Advertisement

Kota ಸೌಹಾರ್ದ ಸಂಸ್ಥೆಗಳು ಸಹಕಾರಿ ಇಲಾಖೆಗೆ ಒಳಪಡಲಿ

11:56 PM Oct 24, 2023 | Team Udayavani |

ಕೋಟ: ಸೌಹಾರ್ದ ಸಹಕಾರಿ ಸಂಸ್ಥೆಗಳು ಇಚ್ಛೆ ಬಂದಂತೆ ಠೇವಣಿಗೆ ಬಡ್ಡಿ ನೀಡುತ್ತಿವೆ. ಇದರಿಂದ ಸಹಕಾರಿ ವ್ಯವಸ್ಥೆಗೇ ಕೆಟ್ಟ ಹೆಸರು ಬರುತ್ತಿದ್ದು, ಅವುಗಳನ್ನು ಸಹಕಾರಿ ಇಲಾಖೆಯಡಿ ತಂದು ನಿರ್ದಿಷ್ಟ ನಿಯಮಗಳನ್ನು ವಿಧಿಸಬೇಕು. ಈ ಕುರಿತ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದರು.

Advertisement

ಅವರು ಗಿಳಿಯಾರಿನಲ್ಲಿ ನಡೆದ ಕೋಟ ಸಹಕಾರಿ ವ್ಯಾವಸಾಯಿಕ ಸಂಘದ 9ನೇ ಸ್ವಂತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.

ಪಂ.ಗೊಂದು ಸಹಕಾರಿ ಮಾರಕ ಕೇಂದ್ರ ಸರಕಾರ ಪ್ರತೀ ಗ್ರಾ.ಪಂ.ಗೆ ಒಂದರಂತೆ ಸಹಕಾರಿ ಸಂಘಗಳನ್ನು ತೆರೆಯುವ ಆದೇಶ ನೀಡಿದೆ.ಆದರೆ ಈ ವ್ಯವಸ್ಥೆಯಿಂದ ಸದೃಢವಾಗಿರುವ ಸಹಕಾರಿ ಸಂಸೆªಗಳು ಬಲ ಹೀನವಾಗುತ್ತವೆ. ಈ ಬಗ್ಗೆ ಕಾನೂನು ಹೋರಾಟ ಚಾಲ್ತಿಯಲ್ಲಿದೆ ಎಂದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ನೂತನ ಗೋದಾಮು ಉದ್ಘಾಟಿಸಿದರು.ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಭದ್ರತಾ ಕೊಠಡಿ, ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಜೋರಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್‌ ಕುಮಾರ್‌ ವಸತಿ ಸಂಕೀರ್ಣ ಲೋಕಾರ್ಪಣೆಗೊಳಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಾ| ಐ. ದೇವಿಪ್ರಸಾದ್‌ ಶೆಟ್ಟಿ ಚೆಕ್‌ ಹಸ್ತಾಂತರಿಸಿದರು. ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌ ಸುತ್ತುನಿಧಿ ಹಸ್ತಾಂತರಿಸಿದರು. ಸಹಕಾರಿ ಧುರೀಣ ಜಯಕರ ಶೆಟ್ಟಿ ಇಂದ್ರಾಳಿ ಗಣಕ ಯಂತ್ರಕ್ಕೆ ಚಾಲನೆ ನೀಡಿದರು.

Advertisement

ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಕಿರಣ್‌ ಕುಮಾರ್‌ ಕೊಡ್ಗಿ, ನಿವೃತ್ತ ವ್ಯವಸ್ಥಾಪಕ ಶ್ರೀಧರ ಸೋಮ
ಯಾಜಿ, ಮಾಜಿ ನಿರ್ದೇಶಕರಾದ ಅಶೋಕ್‌ ಕುಮಾರ್‌ ಶೆಟ್ಟಿ, ಜಿ. ಭರತ್‌ ಕುಮಾರ್‌ ಶೆಟ್ಟಿ, ಪ್ರಶಾಂತ್‌ ಕುಮಾರ್‌ ಶೆಟ್ಟಿ, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್‌ ಕುಮಾರ್‌ ಶೆಟ್ಟಿ, ಕಟ್ಟಡದ ಎಂಜಿನಿಯರ್‌ ಚೇತನ್‌, ಗುತ್ತಿಗೆದಾರ ಪ್ರಮೋದ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ್‌ ಕುಮಾರ್‌ ಶೆಟ್ಟಿ, ಮಹೇಶ್‌ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಎಂ. ಶಿವರಾಮ ಶೆಟ್ಟಿ, ಹೊನ್ನಾರಿ ಬೊಬ್ಬರ್ಯ ದೇವಸ್ಥಾನದ ಮೊಕ್ತೇಸರ ಮಹಾಬಲ ಹೇಳೆì, ಕೋಟ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೇವಾಡಿಗ, ನಿರ್ದೇಶಕರಾದ ಡಾ| ಕೃಷ್ಣ ಕಾಂಚನ್‌, ಕೊತ್ತಾಡಿ ಉದಯ ಶೆಟ್ಟಿ, ಮಹೇಶ್‌ ಶೆಟ್ಟಿ, ರವೀಂದ್ರ ಕಾಮತ್‌, ರಾಜೇಶ್‌ ಉಪಾಧ್ಯ, ನಾಗರಾಜ ಹಂದೆ, ಗೀತಾ ಶಂಭು ಪೂಜಾರಿ, ರಂಜಿತ್‌ ಕುಮಾರ್‌, ಪ್ರೇಮ ಎಸ್‌., ರಶ್ಮಿತಾ, ಶ್ರೀಕಾಂತ್‌ ಶೆಣೈ, ಭಾಸ್ಕರ ಶೆಟ್ಟಿ, ಅಚ್ಯುತ್‌ ಪೂಜಾರಿ, ವಲಯ ಮೇಲ್ವಿಚಾರಕ ರಾಜಾರಾಮ್‌ ಶೆಟ್ಟಿ, ಶಾಖೆ ವ್ಯವಸ್ಥಾಪಕ ಉಮೇಶ್‌ ಮೊದಲಾದವರಿದ್ದರು. ಶಾಖಾ ಸಭಾಪತಿ ಟಿ. ಮಂಜುನಾಥ ಸ್ವಾಗತಿಸಿ, ಸತೀಶ್‌ ಶೆಟ್ಟಿ ನಿರೂಪಿಸಿದರು. ಸಿಇಒ ಶರತ್‌ ಕುಮಾರ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next