ಕನಕಪುರ: ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಮಹಿಳೆಯರನಿಜವಾದ ಸಬಲೀಕರಣ ಸಾಧ್ಯ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಎಂ.ಎಸ್.ಸ್ವಾಮಿ ತಿಳಿಸಿದರು.
ತಾಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ-ಉದ್ಯೋಗ ತರಬೇತಿ ಸಂಸ್ಥೆ ಆಯೋಜಿಸಿದ್ದ ಉಚಿತ ಮಹಿಳಾ ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಯಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಹೊಲಿಗೆ ವೃತ್ತಿಗೆ ಉತ್ತಮವಾದ ಬೇಡಿಕೆಯಿದ್ದು, ಆದಾಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕುಟುಂಬದ ಎಲ್ಲಾ ಕೆಲಸ ನಿಭಾಯಿಸಿ ವೃತ್ತಿಯಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚೇನು ಹೊರೆ ಎನಿಸುವುದಿಲ್ಲ. ಪ್ರಾರಂಭಿಕ ಹಂತದಲ್ಲಿ ಮನೆಗಳಲ್ಲಿಯೇ ಪ್ರಾರಂಭಿಸಿ, ನಂತರದಲ್ಲಿ ಉದ್ಯಮ ವಿಸ್ತರಿಸಬೇಕು ಎಂದರು.
ಪ್ರತಿಯೊಬ್ಬ ಮಹಿಳೆ ತಮ್ಮ ಆಸಕ್ತಿಗೆ ಅನುಗುಣವಾದ ಒಂದೊಂದು ವೃತ್ತಿಯಲ್ಲಿತೊಡಗಿರಬೇಕು. ಆಗ ಮಾತ್ರ ಜೀವನದ ಗುಣಮಟ್ಟ ಸುಧಾರಿಸಲು ಸಾಧ್ಯ. ಕೆನರಾ ಬ್ಯಾಂಕ್ ಈ ರೀತಿಯ ಸ್ವ ಉದ್ಯೋಗ ಆಧಾರಿತ ತರಬೇತಿ ನೀಡುತ್ತಿರುವುದು ಮಹಿಳೆಯರ ಸಬಲೀಕರಣಕ್ಕಾಗಿ ಎಂದು ನುಡಿದರು.
ಸಂಸ್ಥೆಯ ಜಿಲ್ಲಾ ಕಾರ್ಯಕ್ರಮದ ವ್ಯವಸ್ಥಾಪಕ ವಿನೋದ್,ಸಂಸ್ಥೆಯುಮಹಿಳಾಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದು, ಸ್ವ-ಉದ್ಯೋಗ ಆಧಾರಿತ ತರಬೇತಿಗಳಿಂದಾಗಿಆರ್ಥಿಕಸ್ಥಿರತೆಸಾಧ್ಯ.ಹೀಗಾಗಿ ಪ್ರತಿಯೊಬ್ಬರೂ ಉದ್ಯೋಗಿಗಳಾಗಬೇಕು. ಸಂಸ್ಥೆನಿರ್ವಹಣೆಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದುಸಲಹೆ ನೀಡಿದರು. ತರಬೇತಿ ಸಂಪನ್ಮೂಲ ವ್ಯಕ್ತಿಶಾಲಿನಿ, ಸಂಸ್ಥೆ ಉಪನ್ಯಾಸಕರಾದ ನೇತ್ರಾವತಿ,ಜಿಪಂ ನಾರಾಯಣ್, ಉಯ್ಯಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರವಿ ಮತ್ತಿತರರಿದ್ದರು.