Advertisement

ಇನ್ನಾದರೂ ಅಚ್ಛೆ ದಿನ್‌ ಜಾರಿಗೆ ಮುಂದಾಗಲಿ: ಪೇಜಾವರ ಶ್ರೀ

06:20 AM Jun 04, 2018 | Team Udayavani |

ರಾಯಚೂರು: “ಇನ್ನಾದರೂ ಪ್ರಧಾನಿ ನರೇಂದ್ರ ಮೋದಿ ಅಚ್ಛೆ ದಿನ್‌ ಜಾರಿಗೆ ಮುಂದಾಗಲಿ’ ಎಂದು ಪೇಜಾವರ ಮಠದ ಪೀಠಾಧಿಪತಿ ಶ್ರೀವಿಶ್ವೇಶ ತೀರ್ಥರು ಸಲಹೆ ನೀಡಿದ್ದಾರೆ.

Advertisement

ಭಾನುವಾರ ಮಂತ್ರಾಲಯದಲ್ಲಿ ಹಮ್ಮಿಕೊಂಡಿದ್ದ ತಾತ್ಪರ್ಯ ಚಂದ್ರಿಕಾ ಮಂಗಳ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಧಾನಿ ಅವರ ಆಡಳಿತ ವೈಖರಿ ಬಗ್ಗೆ ಅಸಮಾಧಾನವಿಲ್ಲ, ಆದರೆ, ಮೋದಿಯವರು ಚುನಾವಣೆ ಪೂರ್ವದಲ್ಲಿ ಕಪ್ಪು ಹಣ ತರಲಾಗುವುದು ಹಾಗೂ ಗಂಗಾ ನದಿ ಶುದ್ಧೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಎರಡೂ ಕೆಲಸಗಳನ್ನು ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಅವಧಿಯಿದ್ದು, ಈಗಲಾದರೂ ಭರವಸೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಿ. ಅಚ್ಛೆ ದಿನ್‌ ಆಯೇಗಾ ಎಂದು ಹೇಳಿದ್ದ ಅವರು ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಬೇಕು ಎಂದರು.

ಸಂಕೋಚ ಮನೋಭಾವನೆ ಇದೆ: ಜೂ.13ರಂದು ಉಡುಪಿ ಮಠದಲ್ಲಿ ಇಫ್ತಿಯಾರ್‌ ಕೂಟ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಯಾವುದೇ ಮಠಗಳ ವಿರೋಧವಿಲ್ಲ. ಆದರೆ, ಇಫ್ತಿಯಾರ್‌  ಕುರಿತು ಮುಸ್ಲಿಂ ಸಮುದಾಯದವರಲ್ಲಿ ಸಂಕೋಚ ಮನೋಭಾವನೆ ಇದೆ. ಈ ಕುರಿತು ಅವರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next