Advertisement

Eco-friendly life: ಪರಿಸರ ಸ್ನೇಹಿ ಬದುಕು ನಮ್ಮದಾಗಲಿ

01:16 PM Nov 29, 2023 | Team Udayavani |

ನಮ್ಮಿಂದ ಪರಿಸರ ನಾಶ, ಅದುವೇ ನಮಗೆ ಯಮಪಾಶ. ಈ ಮಾತು ಇತ್ತೀಚಿನ ಜನಾಂಗಗಳಿಗೆ ಮನಮುಟ್ಟುವಂತಿದೆ. ಹಿಂದಿನ ಯುವ ಜನರು ಪ್ರಕೃತಿಗೆ ಹೆಚ್ಚು ಮಾನ್ಯತೆ ಕೊಟ್ಟು ಅದನ್ನು ಅರಾಧಿಸುತ್ತಿದ್ದರು. ಹಾಗು ಅವರು  ಬೇಗನೆ ಮಣ್ಣಿನಲ್ಲಿ ಕರಗಿಹೋಗುವ  ವಸ್ತುಗಳನ್ನು ಉಪ ಯೋಗಿ ಸುತ್ತಿದ್ದರು.

Advertisement

ಆದರೆ ಇತ್ತೀಚಿನ ದಿನಗಳಲ್ಲಿ  ಕೈಗಾರೀಕರಣ, ನಗರೀಕರಣ ಮತ್ತು ಇತರ ಆಧುನಿಕ ಆವಿಷ್ಕಾರಗಳಿಂದ ಹುಟ್ಟಿಕೊಂಡ ಪ್ಲಾಸ್ಟಿಕ್‌ ತ್ಯಾಜ್ಯವನ್ನು  ಜನರು ವಿಪರೀತವಾಗಿ ಬಳಸಿ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ ಇಲ್ಲದೆ ಜೀವನವಿಲ್ಲ ಎಂಬ ರೀತಿಯಲ್ಲಿ ಪ್ಲಾಸ್ಟಿಕ್‌ಗೆ

ಅವಲಂಬಿತರಾಗಿ ಹೋಗಿದ್ದಾರೆ.  ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸುವುದರ ಕಾರಣ ಅದರಿಂದ ಹೊರಸೂಸುವ ಅನೇಕ ರಾಸಾಯನಿಕಗಳಿಗೆ  ಮಾನವ ಕ್ಯಾನ್ಸರ್‌ ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಅದಲ್ಲದೆ ಪ್ಲಾಸ್ಟಿಕ್‌ ವಿಘಟನೆ ಹೊಂದದ ತ್ಯಾಜ್ಯ ಆಗಿರುವುದರಿಂದ ಆಹಾರವನ್ನು  ಪ್ಲಾಸ್ಟಿಕ್‌ ಚೀಲಗಳಲ್ಲಿ ಹಾಕಿ ಬಿಸಾಡುವುದರಿಂದ ಪ್ರಾಣಿ ಪಕ್ಷಿಗಳು ಅದನ್ನು ತಿಂದು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಕೆಲವರು ಪ್ಲಾಸ್ಟಿಕ್‌ ಅನ್ನು ಉಪಯೋಗಿಸಿ ಸುಡುವುದರಿಂದ ವಾಯುಮಾಲಿನ್ಯ ಉಂಟಾಗಿ ಪರಿಸರಕ್ಕೆ ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿವೆ. ಮಾನವನ ಈ ಕೃತ್ಯದಿಂದ ಏನೂ ಅರಿಯದ ಮೂಕ ಪ್ರಾಣಿ ಪಕ್ಷಿಗಳು ಬಲಿಯಾಗುತ್ತಿವೆ.

ಅಲ್ಲದೇ ಮುಂದಿನ ಪೀಳಿಗೆಯು  ಈ ಕಾರಣಗಳಿಂದಲೇ ಹಲವು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಾವು ಪ್ಲಾಸ್ಟಿಕನ್ನು ಒಮ್ಮೆಗೆ ಕಡಿಮೆಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಬದಲಾವಣೆಯನ್ನು ತಂದುಕೊಳ್ಳಬೇಕು. ಅಂದರೆ ನಾವು ಪ್ಲಾಸ್ಟಿಕ್‌ನ ಬದಲಾಗಿ  ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಹಾಗೆಯೇ ನಾವು ಭಾರತ ಸರಕಾರದ ಶಾಸನಗಳಿಗೆ ಮಾತ್ರ ಮೀಸಲಾಗದೆ ಪ್ಲಾಸ್ಟಿಕನ್ನು ಮಿತವಾಗಿ  ಬಳಸಿ ಪರಿಸರವನ್ನು ಪರಿಶುದ್ಧವಾಗಿ ಇಡಲು ಸಾಧ್ಯ.

Advertisement

ನಮಗೆ ಬೇಕಾದ ದಿನನಿತ್ಯ ವಸ್ತುಗಳನ್ನು ನಾವು ಪ್ರಕೃತಿಯಿಂದಲೇ ಪಡೆದುಕೊಳ್ಳುವುದರಿಂದ ನಾವು ಪ್ರಕೃತಿಗೆ ಧನ್ಯರಾಗಬೇಕೆ ಹೊರತು ಯಾವತ್ತೂ ವಿರುದ್ಧವಾಗಿರಬಾರದು. ಬನ್ನಿ ನಾವೆಲ್ಲ ಒಟ್ಟಾಗಿ ಸೇರಿ ನಮ್ಮ ಮುಂದಿನ ಪೀಳಿಗೆಗೆ ಅಗತ್ಯವಾದ ಅಂದರೆ ನಮ್ಮ ಪರಿಸರವನ್ನು ಉಳಿಸುವ ಕೆಲಸವನ್ನು ಕೈಗೊಳ್ಳೋಣ. ನಾವು, ನಮ್ಮ ಪರಿಸರ, ನಮ್ಮ ಊರು ಹಸಿರಾಗಿರಲಿ, ಮಾಲಿನ್ಯವನ್ನು ತಡೆಗಟ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

 -ಸೌಮ್ಯಾ ಸಾಲಿಯಾನ್‌

ಎಂಪಿಎಂ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next