Advertisement

ಜನತೆಗೆ ಅನ್ಯಾಯವಾಗದಂತೆ ಉದ್ಯಮ ಬರಲಿ: ಅಮೀನ್‌

12:11 AM Jul 17, 2022 | Team Udayavani |

ಮುಂಬಯಿ: ಕರಾವಳಿ ಜಿಲ್ಲೆಗಳು ಅಭಿವೃದ್ಧಿಯಾಗಬೇಕು, ಪರಿಸರ ಮಾಲಿನ್ಯ ರಹಿತ ಉದ್ಯಮಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು, ಕೃಷಿ ಭೂಮಿ ನಾಶವಾಗದೆ ಗ್ರಾಮಗಳ ಅಭಿವೃದ್ಧಿಯಾಗಬೇಕು ಎಂಬುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದ.ಕ. ಜಿಲ್ಲೆ ಯ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತ ಯಶಸ್ಸನ್ನು ಪಡೆದಿದೆ ಎಂದು ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಅಧ್ಯಕ್ಷ ಎಲ್‌.ವಿ. ಅಮೀನ್‌ ತಿಳಿಸಿದರು.

Advertisement

ಕುರ್ಲಾದ ಬಂಟರ ಭವನದಲ್ಲಿ ನಡೆದ ಕರಾವಳಿ ಕರ್ನಾಟಕದ ಮಾಲಿನ್ಯ ನಿಯಂತ್ರಿಸಿ ಕೈಗಾರಿಕೀಕರಣ-ವಿಚಾರ ವಿನಿಮಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರವು ಇದೀಗ ಉಳೆಪಾಡಿ ಗ್ರಾಮದ ಸುತ್ತಲಿನ ಜಾಗವನ್ನು ಉದ್ಯಮ ಕ್ಕಾಗಿ ಸ್ವಾಧೀನಪಡಿಸಿ ಕೊಳ್ಳಲು ಪ್ರಾರಂಭಿಸಿದೆ. ಕೈಗಾರಿಕೆಗಳು ಬರಬೇಕು, ಆದರೆ ಮಾಲಿನ್ಯ ರಹಿತ ಉದ್ಯಮವನ್ನು ಬೆಂಬಲಿಸೋಣ. ಭೂಮಿ ತೆರವು ಮಾಡಿದಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಬೇಕು, ಉದ್ಯೋಗ ನೀಡಬೇಕು. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಮಂಗಳೂರಿನ ಬಳ್ಕುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮದ 1,091 ಎಕ್ರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಯೋಜನೆಗಾಗಿ ಸ್ವಾಧೀನ ಪ್ರಕ್ರಿಯೆ ಬಗ್ಗೆ ಮುಂಬಯಿ ಮಹಾನಗರ ಹಾಗೂ ಉಪನಗರಗಳ ವಿವಿಧ ಸಂಘ- ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಯಿತು.

ಮುಂದಿನ ಜನಾಂಗದ ಬಗ್ಗೆ ಚಿಂತಿಸಬೇಕು: ಜಯಕೃಷ್ಣ ಶೆಟ್ಟಿ
ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮಾತನಾಡಿ, ಕೈಗಾರಿಕೆಗಾಗಿ ವಶಪಡಿಸುತ್ತಿರುವ ಕೊಲ್ಲೂರು ಹಾಗೂ ಉಳೆಪಾಡಿಯ ಜಾಗ ಮಾಲಿನ್ಯರಹಿತವಾಗಿ ಉದ್ಯೋಗಾವಕಾಶದೊಂದಿಗೆ ಪ್ರಯೋಜನಕಾರಿ ಆಗಲಿ ಎಂದರು.

Advertisement

ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್‌ ಸ್ವಾಗತಿಸಿದರು. ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್‌ ಪ್ರಸ್ತಾವನೆಗೈದರು. ಸಮಿತಿಯ ಮಾಜಿ ಅಧ್ಯಕ್ಷ ಸುಭಾಷ್‌ ಬಿ. ಶೆಟ್ಟಿ, ಧರ್ಮಪಾಲ ದೇವಾಡಿಗ, ಹರೀಶ್‌ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರಾದ ಧನಂಜಯ ಶೆಟ್ಟಿ, ಐ.ಆರ್‌. ಶೆಟ್ಟಿ, ಜತೆ ಕೋಶಾಧಿಕಾರಿ ಸಂಜೀವ ಪೂಜಾರಿ, ಜತೆ ಕಾರ್ಯದರ್ಶಿ ಹ್ಯಾರೀ ಸಿಕ್ವೇರಾ, ಗೌರವ ಪ್ರ. ಕಾರ್ಯದರ್ಶಿ ಆರ್‌.ಕೆ. ಶೆಟ್ಟಿ, ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಕೆ.ಎಲ್ ಬಂಗೇರ, ಎನ್‌. ಟಿ. ಪೂಜಾರಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಕೃಷ್ಣಕುಮಾರ್‌ ಬಂಗೇರ, ಚಂದ್ರಶೇಖರ ಬೆಳ್ಚಡ, ಜಿ.ಟಿ. ಆಚಾರ್ಯ, ಹರೀಶ್‌ ಶೆಟ್ಟಿ, ಸುರೇಶ್‌ ಕುಮಾರ್‌, ಹಿರಿಯಡ್ಕ ಮೋಹನ್‌ದಾಸ್‌, ಗಿರೀಶ್‌ ಸಾಲ್ಯಾನ್‌, ಪುರುಷೋತ್ತಮ್‌ ಕೋಟ್ಯಾನ್‌, ರಾಮಚಂದ್ರ ಗಾಣಿಗ, ಲೀಲಾಧರ ಶೆಟ್ಟಿಗಾರ್‌,ಜಿತೇಂದ್ರ ಗೌಡ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಸದಾನಂದ ಸಫಲಿಗ,ಭುಜಂಗ ಶೆಟ್ಟಿ, ಡಾ| ವಿಜಯಕುಮಾರ್‌ ಶೆಟ್ಟಿ, ಪದ್ಮನಾಭ ಸಸಿಹಿತ್ಲು, ರಾಕೇಶ್‌ ಭಂಡಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next