ಮಂಡ್ಯ: ವಿಶ್ವಾಸಮತಗಳಿಸಲು ಬಿಜೆಪಿ ಆಮಿಷವೊಡ್ಡಿದೆ ಎನ್ನಲಾದ ಆಡಿಯೋ-ವಿಡಿಯೋ ಟೇಪ್‌ಗ್ಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ಅದರ ಹಿಂದಿ ರುವ ಸತ್ಯವನ್ನು ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಗ್ರಹಪಡಿಸಿದರು.
ಕಾರ್ಯನಿಮಿತ್ತ ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಆಡಿಯೋ-ವಿಡಿಯೋ ಟೇಪ್ ಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಅವರಿಗಿದೆ.
ಬೇಕಿದ್ದರೆ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಲಿ. ಇಲ್ಲದಿದ್ದರೆ ಅವೆಲ್ಲವೂ ಫೇಕ್ ಕ್ಯಾಸೆಟ್‌ಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಸೇರಿ ಮಾಡಿರುವುದು ಎನ್ನುವುದು ನಿಶ್ಚಯ ವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು.
ಬದಲಾವಣೆ ಬಯಸಿದ್ದರು: ರಾಜ್ಯದ ಜನರು ಬದಲಾವಣೆ ಬಯಸಿದ್ದರು. ಆದರೆ, ಚುನಾವಣೆಯಲ್ಲಿ ಜನತೆ ನೀಡಿದ ಜನಾದೇಶಕ್ಕೆ ವಿರುದಟಛಿವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಅಧಿಕಾರ ನಡೆಸಲು ಮುಂದಾಗಿವೆ. ಬಿಹಾರ,ಮಣಿಪುರ, ಗೋವಾ, ಕಾಶ್ಮೀರದಲ್ಲಿ ಜನಾದೇಶ ಯಾರ ಪರ ಬಂದಿದೆಯೋ ಅವರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ನಮಗೂ ಮುಂದೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು. ರಾಜ್ಯಪಾಲರ ತಪ್ಪಿಲ್ಲ: ಯಾವ ಪಕ್ಷಕ್ಕೆ ಹೆಚ್ಚು ಬಹುಮತ ಬಂದಿದೆಯೋ ಆ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದಾರೆ. ಇದರಲ್ಲಿ ಅವರ ಅಸಾಂವಿಧಾನಿಕ ನಡೆ ಇಲ್ಲವೇ ಇಲ್ಲ. ಬಹುಮತ ಸಾಬೀತಿಗೆ ಒಂದು ತಿಂಗಳು ಸಮಯಾವಕಾಶ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಸುಪ್ರೀಂಕೋರ್ಟ್ ಸಂದೇಹಗಳು ಸೃಷ್ಟಿಯಾಗುವುದು ಬೇಡವೆಂಬ ಕಾರಣಕ್ಕೆ ವಿಶ್ವಾಸ ಮತದ ದಿನವನ್ನು ಕಡಿತಗೊಳಿಸಿದೆಯಷ್ಟೇ. ಇದರಲ್ಲಿ ಯಾವ ಪಕ್ಷದ ಪರವಾಗಿಯೂ ರಾಜ್ಯಪಾಲರು ನಡೆದುಕೊಂಡಿಲ್ಲ. ಸಂವಿಧಾನಬದಟಛಿವಾಗಿಯೇ ತೀರ್ಮಾನ ಕೈಗೊಂಡಿದ್ದಾರೆ. ಆರೋಪಗಳನ್ನು ಮಾಡುವವರು ಮಾಡುತ್ತಲೇ ಇರುತ್ತಾರೆ. ಅವರಿಗೆ ಬೇರೆ ಕೆಲಸವಿಲ್ಲ. ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.