Advertisement

BJPವಿರುದ್ಧದ ಟಾರ್ಗೆಟ್‌ ರಾಜಕೀಯ ಸಮರ್ಥವಾಗಿ ಎದುರಿಸೋಣ

06:09 PM Jul 30, 2024 | Team Udayavani |

ಕಾಪು : ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಉಂಟಾದ ಸೋಲನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್‌ ಪಕ್ಷ ಜಿ.ಪಂ., ತಾ.ಪಂ. ಚುನಾವಣೆಗೆ ಮೊದಲು ಸುಳ್ಳು ಆರೋಪಗಳ ಮೂಲಕವಾಗಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಚುನಾಯಿತ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಕಾಂಗ್ರೆಸ್‌ ಪಕ್ಷ ಟಾರ್ಗೆಟ್‌ ರಾಜಕೀಯ ಮಾಡುತ್ತಿದ್ದು ಇದನ್ನು ಪಕ್ಷ ಮತ್ತು ಪಕ್ಷದ ಕಾರ್ಯಕರ್ತರೆಲ್ಲರೂ ಸಮರ್ಥವಾಗಿ ಎದುರಿಸಬೇಕಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದರು.
ಕಾಪು ವೀರಭದ್ರ ಸಭಾಭವನದಲ್ಲಿ ಸೋಮವಾರ ನಡೆದ ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಾಪು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಜಿಲ್ಲೆಯ ಶಾಸಕರ ಜತೆ ಸೇರಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಮನವಿ ಮಾಡಿದ್ದೇವೆ. ವಿವಿಧ ಭಾಗ್ಯ ಯೋಜನೆಗಳಿಂದಾಗಿ ಸಂಪೂರ್ಣ ದಿವಾಳಿಯಾಗಿರುವ ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಮಾತ್ರವಲ್ಲದೇ ಕಾಂಗ್ರೆಸ್‌ ಶಾಸಕರೂ ದೂರುತ್ತಿದ್ದಾರೆ. ಕೆಡಿಪಿ ಸಭೆ, ಜನಸ್ಪಂಧನ ಸಭೆ, ಜನತಾದರ್ಶನದಲ್ಲಿ ಅಧಿಕಾರಿಗಳೂ ಅದನ್ನೇ ಹೇಳುತಿ ¤ದ್ದಾರೆ.ಆದರೆ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಅಧಿಕಾರ ಕಳೆದುಕೊಂಡ ನೋವಿನಲ್ಲಿ ವೃಥಾರೋಪ ಮಾಡುವ ಬದಲು ನೈಜ ವಿಚಾರವನ್ನು ಜನರ ಮುಂದೆ ಇರಿಸುವ ಪ್ರಯತ್ನ ನಡೆಸಲಿ ಎಂದರು.

ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಬಗ್ಗೆ ಅವಲೋಕನ ನಡೆಸಿ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ನಡುವೆ ಸಮನ್ವಯತೆಯನ್ನು ಸಾಧಿಸಿ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಲು ಕಾರ್ಯಕಾರಣಿ ಸಮಿತಿ ಸಭೆ ಪೂರಕವಾಗಿದ್ದು ಬೇಸರ, ಗೊಂದಲ, ಅಸಮಾಧಾನದಿಂದ ಪಕ್ಷದಿಂದ ದೂರವುಳಿದಿರುವ ಕಾರ್ಯಕರ್ತರನ್ನು ಮತ್ತೆ ಪರಿವಾರದೊಳಗೆ ಸೇರ್ಪಡೆಗೊಳಿಸುವುದಕ್ಕೂ ಈ ಸಭೆ
ವೇದೆಕೆಯಾಗಲಿದೆ ಎಂದರು.

ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಪ.ಜಾ. ಮತ್ತು ಪ.ಪಂ. ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 187 ಕೋ.ರೂ. ದುರುಪಯೋಗವಾಗಿದೆ. ಈ ಹಗರಣವನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಮೂಡಾ ಹಗರಣವೂ ಸರಕಾರಕ್ಕೆ ಉರುಳಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಬƒಹತ್‌ ಹೋರಾಟ ನಡೆಸಲಿದ್ದು ಈ ಹೋರಾಟಕ್ಕೆ ತಾಲೂಕು, ಕ್ಷೇತ್ರ ಮತ್ತು ಬೂತ್‌ ಮಟ್ಟದಲ್ಲೂ ಕಾರ್ಯಕರ್ತರನ್ನು ಜೋಡಿಸಲಾಗುವುದು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಮಾರೋಪ ಭಾಷಣ ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಯು. ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್‌ ನಾಯಕ್‌ ಅಲೆವೂರು, ಹಿರಿಯ ಮುಖಂಡೆ ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.

Advertisement

ಅಧ್ಯಕ್ಷತೆ ವಹಿಸಿದ್ದ ಜೀತೇಂದ್ರ ಶೆಟ್ಟಿ ಉದ್ಯಾವರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶರಣ್‌ ಕುಮಾರ್‌ ಮಟ್ಟು ಕಾರ್ಯಕ್ರಮ ನಿರೂಪಿಸಿ, ಗೋಪಾಲಕೃಷ್ಣ ರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next