Advertisement

Devotion: ನೈಜ ಭಕ್ತಿಯೇ ಬಾಳ ಬೆಳಗುವ ಶಕ್ತಿ

12:31 PM Sep 07, 2024 | Team Udayavani |

ಆ ಸರ್ವಶಕ್ತ ಭಗವಂತನೇ ನಮ್ಮ ಬದುಕಿನ ಏರಿಳಿತಗಳ ಆಟ ಆಡಿಸಿ ಜೀವನ ಪಾಠ ಕಲಿಸುತ್ತಾ ಮುನ್ನಡೆಸುತ್ತಿದ್ದಾನೆ ಎಂಬ ಭಾವದಿಂದ ಸರ್ವವನ್ನೂ ಭಗವಂತನಿಗೆ ಅರ್ಪಿಸಿಕೊಳ್ಳುತ್ತೇವೆ.

Advertisement

ಆದರೆ ಪ್ರಸ್ತುತ ಯುವಜನತೆಯನ್ನೊಮ್ಮೆ ಅವಲೋಕಿಸಿದರೆ ದೇವರ ಬಗೆಗಿನ ಅವರ ಕಲ್ಪನೆ, ಭಾವನೆ ಎಲ್ಲೋ ಸಡಿಲಗೊಂಡಿದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಯಾಕೆಂದರೆ ದೇವರ ಬಗೆಗಿನ ಭಕ್ತಿಯು ಆಡಂಬರದ ಭಕ್ತಿಯಾಗಿದೆ. ಇನ್ನು ಕೆಲವು ದೇವಸ್ಥಾನ ಹಾಗೂ ದೇವಸ್ಥಾನಗಳ ಆಡಳಿತದಲ್ಲಿಯೂ ವ್ಯಾಪಾರ ವ್ಯವಹಾರ ಹಾಗೆಯೇ ರಾಜಕೀಯದಿಂದ ಕೂಡಿದೆ. ಕಾರಣ ದೇವರ ಹೆಸರಲ್ಲಿ ನಡೆಯುತ್ತಿರುವ ಅದೆಷ್ಟೋ ಸುಳಿಗೆಗಳು. ಮನುಷ್ಯನಲ್ಲಿ ನಿರಂತರ ಭಕ್ತಿ ಮಾಯವಾಗಿದೆ. ಮುಗ್ಧ ಭಕ್ತಿ ಕಾಣಿಸುತ್ತಿಲ್ಲ.

ದೇವರನ್ನು ಕಷ್ಟ ಬಂದಾಗ ವೆಂಕಟರಮಣ ಅನ್ನೋ ಗಾದೆಯು ನಿಜವೆನಿಸುತ್ತಿದೆ. ಬೆಳಗ್ಗೆ ಎದ್ದು ಕರಾಗ್ರೆ ವಸತೇ ಲಕ್ಷ್ಮೀ, ಕರ ಮದ್ಯೆà ಸರಸ್ವತಿ, ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರದರ್ಶನಂ ಎಂಬಲ್ಲಿಂದ ಸರ್ವವೂ ಮೊಬೈನಲ್ಲಿಯೇ ಇದೇ.. ಪ್ರಭಾತೇ ಮೊಬೈಲ್‌ ದರ್ಶನಂ ಎಂಬಲ್ಲಿಗೆ ತಲುಪಿದೆ. ಊರ ಜಾತ್ರೆ, ದೇವಾಲಯದ ಪೂಜೆ ಆಚರಣೆಗಳಲ್ಲಿ ಪಾಲ್ಗೊಳ್ಳುವ ಯುವಜನತೆಯ ಸಂಖ್ಯೆ ಕ್ಷೀಣಿಸುತ್ತಿದೆ. ಪಾಲ್ಗೊಂಡರೂ ಭಕ್ತಿ ಭಾವದ ಕೊರತೆಯೆನಿಸುತ್ತದೆ.

“ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ಪರೀಕ್ಷೆಗಳ ಸಂದರ್ಭದಲ್ಲೋ, ಉದ್ಯೋಗ ಹುಡಕಾಟದ ಸಂದರ್ಭದಲ್ಲೋ ದೇವರತ್ತ ಚಿತ್ತಗೊಟ್ಟು ಹರಕೆ ಸಲ್ಲಿಸುತ್ತಾ ಯಾಂತ್ರಿಕ ಭಕ್ತಿ ಪ್ರದರ್ಶಿಸುವವರೇ ಹೆಚ್ಚು. ದೇವರು ಮತ್ತು ನಮ್ಮ ನಡುವೆ ನಿರಂತರ ಸಂಪರ್ಕವೊಂದು ಇರಬೇಕು. ಆತ್ಮ – ಪರಮಾತ್ಮನ ನಡುವಿನ ಆ ಬಂಧುತ್ವ ಬದುಕನ್ನು ಹಸನಾಗಿಸುತ್ತದೆ.ದೇವರು ಬಯಸುವುದು ಪರಿಶುದ್ಧ ಭಕ್ತಿಯನ್ನೇ ಹೊರತು ಆಡಂಬರದ ಆಚರಣೆಗಳನ್ನಲ್ಲ. ನೈಜ ಭಕ್ತಿಯೇ ಬಾಳ ಬೆಳಗುವ ಶಕ್ತಿ.

-ನಿಶ್ಮಿತಾ ಗುರುಪ್ರಸಾದ್‌ ಕೊಕ್ಕಡ

Advertisement
Advertisement

Udayavani is now on Telegram. Click here to join our channel and stay updated with the latest news.