Advertisement
ನಗರದ ಗವಿಮಠದ ಆವರಣದಲ್ಲಿ ಲಿಂ| ಮರಿಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆ ಪ್ರಯುಕ್ತ 5000 ವಿದ್ಯಾರ್ಥಿಗಳ ವಸತಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಸಚಿವ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ನಾಪೂರ, ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕೆ. ಶರಣಪ್ಪ, ಮುಖಂಡರಾದ ಸಿ.ವಿ. ಚಂದ್ರಶೇಖರ, ಅಮರೇಶ ಕರಡಿ, ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್, ಜಿಪಂ ಸಿಇಒ ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಹಲವರು ಇದ್ದರು.
ಗುರುಗಳ ಅವಧಿಯಲ್ಲಿ ಗವಿಮಠದ ಗದ್ದುಗೆಯಲ್ಲಿ ನಡೆದ ಘಟನೆ ಸ್ಮರಿಸುತ್ತ, ಯಾರೋ ಭಕ್ತರೊಬ್ಬರು ಮಠದ ಗದ್ದುಗೆ ಕಟ್ಟೆ ಮೇಲಿನ ಆರತಿ ತಟ್ಟೆಗೆ ಮೀಸಲು ತುಪ್ಪ ಹಾಕಿದ್ದರಂತೆ. ಆ ಭಕ್ತರು ಗುಡ್ಡಕ್ಕೆ ಮೇಲೆ ಹೋಗಿ ಬರುವುದರೊಳಗೆ ಮಠದ ಮಕ್ಕಳು ತುಪ್ಪ ತೆಗೆದುಕೊಂಡು ಊಟ ಮಾಡಿದ್ದರಂತೆ. ಆಗ ಭಕ್ತರು ಶ್ರೀಗಳಿಗೆ ನಿಮ್ಮ ಮಠದ ಮಕ್ಕಳು ತುಪ್ಪ ತಿಂದಿದ್ದಾರೆ. ಅವರಿಗೆ ಸಂಸ್ಕಾರ ಇಲ್ಲ. ಅಂತಹ ಮಕ್ಕಳನ್ನು ಮಠ ಬಿಡಿಸಿ ಎಂದರಂತೆ. ಆಗ ಶ್ರೀಗಳು ಭಕ್ತರಿಗೆ ಹೇಳಿದರಂತೆ, ನೀವು ಆರುವ ದೀಪಕ್ಕೆ ತುಪ್ಪ ಹಾಕಿರುವಿರಿ. ಮಕ್ಕಳು ಅದನ್ನು ಊಟ ಮಾಡಿದ್ದಾವಲ್ಲ, ಆರದ ದೀಪಕ್ಕೆ ನೀವು ತುಪ್ಪ ಹಾಕಿದ್ದೀರಿ. ಮಕ್ಕಳು ಆರದ ದೀಪಗಳಾಗಿವೆ ಎಂದಿದ್ದರಂತೆ. ಅಂತಹ ಪುಣ್ಯ ಪುರುಷನ ಪುಣ್ಯಸ್ಮರಣೋತ್ಸವ ನಡೆದಿದೆ ಎಂದು ಹಿಂದಿನ ಶ್ರೀಗಳ ಸೇವೆ ನೆನೆದು ಗದ್ಗದಿತರಾದರು.