Advertisement

ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ

11:35 PM Feb 26, 2020 | Lakshmi GovindaRaj |

ಬೆಂಗಳೂರು: ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೌರತ್ವ ಕಾಯ್ದೆ ವಿರೋಧಿಸುವವರು ಕೇಂದ್ರ ಸರ್ಕಾರ ಸಮಾನತೆಯ ವಿರುದ್ಧ ಇದೆ.

Advertisement

ದೇಶದಲ್ಲಿ ಎಲ್ಲರನ್ನೂ ಸಮಾನರಾಗಿ ನೋಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅವರ ಬೇಡಿಕೆಯೂ ಸಮಾನ ನಾಗರಿಕ ಕಾಯ್ದೆ ಜಾರಿಯಾಗ ಬೇಕೆನ್ನುವುದಿದೆ. ನಮ್ಮ ಬೇಡಿಕೆಯೂ ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೊಳ್ಳಬೇಕು ಎನ್ನುವುದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆದಷ್ಟು ಬೇಗ ಏಕ ರೂಪ ನಾಗರಿಕ ಕಾನೂನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸ್ಥಾಪನೆಯಾದಾಗಿನಿಂದಲೂ ಏಕರೂಪ ನಾಕಗರಿ ಸಂಹಿತೆ ಜಾರಿಯಾಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಪಕ್ಷದ ಪ್ರಾಣಳಿಕೆಯಲ್ಲಿಯೂ ಪ್ರಸ್ತಾಪ ಮಾಡಿದ್ದೇವೆ. ಏಕರೂಪ ನಾಗರಿಕ ಸಂಹಿತೆ ಗರ್ಭಾವಸ್ಥೆಯಲ್ಲಿದ್ದು, ಶೀಘ್ರವೇ ಜನನವಾಗಲಿದೆ ಎಂದರು.

ದೇಶದಲ್ಲಿ ಪೌರತ್ವ ವಿರೋಧಿ ಕಾಯ್ದೆ ಹಿಂಸಾರೂಪ ತಾಳಿರುವುದು ದುರದೃಷ್ಟಕರ. ಸಾವು ಯಾರದೇ ಆದರೂ ಅದು ನೋವಿನ ಸಂಗತಿ ಇದರ ಹಿನ್ನೆಲೆಯ ಬಗ್ಗೆ ಸತ್ಯಾಸತ್ಯತೆ ತಿಳಿಯುವ ಬಗ್ಗೆ ಅಗತ್ಯ ತನಿಖೆ ಆಗಬೇಕು. ಈ ಹೋರಾಟದ ಹಿಂದೆ ದೇಶ ಒಡೆಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.

ದೇಶಕ್ಕೆ ಹೊರಗಿನಿಂದ ಬರುವ ನಿರಾಶ್ರಿತರಿಗೆ ಅವಕಾಶ ನೀಡಲು ಕೇಂದ್ರ ಯತ್ನಿಸುತ್ತಿದ್ದೆ. ಈ ಹಿಂದೆಯೇ ನುಸುಳುಕೋರರು ಮತ್ತು ನಿರಾಶ್ರತಿತರ ನಡುವೆ ಜನರು ವ್ಯತ್ಯಾಸ ತಿಳಿಯಬೇಕು. ಅರ್ಥ ಅನರ್ಥವಾದರೆ ದೇಶದಲ್ಲಿ ಅಂತರ್‌ ಯುದ್ಧ ನಡೆಯುತ್ತದೆ. ಇದರಲ್ಲಿ ಕೆಲವರು ಗೊತ್ತಿಲ್ಲದೇ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ಗೊತ್ತಿದ್ದು ಈ ರೀತಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

ಇದು ಕೇವಲ ಕಾಂಗ್ರೆಸ್‌ನಿಂದ ದೇಶ ಒಡೆಯುವ ಕೆಲಸವಾಗಿದೆ. ಸಿದ್ದರಾಮಯ್ಯ ಅಮಾಯಕರಲ್ಲ ರಮೇಶ್‌ಕುಮಾರ್‌ ಏನೂ ಗೊತ್ತಿಲ್ಲದವರಲ್ಲ. ಇವರು ತಾತ್ಕಾಲಿಕ ಲಾಭಕ್ಕಾಗಿ ಈ ದೇಶ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಕಾಂಗ್ರೆಸ್‌ ವಾಸ್ತವವನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದರು. ಅಮೇರಿಕಾ ಅಧ್ಯಕ್ಷರು ಭೇಟಿ ನೀಡಿದ ವೇಳೆ ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದರು.

ಕ್ಯಾಸಿನೋ ತೆರೆಯುವ ಪ್ರಸ್ತಾಪ ಇಲ್ಲ: ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಪ್ರಸ್ತಾಪವೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಎಫ್ಕೆಸಿಸಿಐ ಕಾರ್ಯಕ್ರಮದಲ್ಲಿ ಸಭಿಕರು ಕೇಳಿದ್ದ ಪ್ರಶ್ನೆಗೆ ಶ್ರೀಲಂಕಾ ಹಾಗೂ ಗೋವಾದಲ್ಲಿ ಇರುವ ವ್ಯವಸ್ಥೆಯ ಪ್ರಸ್ತಾಪ ಮಾಡಿದ್ದೆ. ಆಗಲೂ ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟ ಪಡಿಸಿದ್ದೆ. ಆದರೂ, ಕೆಲವರು ಅದನ್ನೇ ಇಟ್ಟುಕೊಂಡು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಕೆಲವರು ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next