ಸೋಮೇಶ್ವರ: ದೇಶ ಸೇವೆಗೈದ ಯೋಧರನ್ನು ನೆನಪಿಸುವ ಕಾರ್ಯದೊಂದಿಗೆ ಯುವ ಸಮುದಾಯಕ್ಕೆ ದೇಶಸೇವೆಯಲ್ಲಿ ಭಾಗವಹಿ ಸುವ ನಿಟ್ಟಿನಲ್ಲಿ ಪ್ರೇರಣೆ ನೀಡುವ ಕಾರ್ಯ ಸಂಘ, ಸಂಸ್ಥೆಗಳಿಂದ ಆಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ಅವರು ಮಂಗಳೂರು ಕರಾವಳಿ ಸಾಂಸ್ಕೃತಿಕ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸದ ಪ್ರಯುಕ್ತ ಶತಾಯುಷಿ ಹಾಗೂ ಹಿರಿಯ ಯೋಧ ಸೋಮೇಶ್ವರ ನಿವಾಸಿ ಕ್ಯಾಪ್ಟನ್ ಬಿ.ಎಸ್. ಬಾಲಕೃಷ್ಣ ರೈ ಮತ್ತು ವನಜಾಕ್ಷಿ ರೈ ದಂಪತಿಗೆ ಅವರ ಸ್ವಗೃಹದಲ್ಲಿ ಸಮ್ಮಾನ ನೆರವೇರಿಸಿ ಮಾತನಾಡಿದರು.
ಕಾರ್ಗಿಲ್ ಪರ್ವತವನ್ನು ವಿರೋಧಿಗಳ ಕೈಯಿಂದ ಜಯಿಸಿರು ವುದು ಇಡೀ ಸೈನ್ಯದ ಶಕ್ತಿಯನ್ನು ಪ್ರದರ್ಶಿಸಿದಂತಾಗಿದೆ. ಶೇ. 50ರಷ್ಟು ಕಾರ್ಗಿಲ್ ಯುದ್ಧವನ್ನು ಫೀಲ್ಡ್ ಆರ್ಟಿ ಲರಿ ಮೂಲಕ ಜಯಿಸಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ 527 ಯೋಧರು ಸಾವನ್ನಪ್ಪಿದ್ದರೆ, 1037 ಯೋಧರು ಗಾಯಗೊಂಡಿದ್ದಾರೆ. 1962ರಲ್ಲಿ ಭಾರತ – ಚೀನ ನಡುವಿನ ಯುದ್ಧವೂ ವಿಭಿನ್ನವಾಗಿತ್ತು. ಮೋಸದಿಂದ ನಡೆಸಿದ ಯುದ್ಧವಾಗಿದ್ದರಿಂದಾಗಿ ಅದರಲ್ಲಿಯೂ ಹಲವು ಯೋಧರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದ ಅವರು, ದೇಶ ಸೇವೆ ಮಾಡಿದ ಸೈನಿಕರ ಕುಟುಂಬವನ್ನು ಗೌರವಿಸುವ ಮೂಲಕ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮುಟ್ಟಿಸುವ ಕಾರ್ಯ ಜನಪ್ರತಿನಿಧಿಗಳಿಂದ ಆಗಬೇಕು ಎಂದರು. ಶತಾಯುಷಿ ಕ್ಯಾ| ಬಾಲಕೃಷ್ಣ ರೈ ಅವರಂತಹ ಹಿರಿಯ ಯೋಧರ ಮಾರ್ಗದರ್ಶನ ಇಂದಿನ ಯುವಜನತೆಗೆ ಅತಿ ಅಗತ್ಯ. ಈ ನಿಟ್ಟಿನಲ್ಲಿ ಅವರ ಕುರಿತ ಅನುಭವ, ವಿಚಾರ ವಿನಿಮಯ ಆಗಬೇಕು ಎಂದರು.
ಈ ಸಂದರ್ಭ ಪುತ್ರರಾದ ಅಮರ ನಾಥ್ ರೈ, ರವೀಂದ್ರ ರೈ, ಸೊಸೆ ವಿಜಯಲಕ್ಷಿ ¾à ರೈ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಬಿಜೆಪಿ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಜಯರಾಮ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಜಿ.ಪಂ ಸದಸ್ಯೆ ಧನಲಕ್ಷಿ ¾à ಗಟ್ಟಿ, ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಪಿಲಾರ್, ಹಿರಿಯ ಬಿಜೆಪಿ ಮುಖಂಡ ಸೀತಾರಾಮ ಬಂಗೇರ, ಲಲಿತಾ ಸುಂದರ್, ಸೋಮೇ ಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪಾ ಟಿ. ಶೆಟ್ಟಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಡಾ| ಮುನೀರ್ ಬಾವಾ, ಯಶವಂತ ಅಮೀನ್, ವರ್ಕಾಡಿ ಪದ್ಮನಾಭ ಶೆಟ್ಟಿ, ರವಿ ಶೆಟ್ಟಿ ಮಾಡೂರು, ಜಗದೀಶ್ ಭಂಡಾರಿ, ರವಿಶಂಕರ್, ಸುಧಾಕರ್ ಭಂಡಾರಿ, ಗೋಪಿನಾಥ್ ಬಗಂಬಿಲ, ಗಣೇಶ್ ಕಾಪಿಕಾಡ್, ಹರೀಶ್ ಅಂಬ್ಲಿಮೊಗರು, ಅನಿಲ್ ಬಗಂಬಿಲ, ರಮೇಶ್ ಕೊಂಡಾಣ, ಪುರುಷೋತ್ತಮ ಕಲ್ಲಾಪು, ರಾಜೇಶ್ ಯು.ಬಿ. ಉಪಸ್ಥಿತರಿದ್ದರು.
ಕರಾವಳಿ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ನಿರೂಪಿಸಿದರು. ದಯಾನಂದ ತೊಕ್ಕೊಟ್ಟು ಅಭಿನಂದನಾ ಪತ್ರ ವಾಚಿಸಿದರು.