Advertisement

Udupi; ಆನ್ ಲೈನ್ ಟ್ರೇಡಿಂಗ್‌ ವಂಚನೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ

05:27 PM Sep 06, 2024 | Team Udayavani |

ಉಡುಪಿ: ಆನ್‌ ಲೈನ್‌ ಟ್ರೇಡಿಂಗ್‌ ನಲ್ಲಿ ಹೆಚ್ಚಿನ ಹಣ ಗಳಿಸುವ ಆಮಿಷವೊಡ್ಡಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಪೊಲೀಸ್‌ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಕೇರಳದ ಕೋಯಿಕ್ಕೋಡ್‌ ನ ಅಜ್ಮಲ್‌‌ ಸುಹೈಲ್‌ ಸಿ (19) ಎಂಬ ಆರೋಪಿಯನ್ನು ಬಂಧಿಸಿ, 80 ಸಾವಿರ ರೂ ನಗದು ವಶಪಡಿಸಲಾಗಿದೆ.

ಏನಿದು ಘಟನೆ?

ಉಪೇಂದ್ರ ಅಂಬಲಪಾಡಿ ಉಡುಪಿ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ಲಿಮಿಟೆಡ್‌ ಮ್ಯಾನೇಜ್‌‌ಮೆಂಟ್‌ ಎಂಬ ವಾಟ್ಸ್ಯಾಪ್ ಗ್ರೂಪ್‌‌ ಗೆ ಸೇರಿಸಿದ್ದು, ಗ್ರೂಪ್‌ನ VIP-203-845 ಎಂಬ ಅಕೌಂಟನ್ನು ನೀಡಿದ್ದರು. 7842874635 ಮತ್ತು 6391854496 ಮೊಬೈಲ್‌ ಸಂಖ್ಯೆಯ ಮೂಲಕ ದೂರುದಾರರನ್ನು ಸಂಪರ್ಕಿಸಿ ವಾಟ್ಸಾಪ್‌ ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಒಟ್ಟು 33,10,000 ಹಣವನ್ನು  ಡಿಪಾಸಿಟ್ ಮಾಡಿಸಿಕೊಂಡಿದ್ದರು. ಬಳಿಕ ಹೂಡಿಕೆ ಮಾಡಿದ ಹಣ ಮತ್ತು ಲಾಭಾಂಶವನ್ನು ನೀಡದೇ ಮೋಸ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ 1,30,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಪೊಲೀಸರು ತನಿಖೆ ಮುಂದುವರೆಸಿ ತಲೆಮರೆಸಿಕೊಂಡಿದ್ದ ಆರೋಪಿ ಅಜ್ಮಲ್‌‌ ಸುಹೈಲ್‌ ಸಿ ಪತ್ತೆ ಹಚ್ಚಿ, ಆತನಿಂದ ನಗದು ರೂ 80,000 ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.