ್ನು ಬಿಡದೇ, ಅತೀ ಚಿಂತೆ ಮಾಡದೇ ಹಸನ್ಮುಖರಾಗಿ ಬದುಕಬೇಕು.
ಕೆಲವೊಮ್ಮೆ ನಗು ನಮ್ಮನ್ನು ಮೋಸಗೊಳಿಸಲೂಬಹುದು. ಇದಾಗದಿರಲು ನಮಗೆ ಕೃತಕ ನಗು ಮತ್ತು ಸಹಜ ನಡುವಿನ ವ್ಯತ್ಯಾಸ ತಿಳಿದಿರಬೇಕು. ಕೃತಕ ನಗು ಕೇವಲ ತುಟಿ ಹಾಗೂ ಹಲ್ಲುಗಳ ಸಮೀಪ ಮಾತ್ರ ಹರಡಿರುತ್ತದೆ. ಆದರೆ ಸಹಜ ಹಾಗೂ ಪ್ರಾಮಾಣಿಕವಾದ ನಗು ಇಡೀ ಮುಖದಲ್ಲಿ ವ್ಯಾಪಿಸಿರುತ್ತದೆ. ಕಣ್ಣುಗಳು ಹೊಳೆಯುತ್ತವೆ ಹಾಗೂ ಕಿರಿದಾಗುತ್ತವೆ. ಗಲ್ಲಗಳು ಹಿಂದಕ್ಕೆ ಎಳೆಯಲ್ಪಟ್ಟು ಹೊಳೆಯುತ್ತವೆ. ನಗು ನಿಂತರೂ ನಗುವಿನ ಛಾಯೆ ಮುಖದಿಂದ ಮಾಯವಾಗುವುದಿಲ್ಲ. ಅಸಭ್ಯವಾಗಿ ನಗುವವರು ಯಾರು, ಕೃತಕ ನಗು ಯಾರದ್ದು, ವ್ಯಂಗ್ಯ ನಗು ಯಾರದ್ದು ಎಂಬುದೆಲ್ಲ ನಮಗೆ ಆಳವಾದ ವೀಕ್ಷಣೆಯಿಂದ ಅರಿವಾಗುತ್ತದೆ. ಆದುದರಿಂದ ನಮ್ಮ ಮುಂದಿರುವವರ ನಗು ಯಾವ ರೀತಿಯ¨ªೆಂದು ಅಳೆಯುವ ವಿವೇಕ ನಮ್ಮದಾಗಿಸೋಣ. ಪ್ರಾಮಾಣಿಕತೆಯಿಂದ, ನಿರ್ಮಲವಾಗಿ ನಗೋಣ. ಈ ಸಣ್ಣ ಬದುಕಲ್ಲಿ ಖುಷಿಯಿಂದ ಬಾಳ್ಳೋಣ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ
Related Articles
Advertisement