Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ನಿಗಮದ ಹಣ ಬೇರೆ ಖಾತೆಗೆ ವರ್ಗಾವಣೆ ಆಯಿತೆಂದು ಸರ್ಕಾರ ಹೇಳಿಲ್ಲ. ಈ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಲ್ಲಿ ಈ ಹಗರಣ ಮುಚ್ಚಿ ಹೋಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದರು.
Related Articles
Advertisement
ಕೇರಳದಲ್ಲಿ ನನ್ನ ವಿರುದ್ಧ ಭೈರವಿ ಯಾಗ ಪೂಜೆ ಮಾಡುತ್ತಿದ್ದಾರೆಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರಕ್ರಿಯೆಯಿಸಿದ ಅವರು, ನೀವು ಸರಿಯಾಗಿದ್ದರೆ ಯಾಕೆ ಆಗತ್ತದೆ. ದೇವರು ಇರುವುದು ಆಶೀರ್ವಾದ ಮಾಡುವುದಕ್ಕೆ. ಯಾವುದೇ ಕೆಡುಕು ಮಾಡುವುದಕ್ಕೆ ಅಲ್ಲ. ನಾನು ಗೆಲ್ಲಲಿ ಅಂತಾ ಪೂಜೆ ಮಾಡುತ್ತೇವೆ. ಮತ್ತೊಬ್ಬರು ಸೋಲಲಿ ಅಂತಾ ಪೂಜೆ ಮಾಡಿದರೆ ದೇವರು ಮಾನ್ಯ ಮಾಡಲ್ಲ ಎಂದರು.
ಸಂಸದ ಪ್ರಜ್ವಲ ರೇವಣ್ಣ ಕ್ಷಮಿಸಲಾರದಂತಹ ತಪ್ಪು ಮಾಡಿದ್ದು, ಹೀಗಾಗಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರನ್ನು ಎಸ್ಐಟಿ ಕಸ್ಟಡಿಗೆ ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ದೇಶದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಹೇಸಿಗೆ ಹುಟ್ಟಿಸುವಂತಾಗಿದೆ. ಮನಸ್ಸಿಗೆ ಕಿರಿಕಿರಿ ಆಗುತ್ತಿದೆ. ಅದನ್ನು ಅತ್ಯಂತ ಕಟ್ಟುನಿಟ್ಟಾಗಿ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯಿದೆ. ತ್ವರಿತ ಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು ಎಂದರು.
ಪ್ರಜ್ವಲ ಕ್ಷಮೆಗೆ ಅರ್ಹರಲ್ಲ: ಪ್ರಜ್ವಲ ರೇವಣ್ಣ ಕ್ಷಮೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡಲು ಆಗುತ್ತದೆಯೇ? ಯಾಕೆ ಕ್ಷಮೆ ಕೇಳಿದರೆಂದು ಅವರು ಉತ್ತರ ಕೊಡಲಿ, ಕ್ಷಮೆ ಕೇಳುವುದಿದ್ದರೂ ಸಂತ್ರಸ್ತರ ಕ್ಷಮೆ ಕೇಳಲಿ. ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಯಾಗಲೆಬೇಕು. ಪೆನ್‌ಡ್ರೈವ್ ಹಂಚಿಕೆ ಇತ್ಯಾದಿಗಳನ್ನು ನೋಡಿದಾಗ ಪ್ರಜ್ವಲ ಕ್ಷಮೆಗೆ ಅರ್ಹರಲ್ಲ ಎಂದರು.