Advertisement

ಸ್ವಾವಲಂಬಿಗಳಾಗೋಣ: ಡಾ|ಹೆಗ್ಗಡೆ ಕರೆ

01:00 AM Feb 11, 2019 | Team Udayavani |

ಧರ್ಮಸ್ಥಳ: ಯಾವುದೇ ಯೋಜನೆ, ಸಹಾಯ ಧನ, ನೆರವು ಪಡೆಯುವ ಮೂಲಕ ಸ್ವಾವಲಂಬಿ ಗಳಾಗಿ ಬದುಕುವ ಮಹಾಪಾಠವನ್ನು ಕಲಿತುಕೊಳ್ಳಬೇಕು. ನೆರವು ಪಡೆದ ಬಳಿಕವೂ ಅವಲಂಬಿತರಾಗುವ ಮನೋ ಭಾವವನ್ನು ಬದಲಾವಣೆ ಮಾಡಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರವಿವಾರ ನಡೆದ ಜನ ಮಂಗಲ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸಹಾಯಕರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಶ್ರೀ ಕ್ಷೇತ್ರ ಧರ್ಮಸ್ಥಳವು ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳ ಮೂಲಕ ನೆರವಾಗುವ ಕಾರ್ಯವನ್ನು ನಡೆಸುತ್ತ ಬಂದಿದೆ. ನೆರವು ಪಡೆದ ವರು ಅದನ್ನು ಪರಿಪೂರ್ಣ ನೆಲೆ ಯಲ್ಲಿ ವಿನಿಯೋಗಿಸಬೇಕು. ಆ ಮೂಲಕ ಸ್ವಾವಲಂಬಿ ಜೀವನಕ್ಕೆ ಮುಂದಾಗಬೇಕು ಎಂದವರು ಆಶಿಸಿದರು.

ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ತ್ಯಾಗವು ಪರಮಾತ್ಮನನ್ನು ಪಡೆಯುವ ದೊಡ್ಡ ಗುಣವಾಗಿದ್ದು, ಬಾಹುಬಲಿ ಸ್ವಾಮಿ ತ್ಯಾಗದ ದೊಡ್ಡ ಶಕ್ತಿ. ಜೈನ ಧರ್ಮವು ಅಹಿಂಸೆಗೆ ಪ್ರಥಮ ಆದ್ಯತೆ ನೀಡಿ, ಬಾಹುಬಲಿಯನ್ನು ಆರಾ ಧಿಸುತ್ತಿದೆ. ಪೂಜ್ಯ ಹೆಗ್ಗಡೆ ಅವರು ಸೇವಾಕಾರ್ಯಗಳ ಮೂಲಕ ಸಮಗ್ರ ಪ್ರಪಂಚಕ್ಕೆ ತಲುಪಿದ್ದಾರೆ ಎಂದರು.

ಸಂಸದ ನಳಿನ್‌ ಮಾತನಾಡಿ, ಅಹಿಂಸೆಗೆ ಜಗತ್ತನ್ನು ಬೆಳಗುವ ದೊಡ್ಡ ಶಕ್ತಿಯಿದೆ. ಬಾಹುಬಲಿಯ ಬೆಳಕಿನ ಕಿರಣಗಳು ಜಗತ್ತಿನ ಕತ್ತಲನ್ನು ದೂರ ಮಾಡಲಿವೆ. ಉತ್ತರದಲ್ಲಿ ಕುಂಭಮೇಳ ಹಾಗೂ ದಕ್ಷಿಣದಲ್ಲಿ ಮಹಾ ಮಸ್ತಕಾಭಿಷೇಕಗಳು ಭಾರತದ ಶಾಂತಿಗೆ ದೊಡ್ಡ ಕೊಡುಗೆಯನ್ನು ನೀಡಿವೆ. ಇಂತಹ ಕಾರ್ಯದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಪುಣ್ಯ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನೊಂದ ಮನಸುಗಳಿಗೆ ನೆಮ್ಮದಿಯ ಜೀವನ ದೊರಕಿಸಿಕೊಡುವ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ ಎಂದರು.

9 ಕೋ.ರೂ ಮಾಸಾಶ‌ನ; 10 ಕೋ.ರೂ. ಮಾಸಿಕ ಶಿಷ್ಯ ವೇತನ
ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ಪ್ರತೀ ವರ್ಷ ನೀಡುತ್ತಿರುವ ಮಾಸಾಶನ ಯೋಜನೆ ಯಡಿಯಲ್ಲಿ ಯೋಜನೆಯಿಂದ ಈ ಆರ್ಥಿಕ ವರ್ಷದಲ್ಲಿ 8,800 ಕುಟುಂಬಗಳಿಗೆ ತಲಾ 750 ರೂ.ಗಳಿಂದ 3,000 ರೂ.ಗಳಂತೆ ಒಟ್ಟು 9 ಕೋ.ರೂ.ಗಳನ್ನು ನೀಡಲಾಗುತ್ತದೆ. 12,500 ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳಿಗೆ ತಲಾ 1,000 ರೂ.ಗಳಿಂದ 1,500 ರೂ.ಗಳಂತೆ ಒಟ್ಟು 10 ಕೋ.ರೂ.ಗಳನ್ನು ಮಾಸಿಕ ಶಿಷ್ಯ ವೇತನ ನೀಡಲಾಗುತ್ತದೆ. ಹೊಸ ಉದ್ಯೋಗಕ್ಕೆ ಸಂಬಂಧಿ ಸಿ ತಲಾ 1,000 ರೂ.ಗಳಿಂದ 10,000 ರೂ.ವರೆಗೆ ಪ್ರತೀ ವರ್ಷ ನೀಡಲಾಗುತ್ತಿದ್ದು, ಇದಕ್ಕೆ ಸುಮಾರು 2 ಕೋ.ರೂ. ಮೀಸಲಿರಿಸಲಾಗುತ್ತದೆ. ಶೌಚಾಲಯ ನಿರ್ಮಾಣದ ಹಿನ್ನೆಲೆಯಲ್ಲಿ 5 ಲಕ್ಷಕ ‌ೂR ಅ ಧಿಕ ಮಂದಿಗೆ ತಲಾ 1,000 ರೂ.ಗಳಂತೆ ನೆರವು ನೀಡಲಾಗಿದೆ. ಸೌರ ವಿದ್ಯುತ್‌ ಘಟಕ ಅಳವಡಿಸಿಕೊಳ್ಳುವವರಿಗೆ ತಲಾ 1,000 ರೂ. ಹಾಗೂ ಗೋಬರ್‌ ಗ್ಯಾಸ್‌ ಅಳವಡಿಸಿಕೊಳ್ಳುವವರಿಗೆ ತಲಾ 2,000 ರೂ. ನೀಡಲಾಗುತ್ತದೆ ಎಂದರು.

Advertisement

ಮಾಜಿ ಸಚಿವ ಅಮರನಾಥ ಶೆಟ್ಟಿ, ತಾ.ಪಂ. ಸದಸ್ಯೆ ಧನಲಕ್ಷ್ಮೀ ಜನಾರ್ದನ್‌, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌, ಸಂಪತ್‌ ಸಾಮ್ರಾಜ್ಯ ಉಪಸ್ಥಿತರಿದ್ದರು. ಡಾ| ಜಯಕುಮಾರ್‌ ಶೆಟ್ಟಿ ವಂದಿಸಿದರು. ಶ್ರೀನಿವಾಸ್‌ ಆರ್‌. ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

ಗಣ್ಯರ ಗೈರು
ಗೃಹ ಸಚಿವ ಎಂ.ಬಿ. ಪಾಟೀಲ್‌, ವಸತಿ ಖಾತೆಯ ಸಚಿವ ಎನ್‌. ನಾಗರಾಜು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಶಾಸಕ ಹರೀಶ್‌ ಪೂಂಜ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಕಾರ್ಯಕ್ರಮಕ್ಕೆ ಗೈರಾಗಿದ್ದರು. 

ಮಹಾಮಸ್ತಕಾಭಿಷೇಕ ನಿಮಿತ್ತ 1.25 ಕೋ.ರೂ.ಗಳ ಜನಮಂಗಲ ಯೋಜನೆ 
ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವತಿಯಿಂದ ಜನಮಂಗಲ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟು 1.25 ಕೋ.ರೂ. ಮೌಲ್ಯದ ವಿವಿಧ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು. ಒಟ್ಟು 560 ಜನ ಅಂಗವಿಕಲರಿಗೆ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಗಾಲಿಕುರ್ಚಿ, 400 ಜನ ಅಂಗವಿಕಲರಿಗೆ ವಾಕರ್‌ ಸೌಲಭ್ಯ, 110 ವಾಕಿಂಗ್‌ ಸ್ಟಿಕ್‌ ಹಾಗೂ ವಾಟರ್‌ ಬೆಡ್‌ ಹಸ್ತಾಂತರಿಸಲಾಯಿತು. ಜ.1ರಿಂದ ಮಾ.31ರ ವರೆಗೆ ಟ್ಯಾಕ್ಸಿ, ರಿಕ್ಷಾ ಸೇರಿದಂತೆ ಸಾಗಾಟ ವಾಹನ ಖರೀದಿ ಮಾಡುವವರಿದ್ದರೆ ಅವರಿಗೆ ಕ್ಷೇತ್ರದ ವತಿಯಿಂದ 10,000 ರೂ.ಗಳ ಅನುದಾನ ನೀಡಲಾಗುತ್ತದೆ. ಇದರಂತೆ ಇಲ್ಲಿಯ ವರೆಗೆ ನೋಂದಣಿ ಮಾಡಿದ 626 ಜನರಿಗೆ ತಲಾ 10,000 ರೂ.ಗಳ ನೆರವು ನೀಡಲಾಯಿತು. 

ಫಲಾನುಭವಿಗಳಲ್ಲ  -ಸ್ವತಂತ್ರರು!
ಧರ್ಮಾಧಿ ಕಾರಿ ಡಾ| ಹೆಗ್ಗಡೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಲಕ್ಷಾಂತರ ಜನರು ಸದಸ್ಯರಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜಕೀಯ ಪಕ್ಷದವರು ಶ್ರೀ ಕ್ಷೇತ್ರಕ್ಕೆ ಬಂದು ನಮಗೆ ಮತ ನೀಡುವ ಕುರಿತು ಯೋಜನೆಯ ಸದಸ್ಯರಿಗೆ ಸೂಚನೆ ನೀಡಬಹುದೇ ಎಂದು ಪ್ರಶ್ನಿಸುತ್ತಾರೆ. ಆದರೆ ನಾನು, ಯೋಜನೆಯಲ್ಲಿ ಇರುವವರು ಶ್ರೀ ಕ್ಷೇತ್ರದ ಫಲಾನುಭವಿಗಳಲ್ಲ; ಅವರು ಸ್ವತಂತ್ರರು-ಸ್ವಾವಲಂಬಿಗಳು. ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ನಾನು ಅದಕ್ಕಾಗಿ ಮಾರ್ಗದರ್ಶನವನ್ನೇ ನೀಡುವುದಿಲ್ಲ  ಎಂದರು. 

ಇಂದಿನಿಂದ ಪಂಚಮಹಾವೈಭವ
ಬೆಳ್ತಂಗಡಿ
: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಭಾಗವಾಗಿ ಫೆ. 11ರಿಂದ ಕ್ಷೇತ್ರದಲ್ಲಿ ನಿರ್ಮಿಸಿದ ಅಯೋಧ್ಯೆ ಮತ್ತು ಪೌದನಾಪುರ ನಗರಗಳಲ್ಲಿ ಪಂಚಮಹಾವೈಭವ ನಡೆಯಲಿದೆ. 
ಇದು ಧಾರ್ಮಿಕ ಹಿನ್ನೆಲೆಯ ಕಲಾ ಕಾರ್ಯಕ್ರಮವಾಗಿದ್ದು, ಬಾಹುಬಲಿಯ ಜೀವನದ ಪ್ರಮುಖ ಘಟ್ಟಗಳನ್ನು ಅಭಿವ್ಯಕ್ತಿ ಗೊಳಿಸಲಿದೆ. ಬಾಲ್ಯ, ರಾಜ್ಯಾಡಳಿತ, ಭರತನ ಜತೆ ಯುದ್ಧ, ಸನ್ಯಾಸ ಇತ್ಯಾದಿ ಕಂಗೊಳಿಸಲಿವೆ. ಕಾರ್ಯಕ್ರಮ ವೇದಿಕೆ ಯಲ್ಲಿ ಮಾತ್ರವಲ್ಲದೆ, ಧರ್ಮಸ್ಥಳದ ಬೀದಿಗಳನ್ನೂ ಬಯಲು ರಂಗವಾಗಿ ಬಳಸಿಕೊಳ್ಳಲಿರುವುದು ವಿಶೇಷ.

ಬೆಳಗ್ಗೆ 9.30ಕ್ಕೆ ಶ್ರೀ ಆದಿನಾಥ ಮಹಾರಾಜರ ಆಡಳಿತದಲ್ಲಿ ನವ ಯುಗ ಆರಂಭದ ಸಂಕೇತಗಳು, ಆದಿನಾಥ ಮಹಾ ರಾಜರಿಂದ ಪ್ರಜೆಗಳಿಗೆ ಅಸಿ- ಮಸಿ-ಕೃಷಿ ಇತ್ಯಾದಿ ಮಾರ್ಗದರ್ಶನ, ಸಂಜೆ 6ಕ್ಕೆ ಆದಿನಾಥರ ಮಕ್ಕಳ ಬಾಲಲೀಲೋತ್ಸವ ನಡೆಯಲಿದೆ. ಸಂಜೆ 8ಕ್ಕೆ ಅಮೃತವರ್ಷಿಣಿ ಸಭಾಂಗಣದಲ್ಲಿ ಸಂಗೀತ ಸಂಭ್ರಮ ಪ್ರದರ್ಶನಗೊಳ್ಳಲಿದೆ.

ಪೂಜಾ ಕಾರ್ಯಕ್ರಮ
ರತ್ನಗಿರಿ ಬೆಟ್ಟದಲ್ಲಿ ಬೆಳಗ್ಗೆ 7ಕ್ಕೆ ನಿತ್ಯ ವಿಧಿ, ಬ್ರಹ್ಮ ಯಕ್ಷ ಪ್ರತಿಷ್ಠೆ, ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, 108 ಕಲಶ ಗಳಿಂದ ಪಾದಾಭಿಷೇಕ, ಅಪರಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಯಾಗ ಮಂಡಲಾರಾಧನಾ ವಿಧಾನ, ಸಂಜೆ ಧ್ವಜಪೂಜೆ, ಶ್ರೀ ಬಲಿ ವಿಧಾನ ಮಹಾಮಂಗಳಾರತಿ ನಡೆಯಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next