Advertisement

ಕೇಂದ್ರ ರೈತರ ಸಾಲಮನ್ನಾ ಮಾಡಲಿ 

11:29 AM Nov 10, 2017 | Team Udayavani |

ಮೈಸೂರು: ಕೇಂದ್ರದ ಬಿಜೆಪಿ ಸರ್ಕಾರ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡಬೇಕು ಎಂದು ರೈತ ಸಂಘದ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು. 

Advertisement

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಹೊರವಲಯದ ಹೂಟಗಳ್ಳಿ ಸಂತೆ ಮೈದಾನದಲ್ಲಿ ಗುರುವಾರ ನಡೆದ ರೈತರ ಸಾಲಮನ್ನಾಕ್ಕೆ ಅರ್ಜಿ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಎದುರಾಗಿರುವ ಭೀಕರ ಬರಗಾಲ ಹಾಗೂ ಇನ್ನಿತರ ಕಾರಣದಿಂದಾಗಿ ರೈತರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಈ ನಡುವೆ ರೈತರು ಬೆಳೆದ ಬೆಲೆಗಳಿಗೆ ಸರಿಯಾದ ಬೆಲೆನಿಗದಿ ಆಗದಿರುವುದೂ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದರು.

 ಎಂ.ಎಸ್‌.ಸ್ವಾಮಿನಾಥನ್‌ ವರದಿ ಆಧರಿಸಿ ಸಿ ಪ್ಲಸ್‌-50 ಬೆಲೆ ನಿಗದಿ ಮಾಡಲಾಗಿದೆ. ಆದರೆ, ನಮ್ಮ ರಾಗಿ ಬೆಳೆಗೆ ಕ್ವಿಂಟಾಲ್‌ಗೆ 6 ಸಾವಿರ ನೀಡಬೇಕಿದ್ದು, ಮಾರುಕಟ್ಟೆಯಲ್ಲಿ ಕೇವಲ 2 ಸಾವಿರ ರೂ.ಗೆ ರಾಗಿ ಮಾರಾಟವಾಗುತ್ತಿದೆ.

ಇದು ರೈತರನ್ನು ಬೀದಿ ಪಾಲಾಗುವಂತೆ ಮಾಡಿದೆ. ಈ ಎಲ್ಲಾ ಕಾರಣದಿಂದ ಕೇಂದ್ರದ ಮೋದಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆ ತೆರೆದು ನೋಡುವ ಮೂಲಕ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಬಡ್ಡಿ ರಹಿತ ಸಾಲ ನೀಡಬೇಕೆಂದು ಒತ್ತಾಯಿಸಿದರು.

Advertisement

ರೈತರಿಗೆ ಸಾಲ ನೀಡಿರುವ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡಿ ಹಣ ವಸೂಲಿ ಮಾಡುತ್ತಿವೆ. ಪ್ರತಿಯೊಬ್ಬರೂ ಬೆಳೆ ನಷ್ಟವನ್ನು ಭರಿಸಬೇಕಿದೆ. 7ನೇ ವೇತನ ಆಯೋಗದ ಪರಿಷ್ಕರಣೆ ನಂತರ ಒಬ್ಬ ಸರ್ಕಾರಿ ನೌಕರರ ವೇತನ ದುಪ್ಪಟ್ಟಾಗಿದೆ.

ಇನ್ನೂ ಮೆಕ್ಕೆ ಜೋಳಕ್ಕೆ  ಸರ್ಕಾರ 1420 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದರೆ, ಮಾರುಕಟ್ಟೆಯಲ್ಲಿ ರೈತರಿಗೆ ಕೇವಲ 900 ರೂ. ನೀಡಲಾಗುತ್ತಿದೆ. ಉಳಿದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಹೀಗಾಗಿ ಕೂಡಲೇ 15 ವರ್ಷದಲ್ಲಿ ಸರ್ಕಾರ ಎಷ್ಟು ಕೋಟಿ ರೈತರ ಸಾಲಮನ್ನಾ ಮಾಡಿದೆ ಎಂಬ ಅಂಕಿ ಅಂಶವನ್ನು ಬಿಡುಗಡೆಗೊಳಿಸಬೇಕಿದೆ ಎಂದರು.

 ರಾಜ್ಯ ರೈತ ಸಂಘಟನಾ ಕಾರ್ಯದರ್ಶಿ ಶಿವಪ್ಪ ಕೋಲಾರ, ಬೆಂಗಳೂರು ನಗರ ಹಸಿರು ಸೇನೆ ಮುಖಂಡ ಗೋಪಿನಾಥ್‌, ಜಿಲ್ಲಾಧ್ಯಕ್ಷ ಕೃಷ್ಣಕುಮಾರ್‌, ಹುಣಸೂರು ತಾಲೂಕು ಅಧ್ಯಕ್ಷ ಹೆಗ್ಗಂದೂರು ಬೆಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಕುಮಾರ್‌ ಬೋವಿ, ತಾಲೂಕು ಗೌರವಾಧ್ಯಕ್ಷ ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂತನ್‌ ಕುಮಾರ್‌, ಹುಣಸೂರು ತಾಲೂಕು ಮಹಿಳಾ ಅಧ್ಯಕ್ಷೆ ನಿಂಗಮ್ಮ, ಬಸನೇಗೌಡ ಹಮ್ಮಿಗೆ, ರಾಜಪ್ಪ ಹೆಗ್ಗಂದೂರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next