Advertisement

ಉದ್ಯೋಗ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟತೆ ಸಿಗಲಿ

11:34 PM Oct 29, 2022 | Team Udayavani |

“ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022′ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಹಿತವನ್ನು ಬಯ ಸಿದೆಯೇ ಹೊರತು ಅದು ಕೇವಲ ರಾಜ ಕೀಯ ಉತ್ಸುಕವಾಗಿಲ್ಲ. ಈ ವಿಚಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅದ್ಭುತ ಹೆಜ್ಜೆಯಿರಿಸಿದೆ.

Advertisement

ಈ ಕೆಲಸ ಆರವತ್ತೈದು ವರ್ಷಗಳ ಹಿಂದೆಯೇ ಆಗಬೇಕಾಗಿತ್ತು. ನಾನು, ಕನ್ನಡ ಅಭಿವೃದ್ದಿ ಪ್ರಾಧಿ ಕಾರದ ಹನ್ನೆರಡನೇ ಅಧ್ಯಕ್ಷ ಮೂವತ್ತು ವರ್ಷಗಳ ಹಿಂದೆಯೇ ಈ ರೀತಿಯ ಆಲೋಚನೆ ನಡೆಯ ಬೇಕಾಗಿತ್ತು. ಆದರೆ ಆ ಕೆಲಸ ಈಗ ಪ್ರಾರಂಭವಾಗಿ ರುವುದು ಕೂಡ ಸಂತಸ ವಿಚಾರವಾಗಿದೆ.

ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ವಿಚಾರದಲ್ಲಿ ಮೊದಲ ಹೆಜ್ಜೆಯನ್ನು ಬಹಳ ಅದ್ಭುತವಾಗಿಯೇ ಇರಿಸಲಾ ಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾತೃ ಸಂಸ್ಥೆ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾನೂನು ಪರಿಣಿತ ಸಲಹೆ ಪಡೆದು ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಅಷ್ಟೇ.

ಯಾವುದೇ ಮಸೂದೆ ಸಿದ್ಧವಾದಾಗ, ಮಂಡನೆ ಯಾದಾಗ ಎಲ್ಲವೂ ಸಮಗ್ರ, ಸಮರ್ಪಕವಾಗಿ ಇರುವುದಿಲ್ಲ. ಅದು ಕಾಲ ಕಾಲಕ್ಕೆ ಅವು ಬದಲಾಗುತ್ತಲೇ ಹೋದಾಗ ಮಾತ್ರ ಅದಕ್ಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. “ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022’ರ ಒಟ್ಟಾರೆ ಆಶಯ ಮತ್ತು ಅದರ ಲಕ್ಷಣಗಳನ್ನು ಗಮನಿಸಿದಾಗ ಎಷ್ಟರ ಮಟ್ಟಿಗೆ ಸಹಾಯವಾಗಲಿದೆ ಎಂಬುವುದನ್ನು ಕೂಡ ವ್ಯಾಪಕವಾಗಿ ಆಲೋಚನೆ ಮಾಡಬೇಕು.

ಶಿಕ್ಷಣ ವಿಚಾರ ಅಂದ ಕೂಡಲೇ ಎಲವೂ ಅದರಲ್ಲಿ ಇರಬೇಕಾಗಿತ್ತು. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರವು ಗಳೆಲ್ಲವೂ ಒಟ್ಟಾರೆ ಒಂದು ಕಡೆ ತೆಗೆದುಕೊಂಡು ಈ ವಿಧೇಯಕದಲ್ಲಿ ಹೇಳ ಬೇಕಾಗಿತ್ತು ಎಂದೂ ಕೂಡ ಕೆಲವರು ಅಭಿ ಪ್ರಾಯ ಪಡುತ್ತಾರೆ. ಆದರೆ ಇಲ್ಲಿ ಅದನ್ನು ಒಟ್ಟಾಗಿ ಒಂದು ಕಡೆ ಇಡುವ ಬದಲು, ಎಲ್ಲೆಲ್ಲಿ ರೆಫ‌ರೆನ್ಸ್‌ ಇದೆಯೋ ಅದನ್ನು ಅಲ್ಲಲ್ಲಿ ಬಳಕೆ ಮಾಡುತ್ತಾ ಹೋಗಲಾ ಗಿದೆ. ಈ ಮಸೂದೆ ಭಾಷೆ ಯನ್ನು ಒಂದು ಕಲಿಕೆಯ ಮಾಧ್ಯಮ ಮತ್ತು ಕಲಿತ ವರಿಗೆ ಇದರಿಂದ ಆಗುವಂತಹ ಉಪಯೋಗ ವನ್ನು ಕೂಡ ಹೇಳುತ್ತಾ ಹೋಗುತ್ತದೆ.

Advertisement

ಉದ್ಯೋಗದ ವಿಚಾರದಲ್ಲಿ ಕೂಡ ಸ್ಪಷ್ಟತೆ ಇಲ್ಲ. ತಮಿಳು ನಾಡಿನಲ್ಲಿ ಶೇ.7.5ರಷ್ಟು ತಮಿಳು ಭಾಷೆಯಲ್ಲಿ ಓದಿದವರಿಗೆ ಮೀಸಲಾತಿ ನೀಡಲಾ ಗುತ್ತಿದೆ. ಆದರೆ ಇಲ್ಲಿ ಮೀಸಲಾತಿ ಕೊಡಬೇಕು ಎಂದು ಹೇಳುತ್ತದೆಯೇ ಹೊರತು, ಅದನ್ನು ಎಷ್ಟರ ಮಟ್ಟಿಗೆ ಕೊಡಬೇಕು ಹಾಗೂ ಅದನ್ನು ಯಾವ ರೀತಿಯಲ್ಲಿ ಹೇಗೆ ನೀಡಬೇಕು ಎಂಬುವುದರ ಕುರಿತ ಸ್ಪಷ್ಟವಾದಂತಹ ಚಿತ್ರಣ ಈ ವಿಧೇಯಕದಲ್ಲಿ ನೀಡಲಾಗಿಲ್ಲ. ಇಲ್ಲಿ ನಿಯಮಗಳೇ ಒಟ್ಟಾರೆ ವ್ಯಾಪ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಮಸೂದೆ ಎಷ್ಟರ ಮಟ್ಟಿಗೆ ಸಹಾಯವಾಗ ಲಿದೆ ಎಂಬುವುದನ್ನು ಕೂಡ ವ್ಯಾಪಕವಾಗಿ ಆಲೋ ಚನೆ ಮಾಡಬೇಕು. ಉದಾಹರಣೆಗೆ ಆಗಿ ಹೇಳುವುದಾದರೆ ಉದ್ಯೋಗದ ಪೋರ್ಟಲ್‌ ಸ್ಥಾಪನೆ ಆಗಬೇಕು ಎಂದು ಹೇಳುತ್ತದೆ. ಅದನ್ನು ಹೇಗೆ ಜಾರಿಗೆ ತರಬೇಕು ಎಂಬುವುದರ ಕುರಿತಂತೆ ಹುಡು ಕಾಟ ಆಗಬೇಕು. ಜಾರಿ ನಿರ್ದೇಶನಾಲ ಯ ದಲ್ಲಿ ಮಾತ್ರ ಬದಲಾ ವಣೆ ಕೇಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೇ ಅದಕ್ಕೆ ಅಧ್ಯಕ್ಷ ರಾಗಬೇಕು ಎಂದು ಹೇಳಿದೆ. ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರು ಅದರ ಸದಸ್ಯರಾಗಿ ಕೆಲಸ ಮಾಡಬೇಕು ಎಂದಿದೆ ಅದು ಬದ ಲಾವಣೆ ಆಗಬೇಕು ಇವು ಬಿಟ್ಟರೆ ಹೆಚ್ಚಿನ ಬದಲಾವಣೆ ಅಗತ್ಯವಿಲ್ಲ ಅನಿಸುತ್ತದೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆ ಸಚಿವ ಸಂಪುಟ ದರ್ಜೆಯ ಸ್ಥಾನವಾಗಿದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರಿಗೆ ಉಪಾಧ್ಯಕ್ಷರ ಸ್ಥಾನ ನೀಡಬೇಕು.ಜಾರಿ ನಿರ್ದೇ ಶನಾಲಯವನ್ನು ಒಟ್ಟಾರೆ ಬದಲಾಯಿಸಿ ಎಂದು ನಾವು ಹೇಳುತ್ತಿಲ್ಲ. ಜಾರಿ ಪ್ರಕಾರ ಏನಿದೆ ಅದು ವಿಧಾನ ಸಭೆಯ ಕಂಡಿಕೆ 8ರಲ್ಲಿದೆ. ಹೀಗೆ, ಇರಬೇಕು ಎನ್ನುವುದು ಇದೆ. ಅವುಗಳನ್ನು ಕೂಡ ಗಮನಕ್ಕೆ ಇಟ್ಟು ಕೊಳ್ಳಬೇಕಾಗುತ್ತದೆ. ಇಲ್ಲಿ ಅಧಿಕಾರಿಗಳ ಮೂಲಕ ಮೂಲಕ ಎಲ್ಲವೂ ನಡೆಯಬೇಕು ಅಧಿಕಾರಿಗಳು ತಪ್ಪು ಮಾಡಿದರೆ ಅವರನ್ನು ವಿಚಾರಿ‌ಸಿಕೊಳ್ಳುವ ಕೆಲಸ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರು, ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರಬೇಕು ಅವರ ಮೂಲಕ ಕೆಲಸ ಆಗಬೇಕು.
– ಲೇಖಕರು ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು

ಸಲಹೆಗಳು
1. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ತಮಿಳುನಾಡಿನಂತೆ ಶೇ 7.5ರಷ್ಟು ಮೀಸಲಾತಿ ಬೇಕು
2. ತಂತ್ರಾಂಶದ ಬಳಕೆ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟತೆ ಬೇಕು
3. ಜಾರಿ ನಿರ್ದೇಶನಾಲಯದ ಅಧ್ಯಕ್ಷರು ಮತ್ತು ಸದಸ್ಯರ ವಿಚಾರದಲ್ಲಿ ಕೊಂಚ ಬದಲಾವಣೆ ಬೇಕು
4. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ನಿರ್ದೇಶನಾಲಯದಲ್ಲಿ ಉಪಾಧ್ಯಕ್ಷರ ಸ್ಥಾನ ಕೊಡಬೇಕು.
5. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಸ್ಥಳೀಯ ಭಾಷೆ, ಆಡಳಿತದ ಭಾಷೆ ಬಗ್ಗೆ ಸ್ಪಷ್ಟತೆ ಬೇಕು

-ಟಿ.ಎಸ್‌.ನಾಗಾಭರಣ

Advertisement

Udayavani is now on Telegram. Click here to join our channel and stay updated with the latest news.

Next