Advertisement
ಕಾನೂನು ಬಾಹಿರವಾಗಿ ನಿರ್ಮಾಣವಾಗುವ ಕಟ್ಟಡಗಳ ನಿರ್ಮಾಣ ಕಾರ್ಯ ತಡೆಯುವ ಅಧಿಕಾರ ಬಿಬಿಎಂಪಿಗೆ ಇಲ್ಲ. ಇದರಿಂದಾಗಿ ನಗರದಲ್ಲಿ ಕಟ್ಟಡ ನಿರ್ಮಾಣ ಬೈಲಾಗಳನ್ನು ಉಲ್ಲಂ ಸಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಕಡಿವಾಣ ಹಾಕಲು ಪಾಲಿಕೆ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆಯಲ್ಲಿನ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿ ತರುವಂತೆ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Related Articles
Advertisement
ತಡೆಯಾಜ್ಞೆ ತರುವುದು ಕಷ್ಟವಾಗಲಿದೆ: ಸದ್ಯ ಆಯುಕ್ತರು ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಆಸ್ತಿ ಮಾಲೀಕರು ಬಿಬಿಎಂಪಿ ನೋಟಿಸ್ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ನಿವೇಶನ ಮೌಲ್ಯದ ಅರ್ಧದಷ್ಟು ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಿಡುವುದು ಕಡ್ಡಾಯಗೊಳಿಸಬೇಕೆಂದು ಕೋರಲಾಗಿದೆ. ಇದರಿಂದಾಗಿ ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣ ಸ್ಥಗಿತಗೊಳ್ಳಲಿದ್ದು, ನ್ಯಾಯಾಲಯಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತದೆ.
ತಿದ್ದುಪಡಿಗೆ ಪ್ರಸ್ತಾಪಿಸಿರುವ ಸೆಕ್ಷನ್‌ಗಳು: 66, 67, 300, 306, 308, 310, 321 ಹಾಗೂ 443.
ಕಟ್ಟಡ ನಿಯಮ ಉಲ್ಲಂ ಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಪಾಲಿಕೆಯಿಂದ ನೋಟಿಸ್ ಜಾರಿಗೊಳಿಸಬಹುದೇ ಹೊರತು, ಕಾಮಗಾರಿ ಸ್ಥಗಿತಗೊಳಿಸುವ ಅಧಿಕಾರ ಕೆಎಂಸಿ ಕಾಯ್ದೆಯಲ್ಲಿ ಇಲ್ಲ. ಹೀಗಾಗಿ ಪಾಲಿಕೆಯಿಂದ ನೋಟಿಸ್ ಜಾರಿಗೊಳಿಸಿದರೂ ನಿಯಮ ಬಾಹಿರ ನಿರ್ಮಾಣ ಕಾರ್ಯಗಳು ಮುಂದುವರಿಯುತ್ತಿವೆ. ಹೀಗಾಗಿ ಕಾಯ್ದೆಯಲ್ಲಿನ ಕೆಲವು ಸೆಕ್ಷನ್‌ಗಳಲ್ಲಿನ ನೂನ್ಯತೆಗಳನ್ನು ಸರಿಪಡಿಸುವ ಮೂಲಕ ನಿಯಮ ಬಾಹಿರ ಕಟ್ಟಡಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ.-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು